Connect with us


      
ಕ್ರೀಡೆ

Ind Vs Sa ODI ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ…

Published

on

ಕೇಪ್‌ ಟೌನ್‌, ಜ 15 (ಯುಎನ್‌ ಐ) ಟೆಸ್ಟ್ ಸರಣಿಯ ಪರಾಭವದಿಂದ ಟೀಂ ಇಂಡಿಯಾ ನಿರಾಸೆಯಿಂದ ನಿರ್ಗಮಿಸಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಟ್ರೋಫಿಗೆ ಮುತ್ತಿಕ್ಕುವ ಕನಸು ನನಸಾಗಬೇಕೆಂದರೆ ಇನ್ನೊಂದು ಸರಣಿಯವರೆಗೂ ಕಾಯಬೇಕಿದೆ. ಆದರೆ, ಆಗಿದ್ದು ಆಗಿಹೋಗಿದೆ.. ಸೋಲುಗಳಿಂದ ಪಾಠ ಕಲಿತು ಮುನ್ನಡೆಯಬೇಕು. ಮತ್ತೊಂದು ಕಡೆ . .. ಜನವರಿ 19ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ ಸಜ್ಜುಗೊಳ್ಳುತ್ತಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ತಲುಪಿರುವ ಏಕದಿನ ತಂಡ ನೆಟ್ಸ್ ನಲ್ಲಿ ಬೆವರು ಸುರಿಸುತ್ತಿದೆ.

ಒಂದು ಕಡೆ ಶುಕ್ರವಾರ… ಮೂರನೇ ಟೆಸ್ಟ್ ನ ನಾಲ್ಕನೇ ದಿನ ಟೆಸ್ಟ್ ಸ್ಪೆಷಲಿಸ್ಟ್ ಗಳು ಆಟದಲ್ಲಿ ನಿರತರಾಗಿದ್ದರೆ… ಏಕ ದಿನ ಆಟಗಾರರು ಅಭ್ಯಾಸ ನಡೆಸಿದರು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಓಪನರ್ ಶಿಖರ್ ಧವನ್ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳ ಶೇರ್ ಮಾಡಿ… ಮೊದಲ ದಿನ… ಹುಡುಗರೊಂದಿಗೆ ಕಠಿಣ ತರಬೇತಿ ಎಂಬ ಶೀರ್ಷಿಕೆ ನೀಡಿದ್ದಾರೆ . ಭುವನೇಶ್ವರ್ ಕುಮಾರ್, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್ ಮತ್ತಿತರರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಪ್ರಸ್ತುತ ಇದು ವೈರಲ್ ಆಗುತ್ತಿದೆ.

ಆದರೆ ಏಕದಿನ ಸರಣಿಯ ಭಾಗವಾಗಿ ಜನವರಿ 19, 21 ಹಾಗೂ 23 ರಂದು ಮೂರು ಪಂದ್ಯಗಳ ವೇಳಾಪಟ್ಟಿ ಅಂತಿಮಗೊಳಿಸಲಾಗಿದೆ. ಇನ್ನೂ 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಭಾಗವಾಗಿ ಟೆಸ್ಟ್ ಸರಣಿ ಸೋತಿದ್ದರೂ, ಕೊಹ್ಲಿ ಪಡೆ ಏಕದಿನ ಸರಣಿಯಲ್ಲಿ (4-1) ಜಯಗಳಿಸಿತು. … ಈ ಬಾರಿ ಕೆಎಲ್ ರಾಹುಲ್ ನೇತೃತ್ವದ ತಂಡ ಎಷ್ಟರ ಮಟ್ಟಿಗೆ ಉತ್ತಮ ಪ್ರದರ್ಶನ ನೀಡುತ್ತಿದೆ ಎಂಬುದನ್ನು ಕಾದು ನೋಡಬೇಕು. ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಗಾಯದ ಕಾರಣ ತಂಡದಿಂದ ದೂರವಾಗಿರುವ ಹಿನ್ನಲೆಯಲ್ಲಿ ಪ್ರೋಟೀಸ್ ವಿರುದ್ಧದ ODI ಸರಣಿಗೆ ರಾಹುಲ್‌ ತಂಡದ ನಾಯಕತ್ವ ವಹಿಸಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ:
ಕೆಎಲ್ ರಾಹುಲ್ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಬ್ ಪಂತ್, ಇಶಾನ್‌ ಕಿಶನ್, ಯಜವೇಂದ್ರ ಚಾಹಲ್‌ , ಆರ್.‌ ಅಶ್ವಿನ್‌, ಭುವನೇಶ್ವರ ಕುಮಾರ್‌, ದೀಪಕ್‌ ಚಹರ್‌ ಕಿಶನ್ ಕುಮಾರ್, ಪ್ರಸಿದ್ದ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.

