Connect with us


      
ದೇಶ

ರಾಷ್ಟ್ರಪತಿ ಚುನಾವಣೆ: ಮೋದಿ, ರಾಜನಾಥ್ ಸಿಂಗ್ ಬೆಂಬಲ ಕೋರಿದ ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ

Vanitha Jain

Published

on

ನವದೆಹಲಿ: ಜೂನ್ 25 (ಯು.ಎನ್.ಐ.) ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ಸೋಮವಾರ ಪ್ರತಿಪಕ್ಷದ ಉನ್ನತ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದು, ಈ ಹಿನ್ನೆಲೆ ಪ್ರತಿಯೊಬ್ಬರ ಬೆಂಬಲ ಕೋರಿದ್ದಾರೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಜುಲೈ 18 ರ ಚುನಾವಣೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ನಾವು ನಮ್ಮ ಪ್ರಚಾರವನ್ನು ಶ್ರದ್ಧೆಯಿಂದ ಪ್ರಾರಂಭಿಸಿದ್ದೇವೆ ಮತ್ತು ಚುನಾವಣೆಯಲ್ಲಿ ಬೆಂಬಲವನ್ನು ಕೋರಲು ಪ್ರತಿಯೊಬ್ಬರನ್ನು ಬಳಿಯೂ ಮನವಿ ಮಾಡುತ್ತೇವೆ. ಇನ್ನು ಸಿನ್ಹಾ ಅವರು ಮೋದಿ ಮತ್ತು ರಾಜನಾಥ್ ಸಿಂಗ್ ಅವರ ಕಚೇರಿಗಳಿಗೆ ಕರೆ ಮಾಡಿ ಸಂದೇಶವನ್ನು ಕಳುಹಿಸಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮೂಲಗಳು ತಿಳಿಸಿವೆ.

ಯಶವಂತ್ ಸಿನ್ಹಾ ಅವರು ತಮ್ಮ ಮಾರ್ಗದರ್ಶಕ ಮತ್ತು ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಎಲ್ ಕೆ ಅಡ್ವಾಣಿಯವರನ್ನು ಸಹ ಭೇಟಿ ಮಾಡಿದ್ದಾರೆ. ಶುಕ್ರವಾರ ನಾಮಪತ್ರ ಸಲ್ಲಿಸಿದ ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ನೇತೃತ್ವದ ಜೆಎಂಎಂ ಮತ್ತು ಜನತಾ ದಳ (ಜಾತ್ಯತೀತ) ಬೆಂಬಲ ಸೂಚಿಸಿದೆ.

Share