Connect with us


      
ವಿದೇಶ

ಚೀನಾದಲ್ಲಿ ಕರೋನಾ ಹೆಚ್ಚಾಗಲು ಪಾಕಿಸ್ತಾನ ಕಾರಣ! ಲಾಕ್ ಡೌನ್ ಹೇರಿಕೆ

Iranna Anchatageri

Published

on

ಬೀಜಿಂಗ್ : ಜನವರಿ 02 (ಯು.ಎನ್.ಐ.) ವಿಶ್ವದಲ್ಲೇ ಕಟ್ಟುನಿಟ್ಟಾದ ಕೋವಿಡ್ ನಿಯಮಾವಳಿಗಳು ಚೀನಾದಲ್ಲಿ ಜಾರಿಯಲ್ಲಿದ್ದರೂ ಅತಿ ಹೆಚ್ಚು ಕರೋನಾ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ವಾರ ಚೀನಾದಲ್ಲಿ 1,151 ಹೊಸ ಪ್ರಕರಣಗಳು ವರದಿಯಾಗಿವೆ. ಡಿಸೆಂಬರ್ 2019 ರಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗವು ಪ್ರಾರಂಭವಾದ ನಂತರ ಒಂದು ವಾರದಲ್ಲಿ ವರದಿಯಾದ ಅತಿ ಹೆಚ್ಚು ಪ್ರಕರಣಗಳಲ್ಲಿ ಇದಾಗಿದೆ.

ಚೀನಾದ ವಾಯುವ್ಯದಲ್ಲಿರುವ ಕ್ಸಿಯಾನ್ ನಗರದಲ್ಲಿ ಕರೋನವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಕ್ಸಿಯಾನ್‌ನಲ್ಲಿ ಏಕಾಏಕಿ ಕರೋನಾ ಕೇಸ್ ಗಳು ಉಲ್ಬಣಗೊಳ್ಳುತ್ತಿರುವುದರಿಂದ ಚೀನಿ ಸರ್ಕಾರ ತಲೆಕೆಡಿಸಿಕೊಂಡಿದೆ. ತಕ್ಷಣ ವೈರಸ್ ಹರಡುವುದನ್ನು ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಶಿಯಾನ್ ನಗರವು ಶನಿವಾರದಿಂದ 10 ದಿನಗಳ ಲಾಕ್‌ಡೌನ್‌ನಲ್ಲಿದೆ. ಡಿಸೆಂಬರ್ 9 ರಿಂದ ಇಲ್ಲಿಯವರೆಗೆ 1451 ಕರೋನಾ ಪ್ರಕರಣಗಳು ವರದಿಯಾಗಿವೆ. 2021 ರಲ್ಲಿ ಚೀನಾದ ಯಾವುದೇ ನಗರದಲ್ಲಿ ವರದಿಯಾದ ಅತಿ ಹೆಚ್ಚು ಪ್ರಕರಣಗಳು ಇವು. ಚೀನಾದ ಪ್ರಕರಣವನ್ನು ನೋಡಿದರೆ, ಈ ಸಂಖ್ಯೆ ತುಂಬಾ ಕಡಿಮೆ ಎಂದು ತೋರುತ್ತದೆಯಾದರೂ, ಆದರೆ 2022 ರಲ್ಲಿ ಇದು ಹೆಚ್ಚಾಗುವ ಅಪಾಯವಿದೆ.

ಶಿಯಾನ್ ನಗರದಲ್ಲಿ ಪ್ರಕರಣ ಹೆಚ್ಚಾಗಲು ಪಾಕಿಸ್ತಾನ ಕಾರಣ!

ಶಿಯಾನ್‌ನಲ್ಲಿ ಕರೋನಾ ಪ್ರಕರಣಗಳ ಹೆಚ್ಚಳದ ಹಿಂದಿನ ಕಾರಣವೆಂದರೆ ಪಾಕಿಸ್ತಾನದಿಂದ ಆಗಮಿಸುವ ವಿಮಾನಗಳು. ಇದರಿಂದ ಶಿಯಾನ್ ಸೇರಿದಂತೆ ಬೀಜಿಂಗ್ ನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಆದಾಗ್ಯೂ, ಸ್ಥಳೀಯ ಸಮುದಾಯಕ್ಕೆ ಕರೋನವೈರಸ್ ಹೇಗೆ ತಲುಪಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜನರು ಮನೆಯಿಂದ ಆಚೆ ಬರಬಾರದು ಎಂದು ಅಲ್ಲಿನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ದಾಖಲಾಗುತ್ತಿರುವ ಕರೋನಾ ಕೇಸ್ ಗಳ ಸಂಖ್ಯೆ ಕಡಿಮೆಯಾದರೆ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ಹೊರಗೆ ಹೋಗದಂತೆ ಕೇಳಿಕೊಳ್ಳಲಾಗಿದೆ. ಇದಲ್ಲದೆ ಜನರ ವಾಹನ ಚಾಲನೆಯನ್ನೂ ಸಹ ನಿಷೇಧ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನ ಚೀನಾದಲ್ಲಿ ಕೈಗೊಳ್ಳಲಾಗುತ್ತಿದೆ.

ಆರ್ಥಿಕ ಆಘಾತ ಕೊಟ್ಟ ಕೋವಿಡ್ ಕಟ್ಟುನಿಟ್ಟಿನ ನಿಯಮಾವಳಿಗಳು

ಚೀನಾದ ಕಟ್ಟುನಿಟ್ಟಾದ ಕರೋನಾ ನಿಯಮಗಳಿಂದಾಗಿ ಕೇಟರಿಂಗ್, ಪ್ರವಾಸೋದ್ಯಮದಂತಹ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಯುನ್ನಾನ್‌ನ ರಾಜಧಾನಿ ಕುನ್ಮಿಂಗ್‌ನಲ್ಲಿರುವ ಸಾಂಪ್ರದಾಯಿಕ ಟೀಹೌಸ್‌ನಲ್ಲಿ ವಾಂಗ್ ಎಂಬ ಉದ್ಯೋಗಿ ತನ್ನ ಕಂಪನಿಯ ಆದಾಯವು ಸಾಂಕ್ರಾಮಿಕ ರೋಗದಿಂದ ಅರ್ಧದಷ್ಟು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. “ಇತರ ಪ್ರಾಂತ್ಯಗಳಿಂದ ಅನೇಕ ಅತಿಥಿಗಳು ಪುಯರ್ ಚಹಾವನ್ನು ಸವಿಯಲು ಯನ್ನಾನ್ ನಿಂದ ನಮ್ಮ ಟೀಹೌಸ್‌ಗೆ ಬರುತ್ತಿದ್ದರು. ಆದರೆ, ಇವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ” ಎಂದು ಟೀಹೌಸ್ ಮಾಲೀಕ್ ಹೇಳುತ್ತಾನೆ.

Share