Connect with us


      
ವಿದೇಶ

ಪಾಕಿಸ್ತಾನ ಹೇಡಿಗಳ ದೇಶ …. ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ದ ಬೆಂಕಿ ಉಗುಳಿದ ಮಾಜಿ ಪತ್ನಿ

UNI Kannada

Published

on

ಇಸ್ಲಾಮಾಬಾದ್‌, ಜ 3(ಯುಎನ್‌ ಐ) ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ದ ಮಾಜಿ ಪತ್ನಿ ರೆಹಮ್ ಖಾನ್ ಆಕ್ರೋಶಗೊಂಡಿದ್ದಾರೆ. ಭಾನುವಾರ ಆಕೆ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಕ್ರಮದಲ್ಲಿ ತಮ್ಮ ಮೇಲೆ ನಡೆದ ಹತ್ಯೆ ಯತ್ನವನ್ನು ವಿವರಿಸುತ್ತಾ .. ಮಾಜಿ ಪತಿ ಇಮ್ರಾನ್ ಖಾನ್‌ ವಿರುದ್ದ ಕೆಂಡ ಕಾರಿದ್ದಾರೆ. .
ಇಮ್ರಾನ್ ಖಾನ್‌ ಆಳ್ವಿಕೆಯಲ್ಲಿ ಪಾಕಿಸ್ತಾನ ರಣ ಹೇಡಿಗಳು, ಕೊಲೆಗಡುಕರು ಹಾಗೂ ದುರಾಸೆ ಜನರ ದೇಶವಾಗಿ ಬದಲಾಗಿದೆ ಎಂದು ಅವರು ಟೀಕಿಸಿದ್ದಾರೆ. “ಭಾನುವಾರ ತಮ್ಮ ಸೋದರಳಿಯನ ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಂದೂಕಿನಿಂದ ಗುಂಡಿನ ದಾಳಿ ನಡೆಸಿದಾಗ ಕಾರಿನಲ್ಲಿ ತಮ್ಮೊಂದಿಗೆ ಆಪ್ತ ಕಾರ್ಯದರ್ಶಿ, ಚಾಲಕ ಇದ್ದರು ಎಂದು ರೆಹಮ್ ಖಾನ್ ಟ್ವೀಟ್ ಮಾಡಿದ್ದಾರೆ.

ಗುಂಡಿನ ದಾಳಿ ತಮ್ಮನ್ನು ತೀವ್ರ ಕಳವಳ ಪಡುವಂತೆ ಮಾಡಿದೆ, ಭಯದಿಂದ ವಾಹನ ಹಿಂದಕ್ಕೆ ತಿರುಗಿಸಬೇಕಾಯಿತು. ಅದೃಷ್ಟವಶಾತ್ ತನ್ನ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. ಆದರೆ ಗುಂಡು ಹಾರಿಸಿದ ಘಟನೆಯ ಹಿಂದೆ ಮಾಜಿ ಪತಿ ಇದ್ದಾರೆಯೇ? ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏತನ್ಮಧ್ಯೆ, ಘಟನೆಯ ಬಗ್ಗೆ ದೂರು ನೀಡಿದ್ದರೂ ಶಾಮ್ಸ್ ಕಾಲೋನಿ (ಇಸ್ಲಾಮಾಬಾದ್) ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸರಣಿ ಟ್ವೀಟ್‌ ಮಾಡಿದ್ದಾರೆ. ಆಕೆಗೆ ನೆಟಿಜನ್‌ಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ರೆಹಮ್ ಖಾನ್ ಪಾಕಿಸ್ತಾನಿ ಮೂಲದ ಪ್ರಮುಖ ಬ್ರಿಟಿಷ್ ಪತ್ರಕರ್ತೆ. ಅವರು 2014 ರಲ್ಲಿ ಇಮ್ರಾನ್ ಅವರನ್ನು ವಿವಾಹವಾಗಿದ್ದದರು. ನಂತರ ಅಷ್ಟೇ ತ್ವರಿತವಾಗಿ ವಿಚ್ಛೇದನ ಪಡೆದುಕೊಂಡಿದ್ದರು ತದ ನಂತರ ಅವರು ರಾಜಕೀಯ ವಿಮರ್ಶಕರಾಗಿ ಬದಲಾಗಿದ್ದು, ಮಾಜಿ ಪತಿಯ ವಿರುದ್ದ ಟೀಕಾ ಪ್ರಹಾರ ನಡೆಸುತ್ತಿದ್ದರು. 2019 ರಲ್ಲಿ ನಡೆದ ಪುಲ್ವಾಮಾ ದಾಳಿಗೆ ಪ್ರತಿಕ್ರಿಯೆಯಾಗಿ, ಇಮ್ರಾನ್ ಖಾನ್ ದೇಶ (ಪಾಕಿಸ್ತಾನ) ಸೇನೆಯ ಕೈಗೊಂಬೆಯಾಗಿದೆ. ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ ಎಂದು ರೆಹಮ್‌ ಖಾನ್ ತೀವ್ರವಾಗಿ ಟೀಕಿಸಿದ್ದರು.

Share