Published
5 months agoon
By
Vidyashree Sಶಾಂಘೈ: ಚೀನಾದ ಪೂರ್ವ ಝೆಜಿಯಾಂಗ್ ಪ್ರಾಂತ್ಯದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯಿಂದಾಗಿ ಸರ್ಕಾರ ಕೋವಿಡ್ ನಿರ್ಬಂಧಗಳನ್ನು ಬಿಗಿಗೊಳಿಸಿರುವುದರಿಂದಾಗಿ ಹಲವು ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಸೋಮವಾರ ತಿಳಿಸಿವೆ.
ದಿನದ ಆರಂಭಿಕ ವಹಿವಾಟಿನಲ್ಲಿ ಈ ಕಂಪನಿಗಳ ಷೇರು ಮೌಲ್ಯಗಳು ತೀವ್ರ ಕುಸಿತಕಂಡಿವೆ.
ಝೆಜಿಯಾಂಗ್ ಪ್ರಾಂತ್ಯದಲ್ಲಿ ಡಿಸೆಂಬರ್ 6 ರಿಂದ 12ರ ಅವಧಿಯಲ್ಲಿ ಒಟ್ಟು 173 ಪ್ರಕರಣಗಳು ವರದಿಯಾಗಿವೆ. ಅಕ್ಟೋಬರ್ ತಿಂಗಳಲ್ಲಿ ಈ ಪ್ರಾಂತ್ಯದಲ್ಲಿ ಕೇವಲ ಒಂದು ಪ್ರಕರಣ ವರದಿಯಾಗಿತ್ತು.
ಸ್ಥಳೀಯ ಸರ್ಕಾರದ ಕೋವಿಡ್ ನಿರ್ಬಂಧಗಳಿಂದಾಗಿ ಝೆಜಿಯಾಂಗ್ ನಗರದಲ್ಲಿನ ತನ್ನ ಅಂಗಸಂಸ್ಥೆಯು ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎಂದು ಚೀನಾದ ಝೆಜಿಯಾಂಗ್ ಜಿಂದುನ್ ಫ್ಯಾನ್ಸ್ ಕಂಪನಿ ತಿಳಿಸಿದೆ.
ಉತ್ಪನ್ನಗಳ ವಿತರಣೆಯಲ್ಲಿ ವಿಳಂಬವಾಗಲಿದ್ದು, ಈ ತಿಂಗಳು ವ್ಯವಹಾರಕ್ಕೆ ತೊಡಕು ಉಂಟಾಗಲಿದೆ. ಆದರೆ, ಈ ವರ್ಷದ ವಾರ್ಷಿಕ ಫಲಿತಾಂಶಗಳ ಮೇಲಿನ ಕುಸಿತವು ಸೀಮಿತವಾಗಿರುತ್ತದೆ ಎಂದೂ ಕಂಪನಿ ತಿಳಿಸಿದೆ.
ನೇಪಾಳದ ನೆಲದಲ್ಲಿ ನಿಂತು ‘ರಾಮ ಮಂದಿರ’ ಪ್ರಸ್ತಾಪಿಸಿದ ಪ್ರಧಾನಿ ಮೋದಿ
ನೇರಪ್ರಸಾರದಲ್ಲಿ ಅಡುಗೆ ಮಾಡುವಾಗ ಹೊತ್ತಿಕೊಂಡ ಬೆಂಕಿ!, ಮಹಿಳೆಯ ಕಿರುಚಾಟ
ಗೋಧಿ ರಫ್ತು ನಿಷೇಧ ಬೆನ್ನಲ್ಲೇ ದಾಖಲೆ ಮಟ್ಟಕ್ಕೆ ಏರಿದ ಗೋಧಿ ಬೆಲೆ
ಇಂಡೋನೇಷ್ಯಾದಲ್ಲಿ ಕಂಬಕ್ಕೆ ಬಸ್ ಡಿಕ್ಕಿ: 15 ಸಾವು, 16 ಮಂದಿಗೆ ಗಾಯ
ಲುಂಬಿನಿಗೆ ಆಗಮಿಸಿದ ಮೋದಿಯವರಿಗೆ ದೇವುಬಾ ಭವ್ಯ ಸ್ವಾಗತ
ಪಾಕಿಸ್ತಾನದಲ್ಲಿ ಇಬ್ಬರು ಸಿಖ್ ನಾಗರಿಕರ ಹತ್ಯೆ