Published
5 months agoon
ಸ್ಟಾರ್ಸ್ಬರ್ಗ್: ಡಿ. 15 (ಯು.ಎನ್.ಐ) ಇಯು ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೆಯೆನ್ ಅವರು ಬುಧವಾರ ಕೋವಿಡ್ -19 ರ ಒಮಿಕ್ರಾನ್ ರೂಪಾಂತರವು ಮುಂದಿನ ತಿಂಗಳು ಅಂದರೆ ಜನವರಿಯಲ್ಲಿ ಯುರೋಪಿನಲ್ಲಿ ಹೆಚ್ಚಾಗಬಹುದು ಎಂದು ಎಚ್ಚರಿಸಿದ್ದಾರೆ.
ಆದರೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಮ್ಮ 27-ರಾಷ್ಟ್ರಗಳ ಬಣವು ಸಾಕಷ್ಟು ಲಸಿಕೆಗಳನ್ನು ಹೊಂದಿದೆ ಎಂದು ಅವರು ಇದೇ ವೇಳೆ ಹೇಳಿದರು. ಹೊಸ ಪ್ರಕರಣಗಳ ಸಂಖ್ಯೆ ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದೆ. ಈ ಪ್ರಮಾಣ ಹೆಚ್ಚಿದ್ದು, ಇದೇ ರೀತಿ ಮುಂದುವರೆದರೆ ಜನವರಿ ಮಧ್ಯದ ವೇಳೆಗೆ ಯುರೋಪ್ನಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಾನ್ ಡೆರ್ ಲೆಯೆನ್ ಅವರು ಯುರೋಪಿಯನ್ ಪಾರ್ಲಿಮೆಂಟ್ ನಲ್ಲಿ ವೈಜ್ಞಾನಿಕ ಅಂಕಿಅಂಶ ಉಲ್ಲೇಖಿಸಿ ಮಾತನಾಡಿದರು.
ಕಳೆದ ವರ್ಷದಲ್ಲಿ, ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಮತ್ತು ನಾವು ಹೆಚ್ಚಿನದನ್ನು ಸಾಧಿಸಿದ್ದೇವೆ. ಅದಕ್ಕಾಗಿಯೇ ಯುರೋಪ್ ಈಗ ವೈರಸ್ ವಿರುದ್ಧ ಹೋರಾಡಲು ಉತ್ತಮ ಸ್ಥಾನದಲ್ಲಿದೆ ಎಂದು ಅವರು ಹೇಳಿದರು. ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ರೂಪಾಂತರವನ್ನು ಎದುರಿಸಲು ಇಯು ದೇಶಗಳು ಬೂಸ್ಟರ್ ಡೋಸ್ಗಳನ್ನು ನೀಡಲು ಮುಂದಾದ ಕಾರಣ, ಈಗ ಪ್ರತಿ ಯುರೋಪಿಯನ್ ಬಣಗಳ ಬಳಿ ಸಾಕಷ್ಟು ಲಸಿಕೆಗಳಿವೆ ಎಂದು ವಾನ್ ಡೆರ್ ಲೆಯೆನ್ ಹೇಳಿದರು.
“ನಾವು ಈಗ ಯುರೋಪ್ನಲ್ಲಿ ತಿಂಗಳಿಗೆ 300 ಮಿಲಿಯನ್ ಡೋಸ್ ಲಸಿಕೆಗಳನ್ನು ಉತ್ಪಾದಿಸುವ ಸ್ಥಿತಿಯಲ್ಲಿದ್ದೇವೆ” ಎಂದು ಅವರು ಹೇಳಿದರು. ಇಲ್ಲಿಯವರೆಗೆ ಇಯು ಜನಸಂಖ್ಯೆಯ 66.6 ಪ್ರತಿಶತದಷ್ಟು ಜನರು ಎರಡು ಡೋಸ್ ಕೋವಿಡ್ -19 ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. 62 ಮಿಲಿಯನ್ ಜನರು ಮೂರನೇ ಬೂಸ್ಟರ್ ಡೋಸ್ನನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.
ಮಕ್ಕಳು ಸೇರಿದಂತೆ ಒಟ್ಟಾರೆ ಎಲ್ಲರಿಗೂ ವ್ಯಾಕ್ಸಿನೇಷನ್ ನೀಡುವುದು ಈಗ ಅತ್ಯಂತ ಮುಖ್ಯವಾದ ವಿಷಯವಾಗಿದೆ ಎಂದು ಅವರು ಹೇಳಿದರು. ಒಮಿಕ್ರಾನ್ ವೇಗವಾಗಿ ಹರಡುತ್ತಿದೆ ಮತ್ತು ಇದು ಹೆಚ್ಚಿನ ಎಲ್ಲಾ ದೇಶಗಳನ್ನು ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಹೇಳಿದೆ.
ಡಿ. 30 ರಿಂದ ಜ. 2 ರವರೆಗೆ ಕೇರಳದಲ್ಲಿ ರಾತ್ರಿ ಕರ್ಫ್ಯೂ ಜಾರಿ
ಒಮಿಕ್ರಾನ್ ಭೀತಿ ಹಿನ್ನೆಲೆ: ದೆಹಲಿಯಲ್ಲಿ ಸೋಮವಾರದಿಂದ ರಾತ್ರಿ ಕರ್ಫ್ಯೂ ಜಾರಿ
ಭಾರತದಲ್ಲಿ 358 ಒಮಿಕ್ರಾನ್ ಪ್ರಕರಣಗಳು ಪತ್ತೆ: 117 ಮಂದಿ ಸೋಂಕಿನಿಂದ ಗುಣಮುಖ
236 ಒಮಿಕ್ರಾನ್ ರೋಗಿಗಳಲ್ಲಿ 104 ಸೋಂಕಿತರು ಗುಣಮುಖ
ವ್ಯಾಕ್ಸ್ಜೆವ್ರಿಯಾ ಲಸಿಕೆಯ ಬೂಸ್ಟರ್ ಶಾಟ್ ಒಮಿಕ್ರಾನ್ ವಿರುದ್ಧ ಪರಿಣಾಮಕಾರಿ: ಅಸ್ಟ್ರಾಜೆನೆಕಾ ಕಂಪನಿ
ಇತಿಹಾಸದಲ್ಲಿಯೇ ಒಮಿಕ್ರಾನ್ ಬೇರೆ ವೈರಸ್ಗಳಿಗಿಂತ ವೇಗವಾಗಿ ಹರಡುತ್ತಿದೆ: ಬಿಲ್ ಗೇಟ್ಸ್