ಕ್ರೀಡೆ

ಆಸ್ಟ್ರೇಲಿಯಾ ಗಡಿಪಾರು; ದುಬೈಗೆ ಬಂದಿಳಿದ ಜೊಕೊವಿಕ್!

Published

on

ದುಬೈ : ಜನೆವರಿ 17 (ಯು.ಎನ್.ಐ.) ಆಸ್ಟ್ರೇಲಿಯಾ ಗಡಿಪಾರು ಮಾಡಿದ ಬಳಿಕ ನೊವಾಕ್ ಜೊಕೊವಿಕ್ ದುಬೈಗೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ಫೆಡರಲ್ ನ್ಯಾಯಾಲಯವು ಪಬ್ಲಿಕ್ ಗ್ರೌಂಡ್ಸ್ ಆಧಾರದ ಮೇಲೆ ಟೆನಿಸ್ ತಾರೆ ಜೊಕೊವಿಕ್ ವೀಸಾ ರದ್ದುಗೊಳಿಸಿರುವುದನ್ನು ಸರ್ವಾನುಮತದಿಂದ ಎತ್ತಿಹಿಡಿದಿತ್ತು. ಕೋರ್ಟ್ ತೀರ್ಪಿನ ಬಳಿಕ ಜೊಕೊವಿಕ್ ತಾನು ಅತ್ಯಂತ ನಿರಾಶೆಗೊಂಡಿದ್ದೇನೆ ಎಂದು ಹೇಳಿದ್ದರು.
ಅತ್ತ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ನಡೆಯುತ್ತಿದ್ದಂತೆ, ಇತ್ತ ಪುರುಷರ ಹಾಲಿ ಚಾಂಪಿಯನ್ ಆಗಿರುವ ಜೊಕೊವಿಕ್ ಎಮಿರೇಟ್ಸ್ ವಿಮಾನದ ಮೂಲಕ ಮಾಸ್ಕ್ ಧರಿಸಿ, 2 ಬ್ಯಾಗ್‌ಗಳನ್ನು ಹೊತ್ತುಕೊಂಡು ದುಬೈಗೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ನ ತೀರ್ಪಿನ ಬಳಿಕ ಅತ್ಯಂತ ನಿರಾಶಗೊಂಡಿದ್ದ ಜೊಕೊವಿಕ್, ಮೆಲ್ಬೋರ್ನ್‌ನ ಟುಲ್ಲಾಮರೀನ್ ವಿಮಾನ ನಿಲ್ದಾಣದಿಂದ ಎಮಿರೇಟ್ಸ್ ಫ್ಲೈಟ್ EK409 ಸ್ಥಳೀಯ ಸಮಯ ರಾತ್ರಿ 10:51ಕ್ಕೆ ದುಬೈಗೆ ಟೇಕ್ ಆಫ್ ಆದರು. ಆತನೊಂದಿಗೆ ಸಹಾಯಕರು ಹಾಗೂ ಅಧಿಕಾರಗಳು ಇದ್ದರು.
ಕಳೆದ 11 ದಿನಗಳಲ್ಲಿ ಎರಡು ಬಾರಿ ಆಸ್ಟ್ರೇಲಿಯಾದ ಸರ್ಕಾರವು ಜೊಕೊವಿಕ್ ಅವರ ವೀಸಾವನ್ನು ಕ್ಯಾನ್ಸಲ್ ಮಾಡಿ, ಬಂಧನದಲ್ಲಿರಿಸಿತ್ತು. ಕೊರೊನಾ ಲಸಿಕೆ ಪಡೆಯದೆ ನೊವಾಕ್ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಭಾಗವಹಿಸಲು ಪಟ್ಟು ಹಿಡಿದಿದ್ದರು. ಆದರೆ, ಆಸ್ಟ್ರೇಲಿಯಾ ಸರ್ಕಾರ ವ್ಯಾಕ್ಸಿನ್ ಪಡೆಯ ಜೊಕೊವಿಕ್ ಗೆ ಯಾವುದೇ ರೀತಿಯ ವಿನಾಯಿತಿ ನೀಡದೆ ವೀಸಾ ಕ್ಯಾನ್ಸಲ್ ಮಾಡಿತ್ತು. ಅಲ್ಲದೆ ಕೋರ್ಟ್ ನಲ್ಲಿ ಸೋಲು ಕಂಡ ನಂತರ ಆಸ್ಟ್ರೇಲಿಯಾ ಸರ್ಕಾರ ನೊವಾಕ್ ಅವರನ್ನು ಗಡಿಪಾರು ಮಾಡಿತ್ತು.

