Connect with us


      




ವಿದೇಶ

ಫೆಸಿಫಿಕ್ ಸಾಗರದಲ್ಲಿ ಅಲ್ಲಕಲ್ಲೋಲ, ಸುನಾಮಿ ಎಚ್ಚರಿಕೆ

Published

on

ಜನೆವರಿ: 15 (ಯು.ಎನ್.ಐ.) ಪೆಸಿಫಿಕ್ ಸಾಗರದ ಟೊಂಗಾ ಬಳಿ ಬೃಹತ್ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಪರಿಣಾಮದಿಂದ ಕರಾವಳಿ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಬೂದಿ ಆವರಿಸಿದೆ. 20 ಕಿಲೋಮೀಟರ್ ಎತ್ತರಕ್ಕೆ ಆಕಾಶವನ್ನು ಬೂದು ಮೋಡಗಳು ಆವರಿಸಿವೆ. ಭಾರಿ ಕಂಪನದಿಂದಾಗಿ ಎರಡು ಕಡೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಟೊಂಗಾ ಜಿಯೋಲಾಜಿಕಲ್ ಸೇವೆಗಳ ಸಂಸ್ಥೆಯ ಪ್ರಕಾರ, ಪೆಸಿಫಿಕ್‌ನಲ್ಲಿ ಹಲವಾರು ದ್ವೀಪದೇಶಗಳಿವೆ ಮತ್ತು ಸಾಗರದ ಒಳಭಾಗದಲ್ಲಿ ಅನೇಕ ಜ್ವಾಲಾಮುಖಿಗಳಿವೆ. ಟೊಂಗೆ ಬಳಿಯಿದ್ದ ಹಂಗಾ ಜ್ವಾಲಾಮುಖಿ ಟೊಂಗಾ-ಹಂಗಾ ಮೇಲೆ ಇದ್ದಕ್ಕಿದ್ದಂತೆ ಸ್ಫೋಟಿಸಿತು.ಹಂಗಾ ಟೊಂಗಾ ಹಪೈ ಜ್ವಾಲಾಮುಖಿಯು ಟೊಂಗಾದ ರಾಜಧಾನಿ ನೋಕುಅಲೋಫಾದಿಂದ 65 ಕಿ.ಮೀ ದೂರದಲ್ಲಿದೆ. ಸ್ಫೋಟದ ಶಬ್ದಗಳು 8 ನಿಮಿಷಗಳ ಕಾಲ ಒಂದೇ ಸಮನೆ ಕೇಳಿಬಂದಿದೆ. ಸ್ಪೋಟದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸ್ಪೋಟಗೊಂಡ ಸ್ಫಳದಿಂದ ಸುಮಾರು 800 ಕಿ.ಮಿ ದೂರದಲ್ಲಿರುವ ಫೀಜಿ ಯಲ್ಲೂ ಸ್ಪೋಟದ ಶಬ್ದ ಕೇಳಿ ಬಂದಿದೆ.

ಭೂಕಂಪದ ಕೇಂದ್ರ ಬಿಂದು ಪೆಸಿಫಿಕ್ ಮಹಾಸಾಗರದ ತಳದಲ್ಲಿ ಕಂಡುಬಂದಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಹಲವಾರು ಉಪಗ್ರಹಗಳು ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟವನ್ನು ಚಿತ್ರೀಕರಿಸಿವೆ. ಹಿಮವಾರಿ ಸ್ಯಾಟಲೈಟ್ ಚಿತ್ರೀಕರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸ್ಫೋಟದ ತೀವ್ರತೆಗೆ ನ್ಯೂಜಿಲೆಂಡ್, ಟೊಂಗಾ ಮತ್ತು ಫಿಜಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲಾಯಿತು. ಕರಾವಳಿ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಎತ್ತರದ ಪ್ರದೇಶಗಳಿಗೆ ತಲುಪಲು ಹಲವು ದೇಶಗಳಲ್ಲಿ ಎಚ್ಚರಿಕೆ ನೀಡಲಾಗುತ್ತಿದೆ. ಶುಕ್ರವಾರ ಸುನಾಮಿ ಎಚ್ಚರಿಕೆಯನ್ನು ಹಿಂತೆಗೆದುಕೊಂಡ ಕೆಲವೇ ಗಂಟೆಗಳ ನಂತರ ಮತ್ತೆ ಎಚ್ಚರಿಕೆ ನೀಡಲಾಗಿದೆ. ಮತ್ತೊಂದೆಡೆ, ಸುನಾಮಿ ಹೆಸರಿನಲ್ಲಿ ಕೆಲವು ಹಳೆಯ, ನಕಲಿ ವೀಡಿಯೊಗಳು ಸಹ ವೈರಲ್ ಆಗುತ್ತಿವೆ.

