Published
2 weeks agoon
ಬೆಂಗಳೂರು: ಆಗಸ್ಟ್ 05 (ಯು.ಎನ್.ಐ.) ಹೆತ್ತ ತಾಯಿಯೇ ಮಗುವನ್ನ ತಮ್ಮ ನಾಲ್ಕನೇ ಮಹಡಿಯ ಅಪಾರ್ಟ್ಮೆಂಟ್ನ ಬಾಲ್ಕನಿಯಿಂದ ಎಸೆದಿರುವ ಹೃದಯ ವಿದ್ರಾವಕ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಾಲ್ಕು ವರ್ಷದ ಮಗಳನ್ನು ಬಾಲ್ಕನಿಯಿಂದ ಎಸೆದ ನಂತರ ಆಕೆ ಸ್ವಲ್ಪ ಹೊತ್ತು ಅಲ್ಲೇ ನಿಂತು ನೋಡಿದ್ದಾಳೆ. ತಕ್ಷಣ ಕುಟುಂಬ ಸದಸ್ಯರು ಹೊರಗೆ ಧಾವಿಸಿ ಆಕೆಯನ್ನು ಹಿಂದಕ್ಕೆ ಎಳೆದರು.
ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಬೆಂಗಳೂರಿನ ಎಸ್ಆರ್ನಗರದ ಅಪಾರ್ಟ್ಮೆಂಟ್ನಲ್ಲಿ ಗುರುವಾರ ಈ ಭಯಾನಕ ಘಟನೆ ನಡೆದಿದೆ.
ನಾಲ್ಕು ವರ್ಷದ ಬಾಲಕಿಗೆ ಶ್ರವಣ ಮತ್ತು ವಾಕ್ ದೋಷವಿತ್ತು. ಇದರಿಂದ ಮಹಿಳೆ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ಪೊಲೀಸ್ ಪ್ರಕರಣ ದಾಖಲಿಸಿದ ನಂತರ ಆಕೆಯನ್ನು ಬಂಧಿಸಲಾಗಿದೆ.
ತಾಯಿಯು ದಂತವೈದ್ಯೆಯಾಗಿದ್ದು ಆಕೆಯ ಪತಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.
ತಾಯಿಯ ಮಾನಸಿಕ ಆರೋಗ್ಯದ ಬಗ್ಗೆಯೂ ನಾವು ಪರಿಶೀಲಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿದ ಡಾ. ರಾಜ್ ಕುಟುಂಬ
ಸ್ವಾತಂತ್ರ್ಯೋತ್ಸವದಲ್ಲಿ ಸಾವರ್ಕರ್ ಫೋಟೋ ವಿವಾದ; ಓರ್ವನಿಗೆ ಚಾಕು ಇರಿತ
ಸಂಗೊಳ್ಳಿ ರಾಯಣ್ಣನ ದೇಶಭಕ್ತಿ, ಧೈರ್ಯ ಎಲ್ಲಾ ಯುವಜನರಿಗೂ ಬರಬೇಕು: ಸಿಎಂ
ಕಾಂಗ್ರೆಸ್ #FreedomMarch: ಇಂದಿನ ಬೃಹತ್ ನಡಿಗೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಹೆಜ್ಜೆ!
ತ್ಯಾಗ ಬಲಿದಾನದ ಫಲ ಸ್ವಾತಂತ್ರ್ಯ : ಸಿದ್ದರಾಮಯ್ಯ
ಕೆಯುಡಬ್ಲ್ಯೂಜೆ ಮನೆಯಂಗಳದಲ್ಲಿ ಗೌರವ ಕಾರ್ಯಕ್ರಮ..