Published
6 months agoon
By
UNI Kannadaಆಂಧ್ರಪ್ರದೇಶ, ಡಿಸೆಂಬರ್ 01 (ಯು.ಎನ್.ಐ.) ಆಂಧ್ರಪ್ರದೇಶದಲ್ಲಿ ವೃದಾಪ್ಯ ವೇತನ 2500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಇಂದಿನಿಂದ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಗುಂಟೂರು ಜಿಲ್ಲೆಯಲ್ಲಿ ಮಾತನಾಡಿದ ಅವರು ನಮ್ಮ ಪ್ರಣಾಳಿಕೆಯಲ್ಲಿ ಇರುವಂತೆ ಕೊಟ್ಟಮಾತನ್ನ ಉಳಿಸಿಕೊಂಡಿದ್ದೇವೆ. ದೇಶದಲ್ಲಿ ಅತ್ಯಧಿಕ ಪಿಂಚಣಿ ನೀಡುತ್ತಿರುವುದು ನಮ್ಮ ಆಂಧ್ರ ಪ್ರದೇಶದಲ್ಲಿ ಮಾತ್ರ ಎಂದು ಅವರು ತಿಳಿಸಿದರು.
ಇದರೊಂದಿಗೆ ರಾಜ್ಯದ 62 ಲಕ್ಷ ಕುಟುಂಬಗಳಲ್ಲಿ ಮಂದಹಾಸ ಮೂಡಲಿದೆ. ಒಳ್ಳೆಯ ಕಾರ್ಯಕ್ರಮವನ್ನ ಅನುಷ್ಠಾನಕ್ಕೆ ತರುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ಬಡವರ ಅಭಿವೃದ್ದಿಗೆ ಶ್ರಮಿಸುತ್ತಿದ್ದರೇ ಕೆಲವರು ಇದನ್ನ ಟೀಕೆ ಮಾಡುತ್ತಿದ್ದಾರೆ. ವಯೋ ವೃದ್ದರಿಗೆ ಒಳ್ಳೆಯದು ಮಾಡುವುದು ತಪ್ಪಾ ಎಂದು ಅವರು ಪ್ರಶ್ನೆಮಾಡಿದರು.
ಇದೇ ಸಂದರ್ಭದಲ್ಲಿ ನಾಡಿನ ಸಮಸ್ತ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನ ತಿಳಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!