Connect with us


      




ಆರೋಗ್ಯ

ಪವನ್‌ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ .. ಪುತ್ರ ಅಕಿರಾಗೆ ಕೊರೊನಾ

UNI Kannada

Published

on

ಹೈದರಾಬಾದ್‌, ಜ 11(ಯುಎನ್‌ ಐ) ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿರುವ ಸಮಯದಲ್ಲಿ ಚಿತ್ರರಂಗದಲ್ಲಿ ಕೊರೊನಾ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತಿವೆ. ಮಹೇಶ್‌ಬಾಬು, ಮಂಚು ಲಕ್ಷ್ಮಿ, ಸತ್ಯರಾಜ್, ರಾಜೇಂದ್ರ ಪ್ರಸಾದ್, ತ್ರಿಶಾ ಸೇರಿದಂತೆ ಹಲವರು ಈಗಾಗಲೇ ಕೊರೊನಾಗೆ ತುತ್ತಾಗಿರುವುದು ತಿಳಿದಿದೆ. ಈಗ ಹೊಸದಾಗಿ ಪವನ್‌ ಕಲ್ಯಾಣ್‌ ಮಾಜಿ ಪತ್ನಿ ನಟಿ, ನಿರ್ದೇಶಕಿ ರೇಣು ದೇಸಾಯಿ, ಮಗ ಅಕಿರಾ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ವಿಷಯವನ್ನು ಸ್ವತಃ ರೇಣು ದೇಸಾಯಿ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಬಹಿರಂಗಪಡಿಸಿದ್ದಾರೆ.

‘ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಮನೆಯಲ್ಲಿದ್ದರೂ, ನಾನು, ಅಕಿರಾ ಕೊರೊನಾ ಸೋಂಕಿಗೆ ಒಳಗಾಗಿದ್ದೇವೆ. ಕೆಲವು ದಿನಗಳ ಹಿಂದೆ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು. ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಎಂದು ತಿಳಿದುಬಂದಿದೆ. ಸದ್ಯ ನಾವು ಚೇತರಿಸಿಕೊಳ್ಳುತ್ತಿದ್ದೇವೆ. ನಾನು ಲಸಿಕೆಯ ಎರಡು ಡೋಸ್‌ ಪಡೆದುಕೊಂಡಿದ್ದರೂ ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ಅಕಿರಾಗೆ ಲಸಿಕೆ ಹಾಕಿಸಬೇಕು ಎಂದು ಕೊಂಡಿದ್ದೆ, ಅದಕ್ಕೂ ಮುನ್ನವೇ ಅವನು ಸೋಂಕಿಗೆ ಒಳಗಾಗಿದ್ದಾನೆ. ಮೂರನೇ ಅಲೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಿ. ಮಾಸ್ಕ್‌ ಧರಿಸಿ. ಹುಷಾರಾಗಿರಿ’ ಎಂದು ರೇಣು ದೇಸಾಯಿ ಬರೆದುಕೊಂಡಿದ್ದಾರೆ.

Share