Connect with us


      




ದೇಶ

ವಿವಾಹ ವಯಸ್ಸು ಹೆಚ್ಚಿಸುವ 31 ಸದಸ್ಯರ ಸಂಸದೀಯ ಸಮಿತಿಯಲ್ಲಿ ಒಬ್ಬಳೇ ಮಹಿಳೆ! ವೆಂಕಯ್ಯ ನಾಯ್ಡುಗೆ ಪ್ರಿಯಾಂಕಾ ಕಳವಳ ಪತ್ರ

Vanitha Jain

Published

on

ನವದೆಹಲಿ: ಜನವರಿ 03(ಯು.ಎನ್.ಐ) ಮಹಿಳೆಯರ ಕಾನೂನುಬದ್ಧ ವಿವಾಹದ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ ಮಹತ್ವದ ಮಸೂದೆಯನ್ನು ಪರಿಶೀಲಿಸಲು 31 ಸದಸ್ಯರಿರುವ ಸಂಸದೀಯ ಸಮಿತಿಯಲ್ಲಿ ಕೇವಲ ಒಬ್ಬ ಮಹಿಳಾ ಸಂಸದೆ ಮಾತ್ರ ಸ್ಥಾನ ನೀಡಿದ್ದಾರೆ.

ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗಳ 31 ಸದಸ್ಯರ ಸಂಸದೀಯ ಸ್ಥಾಯಿ ಸಮಿತಿಯು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಎಂಸಿ) ಸುಶ್ಮಿತಾ ದೇವ್ ಎಂಬ ಏಕೈಕ ಮಹಿಳೆಯನ್ನು ಹೊಂದಿದೆ.

ಸದಸ್ಯರ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಒಂಟಿ ಮಹಿಳೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಸಂಸದೆ ಪ್ರಿಯಾಂಕಾ ಚತುರ್ವೇದಿ ಸೋಮವಾರ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಬಾಲ್ಯವಿವಾಹ ನಿμÉೀಧ (ತಿದ್ದುಪಡಿ) ಮಸೂದೆಯ ಚರ್ಚೆಯು ಬಿಜೆಪಿಯ ರಾಜ್ಯಸಭಾ ಸಂಸದ ವಿನಯ್ ಸಹಸ್ತ್ರಬುದ್ಧೆ ನೇತೃತ್ವದ ಸಂಸದೀಯ ಸಮಿತಿಯು ನಡೆಸಲಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ದೇಶಾದ್ಯಂತ ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರುವ ನಿರ್ಣಾಯಕ ಮಸೂದೆಯನ್ನು ಮಂಡಿಸಲಾಯಿತು. ಅದುವೇ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆ. ಈ ಮಸೂದೆಯು ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ ಪ್ರಯತ್ನ. ಲೋಕಸಭೆಯಲ್ಲಿ ಮಂಡಿಸಿದ ನಂತರ ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗಳ ಇಲಾಖೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಯಿತು. ಆದಾಗ್ಯೂ, ಸಮಿತಿಯಲ್ಲಿ ಒಬ್ಬ ಮಹಿಳಾ ಸಂಸದೆ ಮಾತ್ರ ಸದಸ್ಯರಾಗಿದ್ದಾರೆ. ಇದು ನಿರಾಶಾದಾಯಕವಾಗಿದೆ ಎಂದು ಚತುರ್ವೇದಿ ಪತ್ರದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಮಸೂದೆಯ ಸುತ್ತ ಚರ್ಚೆ ನಡೆಯಬೇಕಾದಾಗ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಮತ್ತು ಪಾಲ್ಗೊಳ್ಳಲು ಅವಕಾಶ ಇರಬೇಕು ಎಂದು ಈ ಮೂಲಕ ನಾನು ನಿಮ್ಮನ್ನು ವಿನಂತಿಸುತ್ತೇನೆ. ಎಲ್ಲಾ ಮಧ್ಯಸ್ಥಗಾರರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಮತ್ತು ಎಲ್ಲರ, ವಿಶೇಷವಾಗಿ ಮಹಿಳೆಯರ ಧ್ವನಿಯನ್ನು ಸಮಿತಿಯು ಆಲಿಸುತ್ತದೆ ಮತ್ತು ಅರ್ಥಮಾಡಿಕೊಳ್ಳುತ್ತದೆ ಎಂದು ಚತುರ್ವೇದಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸಂಬಂಧಿಸಿದ ಸಮಿತಿಯಲ್ಲಿ ನಾನು ಏಕೈಕ ಮಹಿಳಾ ಸದಸ್ಯೆ ಎಂದು ತಿಳಿದು ನನಗೆ ತುಂಬಾ ಆಶ್ಚರ್ಯವಾಯಿತು, ಇದು ಮಸೂದೆಯ ನೋಡಲ್ ಸಚಿವಾಲಯವಾಗಿದೆ. ಇಲ್ಲಿ ಲಿಂಗ ಅಸಮತೋಲನವಿದೆ. ವಯೋಮಿತಿ ಮಸೂದೆಗೆ ಎಲ್ಲಾ ಮಧ್ಯಸ್ಥಗಾರರ ವಿಶೇಷವಾಗಿ ಮಹಿಳಾ ನಾಯಕರ ಅಭಿಪ್ರಾಯಗಳು ಬೇಕಾಗುತ್ತವೆ. ಎಲ್ಲಾ ಮಹಿಳಾ ಸಂಸದರು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ನೀಡಲು ಸಮಿತಿಯ ಅಧ್ಯಕ್ಷರಿಗೆ ಅವಕಾಶ ನೀಡಬೇಕು ಎಂದು ನಾನು ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

Share