 

 

ವಿದೇಶ

ಚೀನಾದ ಜನನ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಕುಸಿತ!

Published

on

ಬೀಜಿಂಗ್ : ಜನೆವರಿ 17 (ಯು.ಎನ್.ಐ.) ಡ್ರ್ಯಾಗನ್ ರಾಷ್ಟ್ರ ಚೀನಾದಿಂದ ಶಾಕಿಂಗ್ ಸುದ್ದಿಯೊಂದು ಬೆಳಕಿಗೆ ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಜನನ ಪ್ರಮಾಣವು ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಒಂದೆಡೆ ವಯಸ್ಸಾದವರ ಸಂಖ್ಯೆ ಹೆಚ್ಚಳದಿಂದ ಚೀನಾದ ಆರ್ಥಿಕ ಬೆಳವಣಿಗೆ ಮೇಲೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಇನ್ನೊಂದೆಡೆ ಜನನ ಪ್ರಮಾಣದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಆಗಿರುವುದು ಚೀನಾದ ಆರ್ಥಿಕ ಪರಿಸ್ಥಿತಿ  ಮತ್ತಷ್ಟು ಹದಗೆಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ನಿಧಾನಗತಿಯ ಆರ್ಥಿಕತೆ ಮತ್ತು ದಶಕಗಳಲ್ಲೇ ದೇಶದ ದುರ್ಬಲ ಜನಸಂಖ್ಯೆಯ ಬೆಳವಣಿಗೆಯ ಮಧ್ಯೆ ಬೀಜಿಂಗ್ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಡೇಟಾ ಪ್ರಕಾರ, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಚೀನಾದ ಜನನ ಪ್ರಮಾಣವು 1,000 ಜನರಿಗೆ 7.52ಕ್ಕೆ ಇಳಿದಿದೆ. 2020 ರಲ್ಲಿ 8.52ರಷ್ಟು ಜನನ ಪ್ರಮಾಣ ಹೊಂದಿದ್ದ ಚೀನಾ, 7.52ರಷ್ಟು ಮಕ್ಕಳ ಹುಟ್ಟುವಿಕೆ ರೇಟ್ ಕುಸಿತಗೊಂಡಿರುವುದರಿಂದ ಬಿಕ್ಕಟ್ಟು ಎದುರಿಸುವಂತಾಗಿದೆ.
ದೇಶದ ವಾರ್ಷಿಕ ಅಂಕಿ-ಅಂಶಗಳ ಪ್ರಕಾರ 1978ರ ಬಳಿಕ ಇಂಥದ್ದೊಂದು ಕುಸಿತವನ್ನು ಚೀನಾ ಕಂಡಿರಲಿಲ್ಲ. ಅಲ್ಲದೆ, 1949ರಲ್ಲಿ ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಸ್ಥಾಪನೆ ಆದ ಬಳಿಕ ಇದು ಅತ್ಯಂತ ಕಡಿಮೆ ಜನನ ಪ್ರಮಾಣ ಆಗಿದೆ. 2016ರಲ್ಲಿ ಅಧಿಕಾರಿಗಳು ಚೀನಾದ “ಒಂದು ಮಗುವಿನ ನೀತಿ” ಯನ್ನು ಸಡಿಲಗೊಳಿಸಿ ದಂಪತಿಗಳು ಎರಡು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿತ್ತು. ವಿಶ್ವದಲ್ಲೇ ಅತ್ಯಂತ ಕಠಿಣ ಕುಟುಂಬ ಯೋಜನೆ ಹೊಂದಿರುವ ಚೀನಾದಲ್ಲಿ ಈ ಸಡಿಲಿಕೆ ಕೈಗೊಂಡ್ರೂ ಯಾವುದೇ ಬದಲಾವಣೆ ಆಗದೇ ಇರುವುದು ಚೀನಾಕ್ಕೆ ಹಿನ್ನೆಡೆಯಾಗಿದೆ.

