Connect with us


      
ದೇಶ

3ಎನ್ ಕೌಂಟರ್ ನಲ್ಲಿ ಪಾಕಿಸ್ತಾನ ಜೈಶ್ ಕಮಾಂಡರ್ ಸೇರಿ 4 ಉಗ್ರರ ಹತ್ಯೆ

Vanitha Jain

Published

on

ಶ್ರೀನಗರ: ಮಾರ್ಚ್ 12 (ಯು.ಎನ್.ಐ.) ಕಾಶ್ಮೀರದಲ್ಲಿ ಕಳೆದ 12 ಗಂಟೆಗಳಲ್ಲಿ ನಡೆದ ಮೂರು ಎನ್‌ಕೌಂಟರ್‌ಗಳಲ್ಲಿ ಪಾಕಿಸ್ತಾನಿ ಸೇರಿದಂತೆ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಕೂಡ ಬಂಧಿಸಲಾಗಿದೆ. ಶುಕ್ರವಾರ ಸಂಜೆ ಪುಲ್ವಾಮಾದ ಝದೂರದ ಚೆವಾಕಲನ್ ಪ್ರದೇಶದಲ್ಲಿ ನಡೆದ ಮೊದಲ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನಿ ಸೇರಿದಂತೆ ಜೈಶ್ ನ ಇಬ್ಬರು ಉಗ್ರರು ಹತರಾಗಿದ್ದಾರೆ. ಪಾಕಿಸ್ತಾನಿಯನ್ನು ಜೆಇಎಂ ಕಮಾಂಡರ್ ಕಮಾಲ್ ಭಾಯ್ ಅಲಿಯಾಸ್ ಜಟ್ ಎಂದು ಪೊಲೀಸರು ಗುರುತಿಸಿದ್ದಾರೆ.

ಕುಲ್ಗಾಮ್ ನಲ್ಲಿ ಸರಪಂಚ್ ನ ಹತ್ಯೆಯ ನಂತರ ಮೂರು ರಾತ್ರಿ ಗುಂಡಿನ ಚಕಮಕಿಗಳು ನಡೆದಿವೆ. ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಕಾಶ್ಮೀರದ ಪುಲ್ವಾಮಾ, ಗಂದರ್‌ಬಾಲ್ ಮತ್ತು ಕುಪ್ವಾರ ಜಿಲ್ಲೆಗಳಲ್ಲಿ ಗುಂಡಿನ ಚಕಮಕಿ ನಡೆದಿದೆ.

ಪುಲ್ವಾಮಾ ಮತ್ತು ಹಂದ್ವಾರದಲ್ಲಿ ಗುಂಡಿನ ಚಕಮಕಿ ಮುಗಿದಿದ್ದು, ಗಂದೇರ್ ಬಾಲ್‌ನಲ್ಲಿ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.

ಶುಕ್ರವಾರ ರಾತ್ರಿ ಭದ್ರತಾ ಪಡೆಗಳು ನಾಲ್ಕೈದು ಸ್ಥಳಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಈ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾಗೆ ಸೇರಿದ ಇಬ್ಬರು ಉಗ್ರರು ಹತರಾಗಿದ್ದಾರೆ. ಅಂತಹ ಒಂದು ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಜೀವಂತವಾಗಿ ಬಂಧಿಸಲಾಯಿತು ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.

2018 ರಿಂದ ಪುಲ್ವಾಮಾ-ಶೋಪಿಯಾನ್ ಪ್ರದೇಶದಲ್ಲಿ ಸಕ್ರಿಯರಾಗಿದ್ದರು ಮತ್ತು ಹಲವಾರು ಭಯೋತ್ಪಾದಕ ಅಪರಾಧಗಳು ಮತ್ತು ನಾಗರಿಕ ದೌರ್ಜನ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕುಮಾರ್ ಹೇಳಿದರು.

ಇತರ ಎರಡು ಎನ್‌ಕೌಂಟರ್‌ಗಳು ಮಧ್ಯ ಕಾಶ್ಮೀರದ ಗಂದರ್‌ಬಾಲ್ ಮತ್ತು ಕುಪ್ವಾರ ಜಿಲ್ಲೆಯ ಹಂದ್ವಾರದ ರಾಜವಾರ್ ಅರಣ್ಯದಲ್ಲಿ ರಾತ್ರಿಯಲ್ಲಿ ಸಂಭವಿಸಿದವು. ಈ ಎರಡು ಎನ್‌ಕೌಂಟರ್‌ಗಳಲ್ಲಿ ಲಸ್ಕರ್ ನ ತಲಾ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉದ್ದೇಶಿತ ಹತ್ಯೆಗಳ ನಂತರ ಭದ್ರತಾ ಪಡೆಗಳು ಕಾಶ್ಮೀರದಾದ್ಯಂತ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯನ್ನು ಹೆಚ್ಚಿಸಿರುವ ಸಮಯದಲ್ಲಿ ಎನ್‌ಕೌಂಟರ್‌ಗಳು ನಡೆಯುತ್ತಿವೆ. ಶುಕ್ರವಾರ ಸಂಜೆ ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಸರಪಂಚನೊಬ್ಬ ಬಲಿಯಾಗಿದ್ದಾನೆ.

Share