Connect with us


      




ಕರ್ನಾಟಕ

‘ತೋರ್ಪಡಿಕೆಗೆ ಮಾತ್ರ ಎಸಿಬಿ ರೇಡ್’ – ಎಚ್ ಡಿ ಕುಮಾರಸ್ವಾಮಿ

Iranna Anchatageri

Published

on

ಬೆಂಗಳೂರು: ಮಾರ್ಚ್ 22 (ಯು.ಎನ್.ಐ.) ರಾಜ್ಯದಲ್ಲಿ ಎಸಿಬಿ ರೇಡ್ ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಡಿಎ ಬ್ರೋಕರ್‌ಗಳ ಮೇಲೆ ಎಸಿಬಿ ದಾಳಿ ವಿಚಾರ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಸಿಬಿಯಿಂದ ಇತ್ತೀಚಿನ ದಾಳಿ ಪ್ರಕರಣವನ್ನು ನೋಡುತ್ತಿದ್ದೇನೆ. ಎಷ್ಟು ಪ್ರಕರಣದಲ್ಲಿ ಶಿಕ್ಷೆಯಾಗಿದೆ? ಎಷ್ಟು ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಆಗಿದೆ? ಕೇವಲ ಎಸಿಬಿ ದಾಳಿ ನಡೆಸಿದರೆ ಪರಿಣಾಮ ಸಿಗಲ್ಲ. ಏನು ಕ್ರಮ ಆಗಿದೆ ಅನ್ನೋದು ಯಾರಿಗೂ ಮಾಹಿತಿ ಇಲ್ಲ. ಐ ವಾಷಿಂಗ್‌ಗೋಸ್ಕರ ಎಸಿಬಿ ದಾಳಿ ನಡೆಯುತ್ತಿದೆ. ಎಸಿಬಿ ರೈಡ್ ತೋರ್ಪಡಿಕೆಗೆ ನಡೆಯುತ್ತಿದೆ ಯಾವುದೇ ಪರಿಣಾಮ ಆಗುತ್ತಿಲ್ಲ ಎಂದು ಎಚ್ ಡಿ ಕೆ ಅಸಮಾಧಾನ ಹೊರಹಾಕಿದರು.

ಬಿಡಿಎ ಬ್ರೋಕರ್ ಗಳ ಮೇಲೆ ಎಸಿಬಿ ದಾಳಿ ಕೇವಲ ಐವಾಷಿಂಗ್ ಎಂದು ಎಚ್‌ಡಿಕೆ ಮಾಡಿರುವ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಾಗುತ್ತಿದೆ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಎಸಿಬಿ ರೇಡ್ ಹಿಂದೆ ಏನು ಆಗಿತ್ತೋ ಗೊತ್ತಿಲ್ಲ. ಈಗ ಪ್ರಾಮಾಣಿಕವಾಗಿ ರೇಡ್ ಆಗುತ್ತಿದೆ. ತಪ್ಪಿತಸ್ಥರ ಮೇಲೆ ಎಫ್ ಐಆರ್ ದಾಖಲಾಗುತ್ತಿದೆ. ಇದು ಸಿಎಂಯಡಿ ಬರುತ್ತದೆ. ಪ್ರಾಮಾಣಿಕವಾಗಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವ ಕೆಲಸವಾಗ್ತಿದೆ ಎಂದು ತಿಳಿಸಿದರು.

Share