Connect with us


      
ವಿದೇಶ

ಪಾಕ್‌ ನಲ್ಲಿ ಘೋರ… ಹಿಮದಡಿ ಸಿಲುಕಿ 22 ಮಂದಿ ಸಜೀವ ಸಮಾಧಿ

UNI Kannada

Published

on

ಇಸ್ಲಾಮಾಬಾದ್, ಜ 9 (ಯುಎನ್‌ ಐ) – ಪಾಕಿಸ್ತಾನದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ತಾಪಮಾನ ಮೈನಸ್ 8 ಡಿಗ್ರಿಗೆ ಕುಸಿದು ಒಂದೇ ಕುಟುಂಬದ ಎಂಟು ಮಂದಿ ಸೇರಿದಂತೆ 22 ಮಂದಿಯನ್ನು ಬಲಿ ಪಡೆದು ಕೊಂಡಿದೆ. ಮೃತರಲ್ಲಿ 10 ಮಕ್ಕಳು ಸೇರಿವೆ. ಇಸ್ಲಾಮಾಬಾದ್‌ನಿಂದ 28 ಮೈಲಿ ದೂರದಲ್ಲಿರುವ ಜನಪ್ರಿಯ ಗಿರಿಧಾಮ ಪಟ್ಟಣ ಮುರ್ರೆಯಲ್ಲಿ ಈ ದುರಂತ ಸಂಭವಿಸಿದೆ. ಭಾರಿ ಜನ ಸಾಗರ ಹರಿದು ಬಂದಿದ್ದರಿಂದ ಶುಕ್ರವಾರ ರಾತ್ರಿ ಸಾವಿರಾರು ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿದ್ದವು ಭಾರಿ ಹಿಮಪಾತ, ತಾಪಮಾನ ಕುಸಿತದ ಕಾರಣ ಬಹಷ್ಟು ಮಂದಿ ಹೊರ ಬರಲು ಸಾಧ್ಯವಾಗದೆ ಕಾರುಗಳಲ್ಲಿ ಉಳಿದಿದ್ದರು.

ತೀವ್ರ ಚಳಿ, ಭಾರಿ ಹಿಮಪಾತದಿಂದ ಇಸ್ಲಾಮಾಬಾದ್ ಪೊಲೀಸ್ ಅಧಿಕಾರಿ ನವೀದ್ ಇಕ್ಬಾಲ್, ಅವರ ಕುಟುಂಬದ ಎಂಟು ಸದಸ್ಯರು ಸೇರಿದಂತೆ ಒಟ್ಟು 22 ಜನರು ಕಾರುಗಳಲ್ಲಿ ಸಂಜೀವ ಸಮಾಧಿಯಾಗಿದ್ದಾರೆ. ನಾಲ್ಕು ಅಡಿಗಳಷ್ಟು ಹಿಮದಲ್ಲಿ ಸುಮಾರು ಒಂದು ಸಾವಿರ ವಾಹನಗಳು ಸಿಲುಕಿಕೊಂಡಿವೆ. ರಕ್ಷಣಾ ಪಡೆಗಳು ಪರಿಹಾರ ಕಾರ್ಯಾಚರಣೆ ಪ್ರಾರಂಭಿಸಿದ್ದವು, ಶನಿವಾರ ಸಂಜೆಯ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಮುರ್ರೆಗೆ ತೆರಳು ರಸ್ತೆಗಳನ್ನು ಭಾನುವಾರ ಬೆಳಿಗ್ಗೆ 9 ಗಂಟೆಯವರೆಗೆ ಮುಚ್ಚಲಾಗಿದೆ ಭಾರೀ ಹಿಮಪಾತದಿಂದಾಗಿ ಸೇನಾ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ.

Share