Published
4 months agoon
By
UNI Kannadaಮಸ್ಕಟ್, ಜ 16(ಯುಎನ್ ಐ) ಸೌದಿ ಅರೆಬಿಯಾದಲ್ಲಿ ಇತ್ತೀಚಿಗೆ ಮಹಿಳೆಯರಿಗೆ ಟ್ಯಾಕ್ಸಿ ಚಾಲಕರಾಗುವ ಅವಕಾಶ ಕಲ್ಪಿಸಿರುವುದು ಗೊತ್ತಿರುವ ವಿಚಾರ. ಈಗ ಸೌದಿ ಅರೇಬಿಯಾದ ದಾರಿಯಲ್ಲಿ ಮತ್ತೊಂದು ಕೊಲ್ಲಿ ದೇಶ ಒಮನ್ ಮಹಿಳೆಯರ ವಿಷಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಒಮನ್ ಕೂಡಾ ಮಹಿಳೆಯರು ಟ್ಯಾಕ್ಸಿ ಓಡಿಸಲು ಅವಕಾಶ ಕಲ್ಪಿಸಿದೆ. ಓಮನ್ ರಾಜಧಾನಿ ಮಸ್ಕಟ್ ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಮಹಿಳೆಯರಿಗೆ ಈ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಸಾರಿಗೆ, ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.
ಜನವರಿ 20 ರಿಂದ ಪ್ರಾಯೋಗಿಕವಾಗಿ ಮಸ್ಕಟ್ ಗವರ್ನರೇಟ್ ವ್ಯಾಪ್ತಿಯಲ್ಲಿ ಮಾತ್ರ ಈ ಸೇವೆಗಳನ್ನು ಪ್ರಾರಂಭಿಸಲಾಗುವುದು. ಇದು ಯಶಸ್ವಿಯಾದರೆ, ಇತರ ಗವರ್ನರೇಟ್ಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದೆ. ಒಮನ್ ತೆಗೆದುಕೊಂಡಿರುವ ಈ ನಿರ್ಧಾರ ಆ ದೇಶದ ಮಹಿಳೆಯರ ಪಾಲಿಗೆ ಸುವರ್ಣಾವಕಾಶ ಎಂದೇ ಹೇಳಲಾಗುತ್ತಿದೆ.
ಲಂಡನ್: ಕರ್ನಾಟಕದ ಸಾವಿರ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆ
ಶ್ರೀಲಂಕಾದಲ್ಲಿ ಇಂಧನ ಕಳ್ಳ ದಂಧೆಕೋರರ ಮೇಲೆ ದಾಳಿ!
“ಲಡಾಖ್ನಲ್ಲಿ ಉಕ್ರೇನ್ನಂಥ ಪರಿಸ್ಥಿತಿ” – ರಾಹುಲ್ ಗಾಂಧಿ ಲಂಡನ್ನಲ್ಲಿ ಹೇಳಿಕೆ
ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ತೆರವುಗೊಳಿಸಿದ ಸರ್ಕಾರ
ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್
ಕಾನ್ ಚಲನಚಿತ್ರೋತ್ಸವ 2022; ರೆಡ್ ಕಾರ್ಪೆಟ್ ಮೇಲೆ ‘ಅತ್ಯಾಚಾರ’ದ ಪ್ರತಿಭಟನೆ!