Published
2 weeks agoon
ಇಸ್ಲಾಮಾಬಾದ್: ಜೂನ್ 22 (ಯು.ಎನ್.ಐ.) ದಕ್ಷಿಣ ಸಿಂಧ್ ಪ್ರಾಂತ್ಯದ ಹೈದರಾಬಾದ್ನ ಯುವ ಕ್ರಿಕೆಟಿಗನೊಬ್ಬ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಇಂಟರ್-ಸಿಟಿ ಚಾಂಪಿಯನ್ಶಿಪ್ನಲ್ಲಿ ತನ್ನ ತವರು ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವೇಗದ ಬೌಲರ್ ಶೋಯೆಬ್ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದು, ಮಂಗಳವಾರ ಅವರ ಕುಟುಂಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಇಂಟರ್-ಸಿಟಿ ಚಾಂಪಿಯನ್ಶಿಪ್ಗಾಗಿ ಟ್ರಯಲ್ಸ್ ನಲ್ಲಿ ತನ್ನ ತರಬೇತುದಾರರಿಂದ ಆಯ್ಕೆಯಾಗದ ನಂತರ ಶೋಯೆಬ್ ಖಿನ್ನತೆಯಿಂದ ತನ್ನ ಕೋಣೆ ಸೇರಿದ್ದು ಹೊರಗೆ ಬರ್ತಿರಲಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು.
ಅವನ ಕೋಣೆಯ ಬಾತ್ ರೂಂನಲ್ಲಿ ಮಣಿಕಟ್ಟು ಕತ್ತರಿಸಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವನನ್ನು ಕಂಡು ತಕ್ಷಣವೇ ಆಸ್ಪತ್ರೆಗೆ ಸೇರಿಸಿದೆವು. ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದರು.
ಫೆಬ್ರವರಿ 2018 ರಲ್ಲಿ ಕರಾಚಿಯ ಅಂಡರ್-19 ಕ್ರಿಕೆಟಿಗ ಮುಹಮ್ಮದ್ ಜರಿಯಾಬ್ ನಗರದ ಅಂಡರ್-19 ತಂಡದಿಂದ ಕೈಬಿಡಲ್ಪಟ್ಟ ನಂತರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು.
41ನೇ ವಸಂತಕ್ಕೆ ಕಾಲಿಟ್ಟ ಎಂ.ಎಸ್ ಧೋನಿ
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ: ಬ್ಯಾಟ್ಸ್ ಮನ್ ರುತುರಾಜ್ ಗಾಯಕ್ವಾಡ್ ಗೆ ಅವಕಾಶ ಇಲ್ವಂತೆ ಯಾಕೆ?
ಇಂಗ್ಲೆಂಡ್- ಭಾರತ ನಡುವೆ ಮರುನಿಗದಿ ಮಾಡಿದ್ದ 5 ನೇ ಟೆಸ್ಟ್ ಪಂದ್ಯ; ಇಂಗ್ಲೆಂಡ್ ಗೆ ಗೆಲುವು, ಸರಣಿ ಸಮಬಲ
ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಯ್ಕೆ ಮಾಡದಿರುವ ನಿರ್ಧಾರ ಪ್ರಶ್ನಿಸಿದ ಪಾಕ್ ಮಾಜಿ ಕ್ರಿಕೆಟಿಗ
ವಿಂಬಲ್ಡನ್ ಮಿಶ್ರ ಡಬಲ್ಸ್: ಸೆಮಿಫೈನಲ್ ತಲುಪಿದ ಸಾನಿಯಾ ಮಿರ್ಜಾ ಮತ್ತು ಮೇಟ್ ಪಾವಿಕ್ ಜೋಡಿ
3000 ಮೀಟರ್ನಲ್ಲಿ ಹೊಸ ರಾಷ್ಟ್ರೀಯ ದಾಖಲೆ ಮಾಡಿದ ಅಥ್ಲಿಟ್ ಪಾರುಲ್ ಚೌಧರಿ