Continue Reading

ಕ್ರೀಡೆ

“ಅಹಂ ಬಿಟ್ಟು ವಿರಾಟ್ ಹೊಸ ನಾಯಕನನ್ನು ಬೆಂಬಲಿಸಬೇಕು” – ಕಪಿಲ್ ದೇವ್

Published

on

ಹೊಸದಿಲ್ಲಿ : ಜನೆವರಿ 16 (ಯು.ಎನ್.ಐ.) ವಿರಾಟ್ ಕೊಹ್ಲಿ ಶನಿವಾರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೊಹ್ಲಿ ಕೇವಲ ಟೆಸ್ಟ್ ತಂಡದ ನಾಯಕರಾಗಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಕೊಹ್ಲಿ ಭಾರತ ತಂಡದ ಸಾರಥ್ಯ ತೊರೆದಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವಕ್ಕ ಗುಡ್ ಬೈ ಹೇಳಿದ ಬಳಿಕ, ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕಠಿಣ ಶಬ್ದಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ಅಹಂ ಬಿಟ್ಟು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ ಎಂದಿದ್ದಾರೆ.
ವಿರಾಟ್ ನಿರ್ಧಾರಕ್ಕೆ ಸ್ವಾಗತ
ಮಿಡ್ ಡೇ ಆಂಗ್ಲ ಪತ್ರಿಕೆಯೊಂದಿಗೆ ಮಾತನಾಡಿದ ಕಪಿಲ್, ನಾಯಕತ್ವ ತೊರೆಯುವ ವಿರಾಟ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಟಿ-20 ತಂಡದ ನಾಯಕತ್ವವನ್ನು ತೊರೆದಾಗಿನಿಂದ ಕೋಹ್ಲಿ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತುಂಬಾ ಚಿಂತೆ ಹಾಗೂ ಒತ್ತಡದಲ್ಲಿ ವಿರಾಟ್ ಕೊಹ್ಲಿ ಕಾಣುತ್ತಿದ್ದರು. ಆದ್ದರಿಂತ ನಾಯಕತ್ವ ತ್ಯಜಿಸುವ ನಿರ್ಧಾರ ಕೈಗೊಳ್ಳುವುದರಿಂದ ಅವರು ಗ್ರೌಂಡ್ ನಲ್ಲಿ ಮುಕ್ತವಾಗಿ ಆಡಲು ಸಾಧ್ಯವಾಗುತ್ತದೆ ಎಂದರು.
ಕೊಹ್ಲಿಯಿಂದ ಯೋಚಿಸಿ ನಿರ್ಧಾರ
ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೊಹ್ಲಿ ಯೋಚಿಸಿರಬಹುದು ಎಂದು ಕಪಿಲ್ ಹೇಳಿದ್ದಾರೆ. “ವಿರಾಟ್ ಒಬ್ಬ ಪ್ರಬುದ್ಧ ವ್ಯಕ್ತಿ. ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅವರು ಯೋಚಿಸಿದ್ದಾರೆಂಬ ಖಾತ್ರಿ ಇದೆ. ಬಹುಶಃ ಅವರು ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವವನ್ನು ಎಂಜಾಯ್ ಮಾಡಲು ಸಾಧ್ಯವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಬೆಂಬಲಿಸಬೇಕು” ಎಂದರು.
ಅಹಂಕಾರವನ್ನು ತೊರೆಯಬೇಕು
ವಿರಾಟ್ ಅಹಂ ಬಿಟ್ಟು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ. ಈ ಹಿಂದೆ ಸುನಿಲ್ ಗವಾಸ್ಕರ್ ತನ್ನ ಅಡಿಯಲ್ಲಿ ಆಡಿದ್ದರು ಎಂದು ಕಪಿಲ್ ನೆನಪು ಮಾಡಿಕೊಂಡರು. “ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಮೊಹಮ್ಮದ್ ಅಜರುದ್ದೀನ್ ಅಡಿಯಲ್ಲಿ ತಾನು ಆಡಿದ್ದೇನೆ. ಎಂದಿಗೂ ನಾನು ಅಹಂಕಾರವನ್ನು ಹೊಂದಿರಲಿಲ್ಲ. ವಿರಾಟ್ ತನ್ನ ಅಹಂಕಾರವನ್ನು ಬಿಟ್ಟು ಯುವ ಕ್ರಿಕೆಟಿಗನ ಅಡಿಯಲ್ಲಿ ಆಡಬೇಕಾಗಿದೆ. ಇದು ಅವರಿಗೆ ಮತ್ತು ಭಾರತೀಯ ಕ್ರಿಕೆಟ್‌ಗೆ ನೆರವಾಗಲಿದೆ. ಹೊಸ ನಾಯಕನಿಗೆ ವಿರಾಟ್ ಮಾರ್ಗದರ್ಶನ ನೀಡಬೇಕು. ಬ್ಯಾಟ್ಸ್‌ಮನ್ ಆಗಿ ವಿರಾಟ್‌ನನ್ನು ಟೀಮ್ ಇಂಡಿಯಾ ಕಳೆದುಕೊಳ್ಳಲು ಸಾಧ್ಯವಿಲ್ಲ” ಎಂದು ಕಪಿಲ್ ಹೇಳಿದರು..

