Connect with us


      
ದೇಶ

ನಿಗೂಢವಾಗಿ ಸಾವನ್ನಪ್ಪಿವೆ 50ಕ್ಕೂ ಹೆಚ್ಚು ಜಾನುವಾರುಗಳು, ತನಿಖೆಗೆ ಆಗ್ರಹ

Vanitha Jain

Published

on

ಅಮ್ರೋಹಾ: ಆಗಸ್ಟ್ 05 (ಯು.ಎನ್.ಐ.) ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಪ್ರದೇಶದ ಗೋಶಾಲೆಯಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿಗೂಢವಾಗಿ ಸಾವನ್ನಪ್ಪಿದ ಜಾನುವಾರುಗಳ ತನಿಖೆಗೆ ಆದೇಶಿಸಿದ್ದು, ಪಶುಸಂಗೋಪನಾ ಸಚಿವ ಧರಂ ಪಾಲ್ ಸಿಂಗ್ ಅವರು ಅಮ್ರೋಹಾಗೆ ತೆರಳಿ ಪರಿಶೀಲನೆ ನಡೆಸಿದರು.

ಮೇವು ತಿಂದ ಹಸುಗಳು ಸಂಜೆ ಅಸ್ವಸ್ಥಗೊಂಡಿವೆ ಎಂದು ಅಮ್ರೋಹದ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ.ಕೆ.ತ್ರಿಪಾಠಿ ತಿಳಿಸಿದ್ದಾರೆ. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.

50 ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಲಾಂಗೆಹ್ ದೃಢಪಡಿಸಿದರು. ಡಿಎಂ ಪ್ರಕಾರ, ಗೋಶಾಲೆಯ ಆಡಳಿತವು ತಾಹಿರ್ ಎಂದು ಗುರುತಿಸಲಾದ ವ್ಯಕ್ತಿಯಿಂದ ಮೇವನ್ನು ಸಂಗ್ರಹಿಸಲಾಗಿತ್ತು. ತಾಹಿರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆತನನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಗೋಶಾಲೆಯ ಉಸ್ತುವಾರಿ ಹೊತ್ತಿರುವ ಗ್ರಾಮಾಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Share