Connect with us


      




ಆರೋಗ್ಯ

ಮಹಾರಾಷ್ಟ್ರ ; ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ

Kumara Raitha

Published

on

ಮುಂಬೈ: ಜೂನ್‌ ೦೪ (ಯು.ಎನ್.‌ಐ.)  ರೈಲು, ಬಸ್ಸುಗಳು, ಚಿತ್ರಮಂದಿರಗಳು, ಸಭಾಂಗಣಗಳು, ಕಚೇರಿಗಳು, ಆಸ್ಪತ್ರೆಗಳು, ಕಾಲೇಜುಗಳು, ಶಾಲೆಗಳು ಮುಂತಾದ ಮುಚ್ಚಿದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ರಾಜ್ಯ ಸಾರ್ವಜನಿಕ ಆರೋಗ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ವ್ಯಾಸ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ವ್ಯಾಸ್ ಅವರು ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಮತ್ತು ಆಸ್ಪತ್ರೆಯ ದಾಖಲಾತಿಯನ್ನು ಕನಿಷ್ಠ ಮಟ್ಟಕ್ಕೆ ಇರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾಗರಿಕ ಮತ್ತು ಜಿಲ್ಲಾಡಳಿತವನ್ನು ಕೋರಿದ್ದಾರೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿದ  ನಂತರ ವ್ಯಾಸ್ ಅವರು ಆದೇಶ ಹೊರಡಿಸಿದ್ದಾರೆ.  ರಾಜ್ಯದಲ್ಲಿ ಕಟ್ಟುನಿಟ್ಟಾದ ನಿಗಾ ಇರಿಸಲು ಮತ್ತು ಹೊಸ  ಸೋಂಕಿನ ಹರಡುವಿಕೆಯನ್ನು ತಡೆಯಲು ಪೂರ್ವಭಾವಿ ಕ್ರಮವನ್ನು ತೆಗೆದುಕೊಳ್ಳುವಂತೆ ಕೇಂದ್ರ ಹೇಳಿದೆ.

ಪುನರಾವರ್ತಿತ ಸೂಚನೆಗಳ ಹೊರತಾಗಿಯೂ ಗಣನೀಯವಾಗಿ ಕಡಿಮೆಯಾದ ಕೋವಿಡ್‌ ೧೯ ಪರೀಕ್ಷೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ತಕ್ಷಣವೇ ಹೆಚ್ಚಿಸಬೇಕು . ತಕ್ಷಣವೇ ಜಾರಿಗೆ ಬರುವಂತೆ RY-PCR ಪರೀಕ್ಷೆಗಳನ್ನು ಹೆಚ್ಚಿಸಲು ಅವರು ಸೂಚಿಸಿದ್ದಾರೆ.

ಜನರಿಗೆ ಜ್ವರ ಮತ್ತು ಉಸಿರಾಟದ ಸೋಂಕಿನ ಚಿಹ್ನೆಗಳು ಇದ್ದಲ್ಲಿ  ಕೋವಿಡ್‌ ೧೮ ಪರೀಕ್ಷೆಗೆ ಒಳಗಾಗಬೇಕು. ಇದಲ್ಲದೆ, ಮುಚ್ಚಿದ ಸಾರ್ವಜನಿಕ ಸ್ಥಳಗಳಾದ ರೈಲುಗಳು, ಬಸ್‌ಗಳು, ಚಿತ್ರಮಂದಿರಗಳು, ಸಭಾಂಗಣಗಳು, ಕಚೇರಿಗಳು, ಆಸ್ಪತ್ರೆಗಳು, ಕಾಲೇಜುಗಳು ಮತ್ತು ಶಾಲೆಗಳಲ್ಲಿ ಮಾಸ್ಕ್ ಧರಿಸುವುದು ಅತ್ಯಗತ್ಯ.

ಕೋವಿಡ್‌ ೧೯ ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸಲು ನಾಗರಿಕ ಮತ್ತು ಜಿಲ್ಲಾಡಳಿತಗಳಿಗೆ  ವ್ಯಾಸ್ ಸೂಚಿಸಿದ್ದಾರೆ.  ಇದು ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಂಭವನೀಯ ಸಾವುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ”ಲಸಿಕೆ ಹಿಂಜರಿಕೆ ಹೆಚ್ಚಿರುವ ಸಮುದಾಯಗಳು ಜಾಗೃತಿ ಅಭಿಯಾನಗಳಿಗೆ ಆದ್ಯತೆ ನೀಡಬೇಕು, ನಿರ್ದಿಷ್ಟವಾಗಿ ಪರಸ್ಪರ ಸಂವಹನ ವಿಧಾನಗಳನ್ನು ಬಳಸಬೇಕು, ಮುನ್ನೆಚ್ಚರಿಕೆ ಪ್ರಮಾಣವನ್ನು ಉತ್ತೇಜಿಸಬೇಕು ಮತ್ತು ತ್ವರಿತಗೊಳಿಸಬೇಕು. 12-18 ವರ್ಷ ವಯಸ್ಸಿನ ಯುವಜನರಲ್ಲಿ ಕೋವಿಡ್ 19 ಲಸಿಕೆ ಕವರ್ ಅನ್ನು ಸುಧಾರಿಸಬೇಕಾಗಿದೆ,” ಎಂದು ಅವರು ಹೇಳಿದ್ದಾರೆ.

Share