Published
1 week agoon
ನವದೆಹಲಿ: ಮೇ 11 (ಯು.ಎನ್.ಐ.) 200 ಕೋಟಿ ವಂಚನೆ ಪ್ರಕರಣದಲ್ಲಿ ಇಡಿ ವಿಚಾರಣೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ವಿದೇಶಕ್ಕೆ ಹಾರಲು ಅನುಮತಿ ನೀಡುವಂತೆ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದಾರೆ.
15 ದಿನಗಳ ಕಾಲ ಅಬುಧಾಬಿ, ಯುಎಇ, ನೇಪಾಳ ಮತ್ತು ಫ್ರಾನ್ಸ್ಗೆ ತುರ್ತು ಪ್ರಯಾಣಕ್ಕಾಗಿ ತನ್ನ ಪಾಸ್ಪೋರ್ಟ್ ಅನ್ನು ಬಿಡುಗಡೆ ಮಾಡಲು ಅನುಮತಿ ಕೋರಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಲ್ಲಿಸಿದ ಅರ್ಜಿಯ ಕುರಿತು ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯದಿಂದ (ಇಡಿ) ಪ್ರತಿಕ್ರಿಯೆ ಕೇಳಿದೆ.
ಆರೋಪಿ ಸುಖೇಶ್ ಚಂದ್ರಶೇಖರ್ ಅವರನ್ನು ಒಳಗೊಂಡ 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಜಾಕ್ವೆನಿಲ್ ಫೆರ್ನಾಂಡಿಸ್ ಅವರನ್ನು ಇಡಿ ತನಿಖೆ ನಡೆಸುತ್ತಿದೆ.
ಈ ಹಿಂದೆ ಸುಖೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ ಮನಿ ಲಾಂಡರಿಂಗ್ ತನಿಖೆಯಲ್ಲಿ ವಿಚಾರಣೆಗಾಗಿ ಜಾಕ್ವೆಲಿನ್ ತನಿಖಾ ಸಂಸ್ಥೆಯ ಮುಂದೆ ಹಾಜರಾಗಿದ್ದರು.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರು ಬುಧವಾರ ತನಿಖಾ ಸಂಸ್ಥೆಯಿಂದ ಪ್ರತಿಕ್ರಿಯೆಯನ್ನು ಕೋರಿ ಮುಂದಿನ ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿದ್ದಾರೆ.
ಜಾಕ್ವೆಲಿನ್ ಫೆರ್ನಾಂಡಿಸ್ ಅವರು 2009 ರಿಂದ ಭಾರತದಲ್ಲಿ ನೆಲೆಸಿರುವ ಶ್ರೀಲಂಕಾದ ಪ್ರಜೆ ಎಂದು ಅರ್ಜಿಯಲ್ಲಿ ಹೇಳಲಾಗಿದ್ದು, ಅವರು ಹಿಂದಿ ಚಲನಚಿತ್ರೋದ್ಯಮದಲ್ಲಿ ಉತ್ತಮ ಹೆಸರು ಮಾಡಿದ್ದಾರೆ ಎಂದಿದೆ.
ನಟಿ ಪರ ವಾದ ಮಂಡಿಸಿದ ವಕೀಲ ಅಜಿತ್ ಸಿಂಗ್, ಇಡಿ ಆರೋಪಪಟ್ಟಿ ಸಲ್ಲಿಸಿದ್ದು, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರನ್ನು ಆರೋಪಿ ಎಂದು ಹೆಸರಿಸಿಲ್ಲ. ಆದರೆ ಅರ್ಜಿದಾರರಿಗೆ ಯಾವುದೇ ಕಾರಣವನ್ನು ನೀಡದೆ ಇಡಿ ಅರ್ಜಿದಾರರ ಪಾಸ್ಪೋರ್ಟ್ ಅನ್ನು ವಶಪಡಿಸಿಕೊಂಡಿದೆ ಎಂದಿದ್ದಾರೆ.ಖ್ಯಾತ ಚಲನಚಿತ್ರ ನಟಿಯನ್ನು ಕಾರ್ಯಕ್ರಮಗಳು, ಪತ್ರಿಕಾಗೋಷ್ಠಿಗಳು, ಪೂರ್ವಾಭ್ಯಾಸಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ ಎಂದು ಅರ್ಜಿ ಮನವಿಯಲ್ಲಿ ತಿಳಿಸಲಾಗಿದೆ.
ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಆಯೋಜಿಸಿರುವ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೇ 17, 2022 ರಿಂದ ಮೇ 22, 2022 ರವರೆಗೆ ಅಬುಧಾಬಿ, ಯುಎಇ ಗೆ ಪ್ರಯಾಣಿಸಬೇಕಾಗಿದೆ. ಫ್ರಾನ್ಸ್ ನಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೇ 17, 2022 ರಿಂದ ಮೇ 28, 2022 ರವರೆಗೆ ಭಾಗವಹಿಸಲು ಆಹ್ವಾನಿಸಲಾಗಿದೆ . ಅರ್ಜಿದಾರರು 2017 ರಿಂದ ದಬಾಂಗ್ ಪ್ರದರ್ಶನದೊಂದಿಗೆ ಸಂಬಂಧ ಹೊಂದಿದ್ದು, ಮೇ 27, 2022 ರಿಂದ ಮೇ 28, 2022 ರವರೆಗೆ ನೇಪಾಳದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಹೀಗಾಗಿ ಪಾಸ್ ಪೋರ್ಟ್ ಬಿಡುಗಡೆ ಮಾಡಬೇಕಾಗಿದೆ. ಅವರ ಪಾಸ್ಪೋರ್ಟ್ ಬಿಡುಗಡೆ ಮಾಡಲು ನ್ಯಾಯಾಲಯದಿಂದ ಅನುಮತಿ ಸಿಕ್ಕ ಬಳಿಕವೇ ಅವರು ಟಿಕೆಟ್ಗಳನ್ನು ಕಾಯ್ದಿರಿಸುತ್ತಾರೆ ಮತ್ತು ಅದರ ಪ್ರಕಾರ ಈ ನ್ಯಾಯಾಲಯದ ಮುಂದೆ ವಿವರವಾದ ಪ್ರಯಾಣದ ವಿವರವನ್ನು ಸಲ್ಲಿಸುತ್ತಾರೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸದ್ಯ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಸಕ್ರಿಯವಾದ ಲುಕ್ ಔಟ್ ಸುತ್ತೋಲೆ ಇದ್ದು, ಕಳೆದ ವರ್ಷ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕೆಯನ್ನ ಬಂಧಿಸಲಾಗಿತ್ತು.
ವಿಚ್ಛೇದನ ಸುದ್ದಿ ಬೆನ್ನಲ್ಲೇ ಹೆಸರು ಬದಲಿಸಿಕೊಂಡ ಸೀಮಾ ಖಾನ್
ಕಾನ್ ಚಲನಚಿತ್ರೋತ್ಸವದಲ್ಲಿ ದೀಪಿಕಾ ಮಿಂಚಿಂಗ್.. ವಿಮಾನ ಹತ್ತುತ್ತೇನೆಂದ ರಣ್ ವೀರ್ ಸಿಂಗ್
ಜೂ.ಎನ್ ಟಿಆರ್ ಗೆ ಬರ್ತ್ ಡೇ ಸಂಭ್ರಮ; ಸಿನಿ ಸ್ಟಾರ್ಸ್ ಶುಭ ಕೋರಿದ್ದು ಹೇಗೆ?
ಮುಂದೊಂದು ದಿನ ಭಾರತ ಕಾನ್ ನಲ್ಲಿ ಕಾಣಿಸಿಕೊಳ್ಳಲ್ಲ,ಬದಲಾಗಿ ಕಾನ್ ಭಾರತದಲ್ಲಿ ಕಾಣಿಸಿಕೊಳ್ಳುತ್ತದೆ: ದೀಪಿಕಾ ಪಡುಕೋಣೆ
ಕಾನ್ ಚಲನಚಿತ್ರೋತ್ಸವ; ಜ್ಯೂರಿ ಕಾರ್ಯಕ್ಕಿಳಿದ ದೀಪಿಕಾ ಪಡುಕೋಣೆ ಮಿಂಚಿಂಗ್
ಕಾನ್ ಚಲನಚಿತ್ರೋತ್ಸವ ; ಫ್ರಾನ್ಸ್ ಗೆ ಹಾರಿದ “ಕಾನ್ಸ್ ಬೇಬಿ” ಪೂಜಾ ಹೆಗ್ಡೆ