Continue Reading

ವಿದೇಶ

ಜೊಕೊವಿಕ್‌ ಗೆ ಅಘಾತ ನೀಡಿದ ಆಸ್ಟ್ರೇಲಿಯಾ ಕೋರ್ಟ್‌.. ಮೂರು ವರ್ಷ ನೋ ಎಂಟ್ರಿ !

Published

on

By

ಸಿಡ್ನಿ, ಜ 16(ಯುಎನ್‌ ಐ) ಸೆರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಭಾರೀ ಹಿನ್ನಡೆ ಉಂಟಾಗಿದೆ. ವೀಸಾ ವಿಚಾರದಲ್ಲಿ ಆಸ್ಟ್ರೇಲಿಯಾದ ನ್ಯಾಯಾಲಯದಲ್ಲಿ ಅವರಿಗೆ ಅಘಾತದ ತೀರ್ಪು ಹೊರಬಿದ್ದಿದೆ. ಇದರಿಂದ ಟೈಟಲ್‌ ಉಳಿಸಿಕೊಳ್ಳುಬೇಕೆಂಬ ಜೊಕೊವಿಕ್ ಆಸೆಗೆ ತಣ್ಣಿರೆಚಿದಂತಾಗಿದೆ. ಆದರೆ, ಆಸ್ಟ್ರೇಲಿಯನ್ ಓಪನ್ ಹಿನ್ನಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳದಿದ್ದರೂ… ವಿಶೇಷ ವಿನಾಯಿತಿಯೊಂದಿಗೆ ಅವರು ಆಸ್ಟ್ರೇಲಿಯಾ ಪ್ರವೇಶಿಸಿದ್ದರು. ಈ ಕ್ರಮದಲ್ಲಿ ತೀವ್ರ ಟೀಕೆಗಳ ನಂತರ ಆಸ್ಟ್ರೇಲಿಯಾ ಸರ್ಕಾರ ಜೋಕೊ ಅವರ ವೀಸಾವನ್ನು ರದ್ದುಗೊಳಿಸಿತು.

