Connect with us


      
ಕರ್ನಾಟಕ

ಪಂಚಮಸಾಲಿ ಮೀಸಲಾತಿಗೆ ಒತ್ತಾಯಿಸಿ ಹೋರಾಟ ವಿಚಾರ ಮತ್ತೆ ಮುನ್ನೆಲೆಗೆ,ಸರ್ಕಾರಕ್ಕೆ ಗಡುವು ನೀಡಿದ ಸ್ವಾಮೀಜಿ

UNI Kannada

Published

on

ಬೆಂಗಳೂರು : ಮಾರ್ಚ್ 26 (ಯು.ಎನ್.ಐ.) ಪಂಚಮಸಾಲಿ ಜನಾಂಗಕ್ಕೆ ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.  ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ  ಜಯಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಅವರು ಮಾರ್ಚ್ 31ಕ್ಕೆ ಮೀಸಲಾತಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟಿರುವ ಭರವಸೆಯ ಗಡುವು ಮುಗಿಯುತ್ತದೆ. ಬೆಳಗಾವಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಸಿಎಂ ಬೊಮ್ಮಾಯಿ ಅವರು ಪಂಚಮಸಾಲಿ ಜನಾಂಗಕ್ಕೆ ಮೀಸಲಾತಿ ಘೋಷಣೆ ಮಾಡುವುದಾಗಿ ಹೇಳಿದ್ದರು. ಆದರೆ  ಆ ಕಾರ್ಯ ಇದುವರೆಗೂ ಆಗಿಲ್ಲ.

ಕಳೆದ 3-4 ತಿಂಗಳುಗಳಿಂದ ಹಿಂದುಳಿದ ವರ್ಗಗಳ ಆಯೋಗ ಯಾವುದೇ ಸರ್ವೆ ಮಾಡುತ್ತಿಲ್ಲ.ನಮ್ಮ ಜನಾಂಗ ನಂಬಿದರೆ ಪ್ರಾಣ ಕೊಡಲು ಸಿದ್ಧವಿದೆ. ನಂಬಿಕೆ ಕಳೆದುಕೊಂಡರೆ ಪಂಚಮಸಾಲಿ ಸಮುದಾಯ ಅಸಮಾಧಾನಗೊಳ್ಳಲಿದೆ.ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವ ಬಗ್ಗೆ ಶೀಘ್ರದಲ್ಲೇ ನಿಮ್ಮ ಅಭಿಪ್ರಾಯ ತಿಳಿಸಿ. ಈಗಾಗಲೇ ಗಡುವು ನೀಡಿದ್ದೇವೆ.ಇಲ್ಲದಿದ್ರೆ ಯತ್ನಾಳ್ ನೇತೃತ್ವದಲ್ಲಿ ಸಭೆ ಕರೆದು ಎಲ್ಲಿಂದ ಹೋರಾಟ ಆರಂಭಿಸಬೇಕು ಅಂತ ನಿರ್ಧಾರ ಮಾಡ್ತೀವಿ ಎಂದು ಏಪ್ರಿಲ್14 ಕ್ಕೆ ಕೊನೆಯ ಗಡುವು ನೀಡಿದ್ದಾರೆ.

ಯಾರದ್ದಾದ್ರೂ ಒತ್ತಡಕ್ಕೆ ಮಣಿದು ಈ ರೀತಿ ಮೀಸಲಾತಿ ನೀಡುತ್ತಿಲ್ಲವಾ.? ಬೇರೆ ಸ್ವಾಮೀಜಿ ತರ ಅನುದಾನ ಕೊಡಿ, ಅದು ಇದು ಕೊಡಿ ಅಂತ ನಿಮ್ಮ ಮನೆ ಬಾಗಿಲಿಗೆ ಬಂದಿಲ್ಲ.  ಪಂಚಮಸಾಲಿ ಮೀಸಲಾತಿ ಕೊಡಬೇಡಿ, ನೋಡೋಣ ಅಂತ ಏನಾದ್ರೂ ಯಾರಾದ್ರೂ ಹೇಳಿದ್ದಾರಾ.? ಎಂದು  ಜಯಮೃಂತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಗುಡುಗಿದ್ದು ಏಪ್ರಿಲ್ ೧೪ಕ್ಕೆ ಕೊನೆಯ ಗಡುವು ನೀಡಿ ಸರ್ಕಾರವನ್ನ ಮತ್ತೊಮ್ಮೆ ಎಚ್ಚರಿಸಿದ್ದಾರೆ.

Share