Connect with us


      
ದೇಶ

ಮುಂಬೈ ಒಮೈಕ್ರಾನ್: ಒಂದು ತಿಂಗಳು ಶಾಲೆಗಳು ಬಂದ್

Iranna Anchatageri

Published

on

ಮುಂಬೈ, ಜನವರಿ 03 (ಯು.ಎನ್.ಐ.) ಮುಂಬೈನಲ್ಲಿ ಹೆಚ್ಚುತ್ತಿರುವ ಒಮೈಕ್ರಾನ್ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು 1 ರಿಂದ 8 ನೇ ತರಗತಿವರೆಗಿನ ಶಾಲೆಗಳನ್ನು ಜನವರಿ 31 ರವರೆಗೆ ಮುಚ್ಚಲಾಗಿದೆ. ಬಿಎಂಸಿ ಅಧಿಕಾರಿಗಳು ನಡೆಸಿದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಲೇ ಸಾಗಿದೆ. ಅಲ್ಲದೆ, ರಾಜಧಾನಿ ಮುಂಬೈನಲ್ಲಿ ಹೆಚ್ಚಿನ ಸಂಖ್ಯೆಯ ಒಮೈಕ್ರಾನ್ ಪ್ರಕರಣಗಳು ದಾಖಲಾಗುತ್ತಿವೆ. ಭಾನುವಾರ ಮಹಾರಾಷ್ಟ್ರದಲ್ಲಿ ಹೊಸ ರೂಪಾಂತರಿಯ 50 ಪ್ರಕರಣಗಳು ವರದಿಯಾಗಿವೆ. ಶಾಲಾ ಮಕ್ಕಳಲ್ಲಿ ಸೋಂಕಿನ ಅಪಾಯವು ವೇಗವಾಗಿ ಹೆಚ್ಚಾಗುತ್ತಿರೋದ್ರಿಂದ ಮಹಾರಾಷ್ಟ್ರ ಸರ್ಕಾರ ಎಚ್ಚೆತ್ತು ಶಾಲೆಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಬಂದಿದೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಎಂಸಿ ಅಧಿಕಾರಿಗಳು ಇಂದು ಸಭೆ ನಡೆಸಿ, ಶಾಲೆಯನ್ನು ಮುಚ್ಚುವ ಸಂಬಂಧ ಚರ್ಚೆ ನಡೆಯಿತು. ಸಭೆ ಬಳಿಕ 1ರಿಂದ 8ನೇ ತರಗತಿವರೆಗಿನ ಶಾಲೆಗಳನ್ನು ಜನವರಿ 31ರವರೆಗೆ ಮುಚ್ಚಲು ನಿರ್ಧರಿಸಲಾಯಿತು. ಭಾನುವಾರ ರಾಜ್ಯದಲ್ಲಿ 11,877 ಸೋಂಕು ಪ್ರಕರಣಗಳು ವರದಿಯಾಗಿವೆ. ಅದೇ ಸಮಯದಲ್ಲಿ ಒಮೈಕ್ರಾನ್‌ನ 50 ಪ್ರಕರಣಗಳು ದಾಖಲಾಗಿವೆ.

Share