Connect with us


      
ದೇಶ

ಗಡಿಯಲ್ಲಿ ಮತ್ತೆ ಕಾಣಿಸಿಕೊಂಡ ಪಾಕ್ ಡ್ರೋನ್!

Iranna Anchatageri

Published

on

ಡೇರಾ ಬಾಬಾ ನಾನಕ್: ಎಪ್ರಿಲ್ 07 (ಯು.ಎನ್‌.ಐ.) ಪಾಕಿಸ್ತಾನಕ್ಕೆ ಸೇರಿದ ಡ್ರೋನ್ ಭಾರತದ ಗಡಿ ಪ್ರವೇಶಿಸಲು ಯತ್ನಿಸಿದ ಘಟನೆ ಇಂದು ನಡೆದಿದೆ. ಗುರುದಾಸ್‌ಪುರದ ಅಂತರಾಷ್ಟ್ರೀಯ ಗಡಿಯಲ್ಲಿನ ಫಾರ್ವರ್ಡ್ ಬಾರ್ಡರ್ ಪೋಸ್ಟ್ ರೋಸಾ ಪ್ರದೇಶದಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತದತ್ತ ಪ್ರವೇಶಿಸಲು ಯತ್ನಿಸುತ್ತಿದ್ದ ಡ್ರೋನ್‌ಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಧ್ಯಾಹ್ನ 1.30 ರ ಸುಮಾರಿಗೆ ತಡೆದಿದೆ. ಭಾರತೀಯ ಸೇನೆ ನಡೆಸಿದ ಫೈರಿಂಗ್ ನಿಂದಾಗಿ ಡ್ರೋನ್ ಪಾಕಿಸ್ತಾನ ಕಡೆ ವಾಪಸ್ ಆಗಿದೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ಬಿಎಸ್ಎಫ್ ಡಿಐಜಿ ಪ್ರಭಾಕರ್ ಜೋಶಿ, ಬುಧವಾರ ಮಧ್ಯರಾತ್ರಿ ಪಾಕ್ ಡ್ರೋನ್ ಮತ್ತೊಮ್ಮೆ ಭಾರತ-ಪಾಕ್ ಗಡಿಯಲ್ಲಿ ಹಾರಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಗಡಿ ಮೇಲೆ ನಿಗಾ ಇರಿಸಿದ್ದ ಬಿಎಸ್‌ಎಫ್‌ನ 89 ಬೆಟಾಲಿಯನ್ ಯೋಧರು ಭಾರತದ ಗಡಿಯತ್ತ ಪ್ರವೇಶಿಸುತ್ತಿದ್ದ ಡ್ರೋನ್‌ ಮೇಲೆ ಸುಮಾರು 16 ಸುತ್ತು ಗುಂಡು ಹಾರಿಸಿದ್ದಾರೆ. ಇದಲ್ಲದೇ ಬೆಳಕು ಸೂಸುವ ಶೆಲ್‌ಗಳನ್ನೂ ಈ ವೇಳೆ ಸಿಡಿಸಲಾಯಿತು ಎಂದು ತಿಳಿಸಿದರು. ಘಟನೆ ನಡೆದ ರೋಸಾ ಪ್ರದೇಶದಲ್ಲಿ ಬಿಎಸ್‌ಎಫ್ ಮತ್ತು ಪಂಜಾಬ್ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುವ ಮೂಲಕ ತನಿಖೆ ನಡೆಸುತ್ತಿದ್ದಾರೆ ಎಂದು ಪ್ರಭಾಕರ್ ಜೋಶಿ ತಿಳಿಸಿದರು.

Share