Connect with us


      
ಕರ್ನಾಟಕ

ಸಂಘಟನೆಗಳು, ಸಮುದಾಯ ಮುಖಂಡರ ಹೇಳಿಕೆಗೆ ಬಡವರು ಬಲಿಯಾಗುತ್ತಿದ್ದಾರೆ: ಸುಮಲತಾ

Vanitha Jain

Published

on

ಬೆಂಗಳೂರು: ಏಪ್ರಿಲ್ 11 (ಯು.ಎನ್.ಐ.) ಸಂಘಟನೆಗಳು, ಸಮುದಾಯದ ಮುಖಂಡರ ಹೇಳಿಕೆಗಳಿಗೆ ಬಡವರು ಬಲಿಯಾಗುತ್ತಿದ್ದಾರೆ. ಎಲ್ಲರೂ ಶಾಂತಿಯಿಂದ ಇರಬೇಕಾಗುತ್ತದೆ. ಪ್ರಚೋದನೆ ಮಾಡುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತನಾಡಿದ ಅವರು, ಮುಸ್ಕಾನ್ ಗೆ ಸಂಘಟನೆ ಸಂಪರ್ಕ ಬಗ್ಗೆ ತನಿಖೆಗೆ ಆಗ್ರಹಿಸಿ ಸಿಎಂಗೆ ಸಂಸದ ಅನಂತ್ ಕುಮಾರ್ ಹೆಗ್ಡೆ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತನಿಖೆ ನಡೆದರೆ ಸತ್ಯ ಹೊರಗೆ ಬರುತ್ತೆ. ಆದ್ರೆ ಮಂಡ್ಯದಲ್ಲಿ ವಾತಾವರಣ ಶಾಂತಿಯಿಂದ ಇದೆ. ತನಿಖೆ ಆಗಬೇಕು, ವಿಡಿಯೋದಲ್ಲಿ ಹೇಳಿರೋದು ನಿಜವಾ ಇಲ್ವಾ ಅಂತ ಗೊತ್ತಾಗುತ್ತೆ ಎಂದು ಹೇಳಿದರು.

ಮಂಡ್ಯದಲ್ಲಿ, ರಾಜ್ಯದಲ್ಲಿ ವಾತಾವರಣ ಶಾಂತಿಯಿಂದಿದೆ. ಸಮುದಾಯದ ನಾಯಕರು, ರಾಜಕೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾರೂ ಶಾಂತಿ ವಾತಾವರಣ ಕೆಡಿಸುವ ಹೇಳಿಕೆ ಕೊಡಬಾರದು. ರಾಜಕೀಯ ಲಾಭಕ್ಕೆ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ಹೇಳಿದರು.

Share