Connect with us


      
ದೇಶ

ದೇಶದಲ್ಲಿ 38ಕ್ಕೆ ಏರಿದ ಓಮೈಕ್ರಾನ್‌ ಪ್ರಕರಣ

Vidyashree S

Published

on

ನವದೆಹಲಿ: ದೇಶದಲ್ಲಿ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದ್ದು, ಐದು ಹೊಸ ಪ್ರಕರಣಗಳು ಪತ್ತೆಯಾಗಿವೆ.

ಆಂಧ್ರ ಪ್ರದೇಶ, ಚಂಡೀಗಡ ಮತ್ತು ಕೇರಳದಲ್ಲಿ ಮೊದಲ ಓಮೈಕ್ರಾನ್‌ ಪ್ರಕರಣ ವರದಿಯಾಗಿದ್ದು, ರಾಜ್ಯ ಮತ್ತು ಮಹಾರಾಷ್ಟ್ರದಲ್ಲಿ ಮತ್ತೊಂದು ಹೊಸ ಪ್ರಕರಣ ಪತ್ತೆಯಾಗಿದೆ.

ಓಮೈಕ್ರಾನ್‌ ಸೋಂಕಿಗೆ ಒಳಗಾದ ಐವರೂ ವಿದೇಶದಿಂದ ಬಂದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ ಮಹಾರಾಷ್ಟ್ರದಲ್ಲಿ 18 ಮಂದಿ ಓಮೈಕ್ರಾನ್‌ಗೆ ತುತ್ತಾಗಿದ್ದು, ಕರ್ನಾಟಕ (3), ಗುಜರಾತ್‌ (3), ಕೇರಳ (1), ಆಂಧ್ರ ಪ್ರದೇಶ (1), ದೆಹಲಿ (2), ಚಂಡೀಗಡ (1) ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮೈಕ್ರಾನ್‌ ಪ್ರಕರಣ ಪತ್ತೆಯಾಗಿದೆ.

63 ದೇಶಗಳಲ್ಲಿ ಓಮೈಕ್ರಾನ್‌ ಪ್ರಕರಣ ವರದಿಯಾಗಿದ್ದು, ಈ ಹೊಸ ರೂಪಾಂತರ ತಳಿ, ಡೆಲ್ಟಾ ರೂಪಾಂತರಕ್ಕಿಂತಲೂ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಸೋಂಕಿನ ಲಕ್ಷಣಗಳು ಕಡಿಮೆ ಇದ್ದರೂ, ಈ ತಳಿಯೂ ಲಸಿಕೆಗಳ ಪರಿಣಾಮವನ್ನು ಕುಗ್ಗಿಸುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾಹಿತಿ ನೀಡಿದೆ.

Share