Published
6 months agoon
ಕೊಲ್ಕೊತ್ತಾ : ಜನವರಿ 02 (ಯು.ಎನ್.ಐ.) ಕೊರೊನಾ ವೈರಸ್ನ ಹೊಸ ರೂಪಾಂತರಿ ಒಮೈಕ್ರಾನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳ ಸರ್ಕಾರ ಕೋವಿಡ್ -19 ಗೆ ಸಂಬಂಧಿಸಿದ ನಿರ್ಬಂಧಗಳನ್ನು ಇಂದು ಹೆಚ್ಚಿಸಿದೆ.
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ನಂತರ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಹಲವು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಬಂಗಾಳದ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ನಾಳೆಯಿಂದ ಮುಚ್ಚಲ್ಪಡುತ್ತವೆ ಎಂದು ಮುಖ್ಯ ಕಾರ್ಯದರ್ಶಿ ಎಚ್ಕೆ ದ್ವಿವೇದಿ ತಿಳಿಸಿದ್ದಾರೆ. ವಾರದಲ್ಲಿ ಎರಡು ದಿನಗಳ ಕಾಲ ಸೋಮವಾರ ಮತ್ತು ಶುಕ್ರವಾರ ಮಾತ್ರ ಮುಂಬೈ ಮತ್ತು ದೆಹಲಿಯಿಂದ ವಿಮಾನಗಳು ಹಾರಾಟ ನಡೆಸಲಿವೆ.
ಸೋಮವಾರದಿಂದ ಬ್ರಿಟನ್ನಿಂದ ಆಗಮಿಸುವ ವಿಮಾನಗಳಿಗೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿದೆ. ಅಪಾಯಕಾರಿ ದೇಶಗಳಿಂದ ಬರುವ ವಿಮಾನಗಳ ಪ್ರಯಾಣಿಕರಿಗೆ RT-PCR ಪರೀಕ್ಷೆಯನ್ನು ಮಾಡಲಾಗುತ್ತದೆ ಮತ್ತು ಇತರ ದೇಶಗಳಿಂದ ಬರುವ ಪ್ರಯಾಣಿಕರಿಗೆ RAT ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ಸೋಮವಾರದಿಂದ ಎಲ್ಲಾ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮುಚ್ಚಲ್ಪಡುತ್ತವೆ. 50 ರಷ್ಟು ಮಾತ್ರ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಈಜುಕೊಳ, ಸ್ಪಾಗಳು ಮತ್ತು ಬ್ಯೂಟಿ ಪಾರ್ಲರ್ಗಳು ಮುಚ್ಚಲ್ಪಡುತ್ತವೆ. ಪ್ರವಾಸಿ ಸ್ಥಳಗಳು, ಮೃಗಾಲಯಗಳು, ಚಿತ್ರಮಂದಿರಗಳು ಬಂದ್ ಆಗಲಿವೆ. ಶಾಪಿಂಗ್ ಮಾಲ್ಗಳಲ್ಲಿ ಶೇಕಡಾ 50 ರಷ್ಟು ಹಾಜರಾತಿಯನ್ನು ನಿಗದಿಪಡಿಸಲಾಗಿದೆ. ಸಭೆಗಳು, ಸಭಾಂಗಣಗಳು ಮತ್ತು ಸಮ್ಮೇಳನಗಳಲ್ಲಿ 50 ಪ್ರತಿ ಶತದಷ್ಟು ಹಾಜರಾತಿ. 50ರಷ್ಟು ಸಾಮರ್ಥ್ಯದೊಂದಿಗೆ ಲೋಕಲ್ ರೈಲುಗಳು ಸಂಜೆ 7ರವರೆಗೆ ಸಂಚರಿಸಲಿದೆ. 50 ರಷ್ಟು ಸಾಮರ್ಥ್ಯದೊಂದಿಗೆ ಮೆಟ್ರೋ ಕೂಡ ಓಡಲಿದೆ. ರಾತ್ರಿ ಕರ್ಫ್ಯೂ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಜಾರಿಯಲ್ಲಿರುತ್ತದೆ.
ಕೋವಿಡ್ ಅಧಿಸೂಚನೆಯ ಪ್ರಕಾರ, ಯಾವಾಗಲೂ ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ಅರ್ಧದಷ್ಟು ಸಿಬ್ಬಂದಿಯೊಂದಿಗೆ ಖಾಸಗಿ ಮತ್ತು ಸರ್ಕಾರಿ ಕಚೇರಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಕೋಲ್ಕತ್ತಾದಲ್ಲಿ 11 ಮೈಕ್ರೋ ಕಂಟೈನ್ಮೆಂಟ್ ಝೋನ್ಗಳನ್ನು ಸ್ಥಾಪಿಸಲಾಗುವುದು. ಹಾಗೂ ಇತರ ಜಿಲ್ಲೆಗಳಲ್ಲೂ ಇದೇ ರೀತಿಯ ವಲಯ ರಚಿಸಲಾಗುವುದು ಎಂದು ಕೋವಿಡ್ ನಿಯಮಾವಳಿಗಳಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಕೊರೊನಾ ಪ್ರೋಟೋಕಾಲ್ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!