Connect with us


      




ದೇಶ

ತೈಲ ಬೆಲೆ ಮತ್ತೆ ಹೆಚ್ಚಳ: ಎಸ್ಎಂಎಸ್ ಮೂಲಕ ದರ ತಿಳಿದುಕೊಳ್ಳುವುದು ಹೇಗೆ?

Iranna Anchatageri

Published

on

ಹೊಸದಿಲ್ಲಿ: ಮಾರ್ಚ್ 25 (ಯು.ಎನ್.ಐ.) ಒಂದು ದಿನ ಬಿಡುವು ಕೊಟ್ಟ ಬಳಿಕ ಇಂದು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ನಾಲ್ಕು ದಿನಗಳಲ್ಲಿ ಮೂರು ಬಾರಿ ಭಾರತದಾದ್ಯಂತ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ 76 ರಿಂದ 84 ಪೈಸೆಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ 76 ರಿಂದ 85 ಪೈಸೆಗೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 97.81 ರೂ., ಡೀಸೆಲ್ ಲೀಟರ್ ಗೆ 89.07 ರೂಪಾಯಿ ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ 112.51 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 96.70 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 107.18 ರೂ, ಡೀಸೆಲ್ ಬೆಲೆ ಲೀಟರ್‌ಗೆ 92.22 ರೂ. ಆಗಿದೆ. ಇನ್ನು ಚೆನ್ನೈನಲ್ಲೂ ಹೆಚ್ಚಳ ಕಂಡಿದ್ದು, ಪ್ರತಿ ಲೀಟರ್ ಪೆಟ್ರೋಲ್ 103.67 ರೂ. ಮತ್ತು ಡೀಸೆಲ್ ಲೀಟರ್‌ಗೆ 93.71 ರೂ. ಆಗಿದೆ.

ಪ್ರಮುಖ ಮಹಾನಗರಗಳಲ್ಲಿ ಬೆಲೆ
ನಗರ                         ಡೀಸೆಲ್              ಪೆಟ್ರೋಲ್
ದೆಹಲಿ                          89.07               97.81
ಮುಂಬೈ                      96.70               112.51
ಕೋಲ್ಕತ್ತಾ                   92.22               107.18
ಚೆನ್ನೈ                          93.71                103.67
(ಪೆಟ್ರೋಲ್-ಡೀಸೆಲ್ ಬೆಲೆ ಲೀಟರ್‌ಗೆ ರೂಪಾಯಿಗಳಲ್ಲಿದೆ.)  ಮುಂಬೈನಲ್ಲಿ ಪೆಟ್ರೋಲ್ ಬೆಲೆ ಅತ್ಯಧಿಕವಾಗಿದ್ದು, ಶತಕ ಹೊಡೆದು ಮುಂದುವರಿದಿದೆ.

ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು ಎಂದು ತಿಳಿಯುವುದು ಹೇಗೆ?
SMS ಮೂಲಕವೂ ತೈಲ ಬೆಲೆಗಳಲ್ಲಿನ ಬದಲಾವಣೆಗಳನ್ನು ತಿಳಿದುಕೊಳ್ಳಬಹುದಾಗಿದೆ. ಅದು ಹೇಗೆಂದರೆ, ಇಂಡಿಯನ್ ಆಯಿಲ್ ವೆಬ್‌ಸೈಟ್‌ಗೆ ಹೋಗುವ ಮೂಲಕ RSP ಮತ್ತು ನಿಮ್ಮ ಸಿಟಿ ಕೋಡ್ ಅನ್ನು ಬರೆಯಬೇಕು ಮತ್ತು ಅದನ್ನು 9224992249 ಸಂಖ್ಯೆಗೆ ಕಳುಹಿಸಬೇಕು. ಪ್ರತಿ ನಗರದ ಕೋಡ್ ವಿಭಿನ್ನವಾಗಿದೆ. IOCL ವೆಬ್‌ಸೈಟ್‌ನ  https://iocl.com/petrol-diesel-price ಈ ಲಿಂಕ್ ಗೆ ಹೋದರೆ ಉತ್ತರ ಪಡೆದುಕೊಳ್ಳಬಹುದು.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ. ಹೊಸ ದರಗಳು ಬೆಳಗ್ಗೆ 6 ಗಂಟೆಯಿಂದಲೇ ಅನ್ವಯವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ.

ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ವಿತರಕರು ಪೆಟ್ರೋಲ್ ಪಂಪ್‌ಗಳನ್ನು ನಡೆಸುತ್ತಿರುವ ಮಾಲೀಕರು, ತೆರಿಗೆಗಳು ಮತ್ತು ತಮ್ಮದೇ ಆದ ಮಾರ್ಜಿನ್‌ಗಳನ್ನು ಸೇರಿಸಿದ ನಂತರ ಅವರು ಗ್ರಾಹಕರಿಗೆ ಚಿಲ್ಲರೆ ಬೆಲೆಯಲ್ಲಿ ಪೆಟ್ರೋಲ್ ಅನ್ನು ಮಾರಾಟ ಮಾಡುತ್ತಾರೆ. ಈ ವೆಚ್ಚವನ್ನು ಪೆಟ್ರೋಲ್ ದರ ಮತ್ತು ಡೀಸೆಲ್ ದರಕ್ಕೆ ಸೇರಿಸಲಾಗುತ್ತದೆ.

Share