ಆದರೆ, ಅವರು ನ್ಯಾಯಾಲಯಕ್ಕೆ ತೆರಳಿ ಜಯ ಸಾಧಿಸಿದ್ದರು. ಆದರೆ ಸರ್ಕಾರ ಮತ್ತೊಮ್ಮೆ ತನಗಿರುವ ಅಧಿಕಾರ ಬಳಸಿ ವೀಸಾ ರದ್ದುಗೊಳಿಸಿತು. ಜೊಕೊ ಎರಡನೇ ಬಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ.. ಈ ಬಾರಿ ಅವರಿಗೆ ನಿರಾಸೆಯಾಯಿತು. ನ್ಯಾಯಾಲಯ ಸರ್ಕಾರದ ಪರವಾಗಿ ತೀರ್ಪು ನೀಡಿದೆ. ಕೊರೊನಾ ಪ್ರಸರಣ ಹಿನ್ನಲೆಯಲ್ಲಿ ಜನರ ಆರೋಗ್ಯ ಭದ್ರತೆಯ ದೃಷ್ಟಿಯಿಂದ ವೀಸಾ ರದ್ದುಪಡಿಸಲಾಗಿದೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಇದರೊಂದಿಗೆ ಹಾಲಿ ಚಾಂಪಿಯನ್ ಜೊಕೊ ಈ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡದೆ ನಿವೃತ್ತಿಗೊಳ್ಳಬೇಕಿರುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಜೊಕೊವಿಕ್, ‘‘ನನಗೆ ತುಂಬಾ ನಿರಾಸೆಯಾಗಿದೆ. ಆದರೆ, ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ. ದೇಶವನ್ನು ತೊರೆಯಲು ವ್ಯವಸ್ಥೆ ಮಾಡುವ ಅಧಿಕಾರಿಗಳೊಂದಿಗೆ ನಾನು ಸಹಕರಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ, ಎರಡನೇ ಬಾರಿ ವೀಸಾ ರದ್ದಾದ ಕಾರಣ ಜೋಕೊಗೆ ಇನ್ನೂ ಮೂರು ವರ್ಷಗಳ ಕಾಲ ಆಸ್ಟ್ರೇಲಿಯಾ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅಂದರೆ 2025ರವರೆಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವ ಅವಕಾಶವಿಲ್ಲ!

Continue Reading

ವಿದೇಶ

ಬೆಚ್ಚಿಬೀಳಿಸಿದ ಕತ್ತರಿ

Published

on

Scissors in the stomach
  1. ಢಾಕಾ,ಜನವರಿ 16 (ಯು.ಎನ್.ಐ)ಮನುಷ್ಯನ ದೇಹವೇ ತುಂಬಾ ವಿಚಿತ್ರ.ದೇಹದ ಬಗ್ಗೆ ವಿಚಿತ್ರವಾದ ವಿಷಯಗಳು, ಸಂಗತಿಗಳು ಆಗಾಗ ಬೆಳಕಿಗೆ ಬಂದು ಅಚ್ಚರಿಗೊಳಿಸಿಬಿಡುತ್ತವೆ.ಆದರೆ ಇದು ಪ್ರತಿ ಬಾರಿಯೂ ಸಹಜವಲ್ಲ. ಕೆಲವೊಮ್ಮೆ ವೈದ್ಯರ ನಿರ್ಲಕ್ಷ್ಯದಿಂದಲೂ ಕೆಲವು ವಿಷಯಗಳು ಪರಿಣಾಮ ಬೀರುತ್ತವೆ.ಜೀವ ಉಳಿಸಬೇಕಾದ ವೈದ್ಯರ ನಿರ್ಲಕ್ಷ್ಯತನ ಅದೆಷ್ಟೋ ಜನರನ್ನು ಅಪಾಯದ ಅಂಚಿನಿಂದ ಹಿಡಿದು ಸಾವಿಗೂ ಕಾರಣವಾಗಿದ್ದು ಇದೆ.

ಇತ್ತೀಚೆಗೆ, ಕಳೆದ 20 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಂಗ್ಲಾದೇಶದ ಮಹಿಳೆಯ ಬಗ್ಗೆ ತಿಳಿದು ಜನರು ಆಶ್ಚರ್ಯಚಕಿತರಾಗಿದ್ದಾರೆ.ಈಕೆಯನ್ನು ತಪಾಸಣೆ ಮಾಡಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ.

