Connect with us


      




ಕರ್ನಾಟಕ

ಪರಿಷತ್ನಲ್ಲಿ ಸದ್ದು ಮಾಡಿದ ಬಿಡಿಎ ಕಟ್ಟಡ

UNI Kannada

Published

on

Madhuswamy

ಬೆಳಗಾವಿ (ಸುವರ್ಣ ವಿಧಾನ ಸೌಧ): ಡಿಸೆಂಬರ್ 14 (ಯು.ಎನ್.ಐ.) ಸುಸ್ಥಿತಿಯಲ್ಲಿರುವ ಕಟ್ಟಡಗಳನ್ನ ಕೆಡವಿ ಭವ್ಯ ಭವನ ನಿರ್ಮಾಣ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು  ಪರಿಷತ್‌ ನಲ್ಲಿ ನಾರಾಯಣಸ್ವಾಮಿ. ಪ್ರಶ್ನೆ ಮಾಡಿದರು

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಇಂದುವಿಧಾನ ಪರಿಷತ್ನಲ್ಲಿ ಹೊಸ ಕಟ್ಟಡ ನಿರ್ಮಾಣದ ವಿಚಾರ ಹೆಚ್ಚು ಸದ್ದು ಮಾಡಿತು.  ನಗರದ ಕೇಂದ್ರ ಸ್ಥಾನದಲ್ಲಿರುವ ಬಿಡಿಎ ಕಟ್ಟಡವನ್ನು ಕೆಡವುದು ಎಷ್ಟು ಸರಿ ? ಶಿಥಿಲಾವಸ್ಥೆಯಲ್ಲಿರುವ ಬಳಕೆಗೆ ಬಾರದಂತ ಕಟ್ಟಡಗಳು  ಬೇಕಾದಷ್ಟಿವೆ. ಅವುಗಳ ಬಗ್ಗೆ ಗಮನ ನೀಡಿ. ಕೇವಲ 17 ವರ್ಷಗಳಷ್ಟು ಮಾತ್ರ ಹಳೆಯದಾಗಿರುವ ಕಟ್ಟಡ ಕೆಡವುವ ವಿಚಾರದಲ್ಲಿ ದೊಡ್ಡ ಕಿಕ್ ಬ್ಯಾಕ್ ಹಗರಣವಿದೆ ಎಂದು ನಾರಾಯಣಸ್ವಾಮಿ ಆರೋಪಿಸಿದರು.

ಇದಕ್ಕೆ ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ತಕ್ಕಂತೆ ಹೊಸ ತೀರ್ಮಾನಗಳನ್ನ ಕೈಗೊಳ್ಳಬೇಕಾಗುತ್ತದೆ, ನ್ಯಾಯಾಲಯದ ನಿರ್ದೇಶನದಂತೆ ಕಟ್ಟಡ ಕೆಡವಿ ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದರು.

ಈಗ ನಿರ್ಮಾಣ ಮಾಡಲು ಹೊರಟಿರುವ ಕಟ್ಟಡ ಸುಸಜ್ಜಿತವಾಗಿರಲಿದ್ದೂ ಇದರಲ್ಲಿ ಬೇರೆ ಬೇರೆಕಡೆಗಳಲ್ಲಿರುವ ಬಿಡಿಎ ಕಛೇರಿಗಳನ್ನು ಒಂದೆಡೆ ತರಲು ತೀರ್ಮಾನ ಕೈಗೊಳ್ಳಲಾಗಿದೆ ಇದರಲ್ಲಿ ಯಾವುದೇ ಕಿಕ್ಕು ಇಲ್ಲ ಬ್ಯಾಕು ಇಲ್ಲ ಎಂದು ಪ್ರತಿಕ್ರಿಯೆ ನೀಡಿದರು.

Share