Connect with us


      




ದೇಶ

ಪಂಚರಾಜ್ಯ ಚುನಾವಣಾ ಮತ ಎಣಿಕೆಗೆ ಎಷ್ಟು ಮಂದಿ ಅಧಿಕಾರಿಗಳ ನೇಮಿಸಲಾಗಿದೆ ಗೊತ್ತೇ?

Vanitha Jain

Published

on

ನವದೆಹಲಿ: ಮಾರ್ಚ್ ೧೦ (ಯು.ಎನ್.ಐ.) ಪಂಚರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲಿ ಮತ ಎಣಿಕೆ ಆರಂಭವಾಗಿದ್ದು, ಐದು ರಾಜ್ಯಗಳಲ್ಲಿ ಗುರುವಾರ ನಡೆಯುತ್ತಿರುವ ಮತ ಎಣಿಕೆಗೆ 50,000ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್‌ನಲ್ಲಿ ಬೆಳಗ್ಗೆ 8 ಗಂಟೆಗೆ ಎಣಿಕೆ ಆರಂಭವಾಗಿದೆ. ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯು ಫೆಬ್ರವರಿ 10 ಮತ್ತು ಮಾರ್ಚ್ 7ರ ನಡುವೆ ಏಳು ಹಂತಗಳಲ್ಲಿ ನಡೆಯಿತು.

ವಿದ್ಯುನ್ಮಾನ ಮತಯಂತ್ರಗಳಿಂದ (ಇವಿಎಂ) ಫಲಿತಾಂಶ ದಾಖಲಿಸಲು ಸುಮಾರು 1,200 ಎಣಿಕೆ ಹಾಲ್‌ಗಳನ್ನು ಸ್ಥಾಪಿಸಲಾಗಿದೆ. ಗರಿಷ್ಠ 403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವು 750 ಕ್ಕೂ ಹೆಚ್ಚು ಮತ ಎಣಿಕೆ ಹಾಲ್‌ಗಳನ್ನು ಹೊಂದಿದ್ದರೆ, ಪಂಜಾಬ್ 200 ಕ್ಕೂ ಹೆಚ್ಚು ಹಾಲ್ ಗಳನ್ನು ಹೊಂದಿದೆ. ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಐದು ರಾಜ್ಯಗಳಲ್ಲಿ 650 ಕ್ಕೂ ಹೆಚ್ಚು ಎಣಿಕೆ ವೀಕ್ಷಕರನ್ನು ನಿಯೋಜಿಸಲಾಗಿದೆ.

ಮತ ​​ಎಣಿಕೆಗೆ ಪ್ರತ್ಯೇಕ ಮಾರ್ಗಸೂಚಿ

ಕೊರೋನಾ, ಒಮೈಕ್ರಾನ್ ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಮತ ​​ಎಣಿಕೆಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ. ಚುನಾವಣಾ ಸಮಿತಿಯ ಮಾರ್ಗಸೂಚಿಗಳ ಪ್ರಕಾರ, ಎಣಿಕೆ ಪ್ರಕ್ರಿಯೆಯ ಮೊದಲು ಮತ್ತು ನಂತರ ಎಣಿಕೆ ಕೇಂದ್ರಗಳನ್ನು ಸೋಂಕುರಹಿತಗೊಳಿಸಬೇಕು. ಸರಿಯಾದ ಕಿಟಕಿಗಳು ಮತ್ತು ಎಕ್ಸಾಸ್ಟ್ ಫ್ಯಾನ್‌ಗಳೊಂದಿಗೆ ಎಣಿಕೆ ಹಾಲ್‌ಗಳು ಸಾಕಷ್ಟು ದೊಡ್ಡದಾಗಿರಬೇಕು. ಸಂಪೂರ್ಣ ಲಸಿಕೆ ಹಾಕಿದ್ದರೂ, ಯಾರಿಗಾದರೂ ಜ್ವರ ಅಥವಾ ಶೀತದಂತಹ ಕೋವಿಡ್ ರೋಗಲಕ್ಷಣಗಳು ಇದ್ದಲ್ಲಿ, ಅವರಿಗೆ ಎಣಿಕೆ ಹಾಲ್ ಒಳಗೆ ಪ್ರವೇಶವಿಲ್ಲ. ಪ್ರತಿ ಎಣಿಕೆ ಅಧಿಕಾರಿ ಮತ್ತು ಭದ್ರತಾ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್ ಮತ್ತು ಹ್ಯಾಂಡ್ ಗ್ಲೌಸ್ ಗಳನ್ನು ಒದಗಿಸಲಾಗುವುದು. ಎಣಿಕೆ ಹಾಲ್‌ನಲ್ಲಿ ಏಳಕ್ಕಿಂತ ಹೆಚ್ಚು ಮತ ಎಣಿಕೆ ಟೇಬಲ್‌ಗಳನ್ನು ಹಾಕುವಂತಿಲ್ಲ ಎಂದು ಜನವರಿ 8 ರಂದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ವೇಳೆ ಚುನಾವಣಾ ಸಮಿತಿ ತಿಳಿಸಿದೆ.

Share