55 ವರ್ಷದ ಬಚೇನಾ ಖಾತುನ್ ಎಂಬ ಬಾಂಗ್ಲಾದೇಶದ ಮಹಿಳೆ ಈ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಬಚೇನಾ ಕಳೆದ 20 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. 2002 ರಲ್ಲಿ ಬಾಂಗ್ಲಾದೇಶದ ಚೌಡಂಗಾದಲ್ಲಿ ಪಿತ್ತಕೋಶದ ಕಲ್ಲಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು.ಈ ಮಹಿಳೆ ತನ್ನ ಜೀವನದ ಸಂಪಾದನೆಯನ್ನು ಪೂರ್ತಿಯಾಗಿ ತನ್ನ ಆಪರೇಷನ್‌ಗಾಗಿ ಹಾಕಿದ್ದಳು. ಆದರೆ ಆಸ್ಪತ್ರೆಯಿಂದ ಹೊರಬಂದ ಎರಡು ದಿನಗಳ ನಂತರ ಆಕೆಗೆ ಹೊಟ್ಟೆ ನೋವು ಪ್ರಾರಂಭವಾಯಿತು. ಮತ್ತೆ ಆಸ್ಪತ್ರೆಯಲ್ಲಿ ತೋರಿಸಿದಾಗ, ವೈದ್ಯರು ಗಮನ ಕೊಡಬೇಡಿ ಇದು ಸಹಜ ಎಂದಿದ್ದಾರೆ.

20 ವರ್ಷಗಳಿಂದ ಹೊಟ್ಟೆ ನೋವು:

ಹೀಗೆ ಆಕೆ ಸತತ 20 ವರ್ಷ ಹೊಟ್ಟೆ ನೋವನ್ನು ಅನುಭವಿಸಿದ್ದಾಳೆ.20 ವರ್ಷಗಳ ಬಳಿಕ ಅದು ತೀವ್ರವಾದಾಗ ಇನ್ನೇನು ತಡೆಯಲು ಸಾಧ್ಯವೇ ಇಲ್ಲ ಎಂದನಿಸಿದಾಗ ಬಚೇನಾ, ಮತ್ತೆ ಬೇರೆ ಬೇರೆ ವೈದ್ಯರನ್ನು ಸಂಪರ್ಕಿಸಿದ್ದಾಳೆ. ಹೆಚ್ಚಿನ ವೈದ್ಯರು ಅವರಿಗೆ ಔಷಧಿಗಳನ್ನು ನೀಡುತ್ತಲೇ ಇದ್ದರೆ ಅನೇಕರಿಗೆ ನೋವಿನ ಕಾರಣವೇ ತಿಳಿದಿರಲಿಲ್ಲ.

ಹೊಟ್ಟೆ ನೋವಿನ ಚಿಕಿತ್ಸೆಗಾಗಿ ಬಚೇನ‌ ಸಾಕಿದ ಹಸು, ಆಸ್ತಿಪಾಸ್ತಿ ಇತ್ಯಾದಿಗಳನ್ನೆಲ್ಲ ಮಾರಬೇಕಾಯಿತು.ಏಕೆಂದರೆ ಪಾಪ ಬಚೇನಾಳಿಗೆ ಚಿಕಿತ್ಸೆಗೆ ಹಣ ಸಿಗುತ್ತಿರಲಿಲ್ಲ. 20 ವರ್ಷಗಳಿಂದ ಈ ನೋವಿನಲ್ಲೇ ಬದುಕುತ್ತಿದ್ದರೂ ಚಿಕಿತ್ಸೆ ಸಿಕ್ಕಿಲ್ಲ. ನಂತರ ಅವಳು ಒಂದು ವೈದ್ಯರ ಬಳಿಗೆ ಹೋದಾ್, ಅವರು ಎಕ್ಸ್-ರೇ ಮಾಡುವಂತೆ ಸೂಚಿಸಿದ್ದಾರೆ.

ಆಘಾತಕಾರಿ ಎಕ್ಸರೇ..