Continue Reading

ಕ್ರೀಡೆ

ವಿರಾಟ್‌ನ ಫೋಟೋ ಹಂಚಿಕೊಂಡು ಅನುಷ್ಕಾ ಹೇಳಿದ್ದೇನು ಗೊತ್ತಾ?

Published

on

ಹೊಸದಿಲ್ಲಿ : ಜನೆವರಿ 16 (ಯು.ಎನ್.ಐ.) ಭಾರತ ತಂಡದ ಟೆಸ್ಟ್ ಸಾರಥ್ಯ ತೊರೆದ ವಿರಾಟ್ ಕೊಹ್ಲಿ ಬಗ್ಗೆ ಅನುಷ್ಕಾ ಹೇಳಿದ್ದೇನು? ಎಲ್ಲ ಕ್ರೀಡಾಪ್ರೇಮಿಗಳಿಗೆ ಈ ಒಂದು ಕುತೂಹಲ ಇದ್ದೆ ಇದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಕೆಲವು ದಿನಗಳಿಂದ ವಿರಾಟ್ ಕೊಹ್ಲಿ ಕ್ರಿಕೆಟ್ ಜೀವನದಲ್ಲಿ ಅನೇಕ ಏರಿಳಿತಗಳು ಕಾಣಿಸಿಕೊಂಡಿದ್ದವು.

ಇತರರಿಗೆ ಹೋಲಿಕೆ ಮಾಡಿದ್ರೆ ಇಷ್ಟು ಕಡಿಮೆ ಅವಧಿಯಲ್ಲಿ 70ಕ್ಕೂ ಹೆಚ್ಚು ಶತಕಗಳನ್ನು ಬಾರಿಸಿದ್ದರೂ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅವರಲ್ಲಿ ಕಾಣಿಸಿಕೊಂಡಿತ್ತು. ಇದಲ್ಲದೇ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತ ನಂತರ ಕೊಹ್ಲಿ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳ ಎದ್ದಿದ್ದವು. ಇದಾದ ಬಳಿಕ ದಿಢೀರಂತ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ವಿರಾಟ್ ನಾಯಕತ್ವ ತೊರೆದ ಬಳಿಕ ಅವರ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ಭಾವನೆಗಳು ಹೇಗೆ ಇದ್ದವು ಅನ್ನೋದರ ಬಗ್ಗೆ ಹಂಚಿಕೊಂಡಿದ್ದಾರೆ.

