Connect with us


      
ವಿದೇಶ

ಪಾಕಿಸ್ತಾನಿ ಹಿಂದೂಗಳು ಭಾರತದ ದೇವಾಲಯಗಳಿಗೆ ಭೇಟಿ

Iranna Anchatageri

Published

on

ಇಸ್ಲಾಮಾಬಾದ್, ಜನವರಿ 03 (ಯು.ಎನ್.ಐ.) ಪಾಕಿಸ್ತಾನಿ ಹಿಂದೂಗಳ ನಿಯೋಗವು ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿನ ದೇವಾಲಯಗಳಿಗೆ ಭೇಟಿ ನೀಡಲಿದೆ. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರಿಗೆ ಧಾರ್ಮಿಕ ಪ್ರವಾಸೋದ್ಯಮವನ್ನು ಸರ್ಕಾರ ಉತ್ತೇಜಿಸಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಹಿಂದೂ ಪರಿಷತ್ತಿನ ಮುಖ್ಯಸ್ಥ ರಮೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, “ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸುವತ್ತ ಒಂದು ದೊಡ್ಡ ಹೆಜ್ಜೆ” ಇದಾಗಿದೆ ಎಂದು ಬಣ್ಣಿಸಿದ್ದಾರೆ.

ನಿಯೋಗವು ಜನವರಿ 20 ರಂದು ಭಾರತವನ್ನು ತಲುಪುವ ನಿರೀಕ್ಷೆ ಇದ್ದು, ಇಲ್ಲಿನ ಹಲವಾರು ದೇವಾಲಯಗಳಿಗೆ ಭೇಟಿ ನೀಡಲಿದೆ. ಆದರೆ, ನಿಯೋಗದಲ್ಲಿ ಎಷ್ಟು ಮಂದಿ ಯಾತ್ರಾತ್ರಿಗಳು ಇರುತ್ತಾರೆ ಹಾಗೂ ಅವರು ಯಾವ್ಯಾವ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ ಅನ್ನೋ ಬಗ್ಗೆ ತಿಳಿದುಬಂದಿಲ್ಲ. ಮತ್ತೊಂದೆಡೆ, ಭಾರತ, ಅಮೆರಿಕ ಮತ್ತು ಗಲ್ಫ್ ಪ್ರದೇಶದ 200ಕ್ಕೂ ಹೆಚ್ಚು ಹಿಂದೂ ಭಕ್ತರು ಭಾನುವಾರ ವಾಯುವ್ಯ ಪಾಕಿಸ್ತಾನದಲ್ಲಿರುವ 100 ವರ್ಷಗಳಷ್ಟು ಹಳೆಯದಾದ ಮಹಾರಾಜ ಪರಮಹಂಸ್ ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಭದ್ರತೆಗಾಗಿ 600 ಸಿಬ್ಬಂದಿ ನಿಯೋಜನೆ

ಭಾರತ, ಅಮೆರಿಕ, ಗಲ್ಫ್ ರಾಷ್ಟ್ರಗಳ ನಿಯೋಗ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಅಲ್ಲಿ 600 ಸಿಬ್ಬಂದಿಯನ್ನು ರಕ್ಷಣೆಗಾಗಿ ನಿಯೋಜನೆ ಮಾಡಲಾಗಿತ್ತು. ಖೈಬರ್ ಪಖ್ತುಂಖ್ವಾದ ಕರಕ್ ಜಿಲ್ಲೆಯ ತೇರಿ ಗ್ರಾಮದಲ್ಲಿರುವ ಪರಮಹಂಸರ ದೇವಸ್ಥಾನ ಮತ್ತು ಸಮಾಧಿಯನ್ನು ಕಳೆದ ವರ್ಷ ನವೀಕರಣ ಮಾಡಲಾಗಿತ್ತು. ಆದರೆ, 2020ರಲ್ಲಿ, ಗುಂಪೊಂದು ಈ ದೇವಸ್ಥಾನವನ್ನು ದರೋಡೆ ಮಾಡಿದ್ದನ್ನು ಜಾಗತಿಕವಾಗಿ ಖಂಡನೆ ಮಾಡಲಾಗಿತ್ತು. ಹಿಂದೂಗಳ ಗುಂಪಿನಲ್ಲಿ ಭಾರತದಿಂದ ಸುಮಾರು 200 ಯಾತ್ರಿಗಳು, ದುಬೈನಿಂದ 15, ಉಳಿದವರು ಯುಎಸ್ ಮತ್ತು ಇತರ ಗಲ್ಫ್ ರಾಷ್ಟ್ರದಿಂದ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ.

Continue Reading
Share