ಹೊಟ್ಟೆಯ ಎಕ್ಸರೆಯಲ್ಲಿ ಕಂಡದ್ದು ಬಹಳ ಆಶ್ಚರ್ಯಕರವಾಗಿತ್ತು. ಬಚೇನಾ ಎಕ್ಸ್-ರೇ ಕಳೆದ 20 ವರ್ಷಗಳಿಂದ ಆಕೆಯ ಹೊಟ್ಟೆಯಲ್ಲಿದ್ದ ಕಬ್ಬಿಣದ ಕತ್ತರಿಯನ್ನು ತೋರಿಸಿದೆ. ಇದನ್ನು ನೋಡಿದ ವೈದ್ಯರಿಗೂ ಬುದ್ಧಿ ಭ್ರಮಣೆಯಾಯಿತು. 20 ವರ್ಷಗಳ ಹಿಂದೆ ತನ್ನ ಆಪರೇಷನ್ ಬಗ್ಗೆ ವೈದ್ಯರಿಗೆ ಹೇಳಿದಾಗ ಅದು ವೈದ್ಯರ ನಿರ್ಲಕ್ಷ್ಯದ ಪರಿಣಾಮ ಎಂದು ಅರ್ಥವಾಯಿತು. ಕಳೆದ ಸೋಮವಾರ ಆಪರೇಷನ್ ಮಾಡಿ ದೇಹದಿಂದ ಕತ್ತರಿ ತೆಗೆಯಲಾಗಿತ್ತು. ಈಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಇದೀಗ ಅದೇ ಆಸ್ಪತ್ರೆಯಲ್ಲಿ ಮೂವರ ಸಮಿತಿ ರಚನೆಯಾಗಿದ್ದು, ಈ ರೀತಿಯ ನಿರ್ಲಕ್ಷ್ಯ ಹೇಗೆ ನಡೆದಿದೆ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ.

Continue Reading
Advertisement
ಸಿನೆಮಾ15 mins ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ30 mins ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ35 mins ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ45 mins ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು1 hour ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ1 hour ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ದೇಶ1 hour ago

ಐಐಟಿ ಬಾಂಬೆಯ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಜನೆವರಿ 17  (ಯು.ಎನ್.ಐ.) ಐಐಟಿ ಬಾಂಬೆಯ ವಿದ್ಯಾರ್ಥಿ ಸೋಮವಾರ ಮುಂಜಾನೆ ಇಲ್ಲಿನ ಪೊವೈ ಕ್ಯಾಂಪಸ್ ನಲ್ಲಿರುವ ತನ್ನ ಹಾಸ್ಟೆಲಿನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ...

ಕರ್ನಾಟಕ2 hours ago

ಕೋವಿಡ್‌ ಸೋಂಕು ಹೆಚ್ಚು; ಸಾವು ಕಡಿಮೆ:‌ ಸಚಿವ ಅಶೋಕ್

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗಿದೆ.  ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದರು....

ಆರೋಗ್ಯ2 hours ago

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨ ಲಕ್ಷ ೫೮ ಸಾವಿರ ಕೋವಿಡ್ ಪ್ರಕರಣ

ನವದೆಹಲಿ,ಜ ೧೭(ಯು ಎನ್ ಐ)ದೇಶದಲ್ಲಿ ಈವರೆಗೆ ೮ ಸಾವಿರದ ೨೦೯ ಕೋವಿಡ್-೧೯ ರೂಪಾಂತರಿ ಒಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ ಶೇಕಡ ೬ರಷ್ಟು ಪ್ರಕರಣಗಳು...

ಕರ್ನಾಟಕ2 hours ago

ಗಾಂಧಿ ಕುರಿತು ಸಂದೇಹ, ಪ್ರಶ್ನೆಗಳಿವೆಯೇ ?

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ಗಾಂಧಿ ವಿಚಾರ ವೇದಿಕೆಯು ಗಾಂಧೀಜಿ ಅವರ ಕುರಿತ ಎಲ್ಲ ಸಂದೇಹಗಳಿಗೆ ಉತ್ತರ ರೂಪಿಯಾದ ಪುಸ್ತಕವನ್ನು ಪ್ರಕಟಿಸಲು ಯೋಜಿಸಿದ್ದು, ಸಾರ್ವಜನಿಕರಿಂದ ಪ್ರಶ್ನೆಗಳನ್ನು ಆಹ್ವಾನಿಸಿದೆ....

ಟ್ರೆಂಡಿಂಗ್

Share