ವಿರಾಟ್ ನ ನಗುವಿನ ಫೋಟೋವನ್ನು ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅದರಡಿ “ಧೋನಿ ಕ್ರಿಕೆಟ್ ಗೆ ವಿದಾಯ ಹೇಳಿದಾಗ ನೀವು 2014ರಲ್ಲಿ ಭಾರತೀಯ ಟೆಸ್ಟ್ ತಂಡದ ನಾಯಕರಾಗಿದ್ದೀರಿ ಎಂದು ಹೇಳಿದ ದಿನ ನನಗೆ ನೆನಪಿದೆ. ಬಳಿಕ ನಾನು, ನೀವು ಮತ್ತು ಧೋನಿ ಈ ಬಗ್ಗೆ ಮಾತುಕತೆ ನಡೆಸಿದ್ದೆವು. ಇನ್ನು ಮುಂದೆ ನಿನ್ನ ಗಡ್ಡ ಎಷ್ಟು ಬೇಗ ಬೆಳ್ಳಗಾಗುತ್ತೆ ನೋಡು ಎಂದು ಧೋನಿ ಹೇಳಿದ್ದರು. ಈ ಮಾತಿಗೆ ಅಂದು ನಾವೆಲ್ಲ ತುಂಬಾ ನಕ್ಕಿದ್ದೆವು. ಅಂದಿನಿಂದ ನಿಮ್ಮ ಗಡ್ಡ ಬೆಳ್ಳಗಾಗುವುದನ್ನು ನಾನು ನೋಡಿದ್ದೇನೆ. ಗಡ್ಡ ಬಿಳಿಯಾಗುವುದಷ್ಟೇ ಅಲ್ಲ, ಉಳಿದೆಲ್ಲ ವಿಚಾರಗಳ ಬಗ್ಗೆ ಕಂಡುಕೊಂಡಿದ್ದೇನೆ. ಭಾರತ ಕ್ರಿಕೆಟ್ ತಂಡದ ನಾಯಕನಾಗಿ ನಿಮ್ಮ ಬೆಳವಣಿಗೆ ಮತ್ತು ಸಾಧನೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ, ನಿಮ್ಮ ಆಂತರಿಕ ಬೆಳವಣಿಗೆಯ ಬಗ್ಗೆಯೂ ತುಂಬಾ ಹೆಮ್ಮೆ ಇದೆ.

https://www.instagram.com/p/CYyUQ-ksZk8/?utm_source=ig_embed&ig_rid=e7b0fdf8-39c1-4dd6-8b8a-15f9370ac327

