Connect with us


      




ವಿದೇಶ

ತನ್ನ ಹೆಂಡತಿಯೊಂದಿಗೆ ಸಂಬಂಧ ಹೊಂದಿದ ಪೊಲೀಸಪ್ಪನ ಕಿವಿ, ಮೂಗು,ತುಟಿ ಕತ್ತರಿಸಿದ ವ್ಯಕ್ತಿ

Lakshmi Vijaya

Published

on

ಲಾಹೋರ್: ಆಗಸ್ಟ್ 01 (ಯು.ಎನ್.ಐ.) ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಾನ್‌ಸ್ಟೇಬಲ್ ಒಬ್ಬರು ತಮ್ಮ ಪತ್ನಿಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಓರ್ವ ವ್ಯಕ್ತಿ ಕಾನ್‌ಸ್ಟೇಬಲ್ ನ  ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಹೋರ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಜಾಂಗ್ ಜಿಲ್ಲೆಯಲ್ಲಿ ಭಾನುವಾರ ಮುಹಮ್ಮದ್ ಇಫ್ತಿಕರ್ ಎಂಬ ಪ್ರಮುಖ ಆರೋಪಿ ತನ್ನ ಸಹಚರರೊಂದಿಗೆ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸುವ ಮೊದಲು ಕಾನ್‌ಸ್ಟೇಬಲ್ ಖಾಸಿಂ ಹಯಾತ್ ಗೆ ತೀವ್ರ ಚಿತ್ರಹಿಂಸೆ ನೀಡಿದ್ದರು ಎಂದು ತಿಳಿದುಬಂದಿದೆ.

ಹಯಾತ್ ತನ್ನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ ಇಫ್ತಿಕರ್, 12 ಸಹಚರರೊಂದಿಗೆ ಸೇರಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಆತನನ್ನು ಅಪಹರಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ತೀವ್ರ ಚಿತ್ರಹಿಂಸೆ ನೀಡಿ ಆತನ ದೇಹದ ಭಾಗಗಳನ್ನು ಚೂಪಾದ ಆಯುಧ ದಿಂದ ಕತ್ತರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾನ್‌ಸ್ಟೇಬಲ್ ನನ್ನು  ಜಂಗ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ಕಳೆದ ತಿಂಗಳು, ಪಾಕಿಸ್ತಾನ ದಂಡ ಸಂಹಿತೆಯ (ಪಿಪಿಸಿ) ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ), 384 (ಸುಲಿಗೆ) ಮತ್ತು 292 (ಅಶ್ಲೀಲತೆ) ಅಡಿಯಲ್ಲಿ ಕಾನ್‌ಸ್ಟೇಬಲ್  ಹಯಾತ್ ವಿರುದ್ಧ ಇಫ್ತಿಕರ್ ಪ್ರಕರಣ ದಾಖಲಿಸಿದ್ದರು.

ಹಯಾತ್ ತನ್ನ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾಗ ತನ್ನ ಹೆಂಡತಿಯನ್ನು ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದ ಎಂದು ಇಫ್ತಿಕರ್ ಹೇಳಿಕೊಂಡಿದ್ದರು. ತನ್ನ ಪತ್ನಿ , ಹಯಾತ್ ನನ್ನು ಭೇಟಿಯಾದಾಗ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತಪಡಿಸಿದ್ದ ಮತ್ತು ಆತ ಕೃತ್ಯದ ವಿಡಿಯೋ ಮಾಡಿ ನಂತರ ಆಕೆಗೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ ಎಂದು ಇಫ್ತಿಕರ್ ಆರೋಪಿಸಿದ್ದರು ಎನ್ನಲಾಗಿದೆ.

ಇಫ್ತಿಕರ್ ಮತ್ತು ಆತನ ಸಹಚರರ ಪತ್ತೆಗೆ ದಾಳಿ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published.

Share