Published
6 months agoon
By
UNI Kannadaಗುಂಡೂರು: ಜನವರಿ 03 (ಯು.ಎನ್.ಐ.) ಗುಂಟೂರು ಜಿಲ್ಲೆಯ ದುರ್ಗಿ ಗ್ರಾಮದಲ್ಲಿ ಎನ್ಟಿಆರ್ ಪ್ರತಿಮೆಯನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದ ನಂದಮೂರಿ ಕುಟುಂಬ ಮತ್ತು ತೆಲುಗುದೇಶಂ ಮುಖಂಡರು, ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತೆಲುಗು ದೇಶಂ ನಾಯಕ ಚಂದ್ರಬಾಬು ನಾಯ್ಡು ಅವರು ಡಿಜಿಪಿಗೆ ಪತ್ರ ಬರೆದಿದ್ದಾರೆ.
ಈ ದಾಳಿಗಳು ಪೂರ್ವನಿಯೋಜಿತವಾಗಿದ್ದು, ಮಹನೀಯರ ಪ್ರತಿಮೆಗಳನ್ನು ಧ್ವಂಸ ಮಾಡುತ್ತಿದ್ದರೆ ಪೊಲೀಸರು ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಷಡ್ಯಂತ್ರದ ಭಾಗವಾಗಿ ವೈಎಸ್ಆರ್ ಪಕ್ಷದ ಸೆಟ್ಟಿಪಲ್ಲಿ ಯಲಮಂಡ ಎನ್ಟಿಆರ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸಿದರೆ ಜನರಲ್ಲಿ ದಂಗೆ ಏಳುತ್ತಾರೆ. ರಾಜ್ಯದಲ್ಲಿ 2019ರ ಜೂನ್ನಿಂದ ಆಡಳಿತಾರೂಢ ವೈಎಸ್ಆರ್ ಪಕ್ಷದ ನಾಯಕರ ಪ್ರಚೋದನೆಯಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ. ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಪ್ರಯತ್ನದಲ್ಲಿ ಆಡಳಿತ ಪಕ್ಷವು ದರೋಡೆಕೋರರನ್ನು ಉತ್ತೇಜಿಸುತ್ತಿದೆ ಮತ್ತು ಎನ್ಟಿಆರ್ ಮತ್ತು ಅಂಬೇಡ್ಕರ್ ರಂತ ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ಧ್ವಂಸ ಮಾಡುತ್ತಿದೆ ಎಂದು ಆರೋಪಿಸಿದೆ.
ಇಂತಹ ವಿಧ್ವಂಸಕ ಕೃತ್ಯಗಳಿಗೆ ಪ್ರಚೋದನೆ ನೀಡುವಲ್ಲಿ ಪೊಲೀಸರು ದುಷ್ಕರ್ಮಿಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಅಭಿಪ್ರಾಯಪಟ್ಟಿದ್ದಾರೆ. ದೂರುಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು. ಪೊಲೀಸರ ಕಠಿಣ ಕ್ರಮಗಳಿಂದ ಮಾತ್ರ ಅಪರಾಧಗಳನ್ನು ತಡೆಯಲು ಸಾಧ್ಯ, ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಎನ್ಟಿಆರ್ ಪುತ್ರ ರಾಮಕೃಷ್ಣ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಸಂದರ್ಭದಲ್ಲಿ ತೆಲುಗಿನ ಆತ್ಮಗೌರವಕ್ಕೆ ಧಕ್ಕೆ ತರುವಂತಹ ಕೆಲಸಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ,ದಿವಂಗತ ನಂದಮೂರಿ ತಾರಕ ರಾಮರಾವ್ ತೆಲುಗಿನ ಮಹಾಪುರುಷ. ಇಂಥವರ ವಿಗ್ರಹವನ್ನು ಧ್ವಂಸ ಮಾಡಿರುವುದು ನಮ್ಮ ತೆಲುಗು ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!