2014 ರಲ್ಲಿ ನೀವು ತುಂಬಾ ಚಿಕ್ಕವರಾಗಿದ್ದಾಗ ಒಳ್ಳೆಯ ಉದ್ದೇಶಗಳು, ಸಕಾರಾತ್ಮಕ ಗುರಿಗಳು ನಿಮ್ಮನ್ನು ಇಂದಿಗೂ ಜೀವನದಲ್ಲಿ ಮುನ್ನಡೆಸುತ್ತವೆ. ನೀವು ಎದುರಿಸಿದ ಬಹಳಷ್ಟು ಸವಾಲುಗಳು ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಸೇರಿವೆ. ಬಹುಶಃ ಇದುವೇ ಜೀವನ ಹೌದಲ್ಲವೇ? ನಿಮ್ಮ ಅನುಭವವನ್ನು ಹಾಗೂ ಬಲದೊಂದಿಗೆ ಭಾರತ ತಂಡದ ಪ್ರತಿ ಜಯದಲ್ಲಿ ಧಾರೆ ಎರೆದಿದ್ದೀರಿ. ಕೆಲವು ಪಂದ್ಯಗಳ ಸೋಲಿನ ಬಳಿಕ ನಿಮ್ಮ ಪಕ್ಕದಲ್ಲಿ ಕುಳಿತು ಕಣ್ಣೀರು ಹರಿಯುವುದನ್ನು ನೋಡಿದ್ದೇನೆ. ಪಂದ್ಯ ಸೋಲಲು ಕಾರಣ ಏನು? ಹೇಗೆ ಸುಧಾರಿಸಬಹುದಿತ್ತು ಅನ್ನೋ ಬಗ್ಗೆ ನೀವು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿದ್ದೀರಿ. ನಿಮ್ಮ ರೀತಿಯಲ್ಲೇ ಉತ್ಸಾಹ ಹಾಗೂ ಲೆಕ್ಕಾಚಾರ ಬೇರೆಯವರಿಂದಲೂ ನಿರೀಕ್ಷೆ ಮಾಡಿದ್ದೀರಿ. ನೀವು ಯಾವಾಗ್ಲೂ ಅಸಾಂಪ್ರದಾಯಿಕ ಮತ್ತು ಬಹಿರಂಗವಾಗಿಯೂ ಇದೇ ರೀತಿ ಕಾಣಿಸಿಕೊಳ್ಳುತ್ತೀರಿ” ಎಂದು ಅನುಷ್ಕಾ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಕೈಗೊಳ್ಳುವ ಪ್ರತಿಯೊಂದು ಪ್ರವಾಸದಲ್ಲೂ ತಮ್ಮ ಕುಟುಂಬವನ್ನು ಕರೆದೊಯ್ಯುತ್ತಿದ್ದರು. ದುಬೈ ವರ್ಲ್ಡ್ ಕಪ್ ಟಿ-20ಯಲ್ಲೂ ಅನುಷ್ಕಾ ಶರ್ಮಾ ಹಾಗೂ ಮಗಳು ವಾಮಿಕಾ ಕೂಡ ಇದ್ದರು. ಅನೇಕ ಬಾರಿ ಗ್ರೌಂಡ್ ನಲ್ಲಿ ಅನುಷ್ಕಾ ತನ್ನ ಪತಿಯನ್ನು ಪ್ರೋತ್ಸಾಹಿಸುತ್ತಿದ್ದುದನ್ನು ನಾವೆಲ್ಲ ನೋಡಿದ್ದೇವೆ.

https://www.instagram.com/p/CYyUQ-ksZk8/?utm_source=ig_embed&ig_rid=e7b0fdf8-39c1-4dd6-8b8a-15f9370ac327

Continue Reading
Advertisement
ಕರ್ನಾಟಕ10 mins ago

ಕೋವಿಡ್‌ ಸೋಂಕು ಹೆಚ್ಚು; ಸಾವು ಕಡಿಮೆ:‌ ಸಚಿವ ಅಶೋಕ್

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗಿದೆ.  ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದರು....

ಆರೋಗ್ಯ26 mins ago

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨ ಲಕ್ಷ ೫೮ ಸಾವಿರ ಕೋವಿಡ್ ಪ್ರಕರಣ

ನವದೆಹಲಿ,ಜ ೧೭(ಯು ಎನ್ ಐ)ದೇಶದಲ್ಲಿ ಈವರೆಗೆ ೮ ಸಾವಿರದ ೨೦೯ ಕೋವಿಡ್-೧೯ ರೂಪಾಂತರಿ ಒಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ ಶೇಕಡ ೬ರಷ್ಟು ಪ್ರಕರಣಗಳು...

ಕರ್ನಾಟಕ30 mins ago

ಗಾಂಧಿ ಕುರಿತು ಸಂದೇಹ, ಪ್ರಶ್ನೆಗಳಿವೆಯೇ ?

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ಗಾಂಧಿ ವಿಚಾರ ವೇದಿಕೆಯು ಗಾಂಧೀಜಿ ಅವರ ಕುರಿತ ಎಲ್ಲ ಸಂದೇಹಗಳಿಗೆ ಉತ್ತರ ರೂಪಿಯಾದ ಪುಸ್ತಕವನ್ನು ಪ್ರಕಟಿಸಲು ಯೋಜಿಸಿದ್ದು, ಸಾರ್ವಜನಿಕರಿಂದ ಪ್ರಶ್ನೆಗಳನ್ನು ಆಹ್ವಾನಿಸಿದೆ....

