Connect with us


      
ದೇಶ

ಕಿರಿಯ ಶಿಕ್ಷಕರ ವೇತನ ಶೇ. 50ರಷ್ಟು ಹೆಚ್ಚಿಸಿದ ಒಡಿಶಾ ಸರ್ಕಾರ

Vanitha Jain

Published

on

ಭುವನೇಶ್ವರ: ಜನವರಿ 03(ಯು.ಎನ್.ಐ) ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರಿಗೆ ಹೊಸ ವರ್ಷಕ್ಕೆ ಒಡಿಶಾ ಸರ್ಕಾರ ಬಂಪರ್ ಕೊಡುಗೆ ನೀಡಿದೆ.

ಹೊಸ ವರ್ಷದ ಉಡುಗೊರೆಯಾಗಿ ಒಡಿಶಾ ಸರ್ಕಾರ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನವನ್ನು ಶೇಕಡಾ 50 ರಷ್ಟು ಹೆಚ್ಚಿಸಲು ನಿರ್ಧರಿಸಿದೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೆಗೆದುಕೊಂಡ ನಿರ್ಧಾರವು ಜನವರಿ 1, 2022ರಿಂದ ಜಾರಿಗೆ ಬರಲಿದೆ. ಇದರಿಂದ 33,038 ಕಿರಿಯ ಶಿಕ್ಷಕರಿಗೆ ಪ್ರಯೋಜನವಾಗಲಿದೆ. ಮುಖ್ಯಮಂತ್ರಿಗಳ ಕಚೇರಿ ಪ್ರಕಾರ, 13,324 ಗುತ್ತಿಗೆ ಮತ್ತು 19,714 ನಿಯಮಿತ ಶಿಕ್ಷಕರು ವರ್ಧಿತ ವೇತನದ ಫಲಾನುಭವಿಗಳಾಗಿರುತ್ತಾರೆ.

7,400 ಇದ್ದ ಗುತ್ತಿಗೆ ಕಿರಿಯ ಶಿಕ್ಷಕರ ವೇತನ 11,000 ರೂ.ಗೆ ಏರಿಕೆಯಾಗಿದೆ. 9,200 ಇದ್ದ ಸಾಮಾನ್ಯ ಕಿರಿಯ ಶಿಕ್ಷಕರ ವೇತನವನ್ನು 13,800 ರೂ.ಗೆ ಹೆಚ್ಚಿಸಲಾಗಿದೆ. ಈ ನಿರ್ಧಾರದ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ವರ್ಷಕ್ಕೆ 168 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯನ್ನು ಹೊರಬೇಕಾಗುತ್ತದೆ.

Share