ವಾಣಿಜ್ಯ37 mins ago

ವಿಶ್ವ ಆರ್ಥಿಕ ವೇದಿಕೆಯ ದಾವೂಸ್ ಸಭೆಯಲ್ಲಿಂದು ರಾತ್ರಿ ಪ್ರಧಾನಿ ಮೋದಿ ಭಾಷಣ

ನವದೆಹಲಿ, ಜ ೧೭(ಯುಎನ್ ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ ೮.೩೦ಕ್ಕೆ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಭೆಯಲ್ಲಿ ’ಜಗತ್ತಿನ ಸ್ಥಿತಿಗತಿ’ ಕುರಿತು ವಿಶೇಷ...

ಕರ್ನಾಟಕ38 mins ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ಪ್ರಯಾಣಿಕರಿಗೆ ಕೋವಿಡ್

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ...

ಕರ್ನಾಟಕ41 mins ago

ಇಂದು ಮಣಿಪಾಲ್‌ ಆಸ್ಪತ್ರೆಗೆ ತೆರಳಲಿರುವ ಸಿಎಂ

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ಕೋವಿಡ್‌ ೧೯ ಸೋಂಕಿಗೆ ಒಳಗಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಗರದ ಮಣಿಪಾಲ್‌ ಆಸ್ಪತ್ರೆಗೆ ಪರೀಕ್ಷೆಗಾಗಿ ತೆರಳಲಿದ್ದಾರೆ. ಇಂದು ಮಧ್ಯಾಹ್ನದ...

ರಾಜಕೀಯ47 mins ago

ಯುಪಿಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲಿರುವ ಜೆಡಿ(ಯು)

ನವದೆಹಲಿ, ಜ ೧೭(ಯುಎನ್ ಐ) ಸಂಯುಕ್ತ ಜನತಾ ದಳ(ಜೆಡಿಯು) ಪಕ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ. ಪಕ್ಷದ...

ಬೆಂಗಳೂರು56 mins ago

ಕೋವಿಡ್ ವಾರ್ ರೂಂಗೆ ಸಚಿವ ಕೆ.ಗೋಪಾಲಯ್ಯ ಚಾಲನೆ

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜನರನ್ನು ಕೋವಿಡ್ ಮೂರನೆ ಅಲೆಯಿಂದ ರಕ್ಷಿಸಲು ಮತ್ತು ಆರೋಗ್ಯ ಸುರಕ್ಷೆಗಾಗಿ ಎಲ್ಲ ಅಗತ್ಯ ವೈದ್ಯಕೀಯ...

ವಿದೇಶ1 hour ago

ಚೀನಾದ ಜನನ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಕುಸಿತ!

ಬೀಜಿಂಗ್ : ಜನೆವರಿ 17 (ಯು.ಎನ್.ಐ.) ಡ್ರ್ಯಾಗನ್ ರಾಷ್ಟ್ರ ಚೀನಾದಿಂದ ಶಾಕಿಂಗ್ ಸುದ್ದಿಯೊಂದು ಬೆಳಕಿಗೆ ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜನನ ಪ್ರಮಾಣವು ದಾಖಲೆ ಮಟ್ಟದಲ್ಲಿ...

ಕ್ರೀಡೆ2 hours ago

ಆಸ್ಟ್ರೇಲಿಯಾ ಗಡಿಪಾರು; ದುಬೈಗೆ ಬಂದಿಳಿದ ಜೊಕೊವಿಕ್!

ದುಬೈ : ಜನೆವರಿ 17 (ಯು.ಎನ್.ಐ.) ಆಸ್ಟ್ರೇಲಿಯಾ ಗಡಿಪಾರು ಮಾಡಿದ ಬಳಿಕ ನೊವಾಕ್ ಜೊಕೊವಿಕ್ ದುಬೈಗೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ಫೆಡರಲ್ ನ್ಯಾಯಾಲಯವು ಪಬ್ಲಿಕ್ ಗ್ರೌಂಡ್ಸ್ ಆಧಾರದ ಮೇಲೆ...

ಟ್ರೆಂಡಿಂಗ್

Share