Connect with us


      




ದೇಶ

ಪೆಟ್ರೋಲ್ ಡೀಸೆಲ್ ಬೆಲೆ ಸತತ ಎರಡನೇ ದಿನವೂ ಏರಿಕೆ

Iranna Anchatageri

Published

on

ಹೊಸದಿಲ್ಲಿ: ಮಾರ್ಚ್ 23 (ಯು.ಎನ್.ಐ.) ದೇಶದ ಜನ ಸತತ ಎರಡನೇ ದಿನವೂ ಹಣದುಬ್ಬರದ ಆಘಾತ ಅನುಭವಿಸಿದ್ದಾರೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 80 ರಿಂದ 85 ಪೈಸೆ ಏರಿಕೆಯಾಗಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 97.01 ರೂ ಆಗಿದ್ದರೆ, ಡೀಸೆಲ್ ಲೀಟರ್‌ಗೆ 88.27 ರೂ ಆಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.67 ರೂ.ಗೆ ಮತ್ತು ಡೀಸೆಲ್ ಬೆಲೆ 95.85 ರೂ.ಗೆ ಹೆಚ್ಚಳ ಕಂಡಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.34 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 91.42 ರೂ.ಗೆ ಹೆಚ್ಚಳವಾಗಿದೆ. ಇನ್ನು ಚೆನ್ನೈನಲ್ಲೂ ಪೆಟ್ರೋಲ್ ಲೀಟರ್‌ಗೆ 102.91 ರೂ ಮತ್ತು ಡೀಸೆಲ್ ಲೀಟರ್‌ಗೆ 92.95 ರೂ ಆಗಿದೆ. ಕಳೆದ ವರ್ಷ ನವೆಂಬರ್ 4 ರಿಂದ ಈ ಎರಡು ಇಂಧನಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿರಲಿಲ್ಲ.

ಐದು ರಾಜ್ಯಗಳ ಚುನಾವಣೆಯಿಂದಾಗಿ ತೈಲ ಕಂಪನಿಗಳು ಬೆಲೆ ಏರಿಕೆ ಮಾಡದಂತೆ ಮೋದಿ ಸರ್ಕಾರ ತಡೆದಿದೆ ಎಂದು ಸರ್ಕಾರದ ರಾಜಕೀಯ ವಿರೋಧಿಗಳು ಆರೋಪಿಸಿದ್ದಾರೆ. ಈ ಮಧ್ಯೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ ಸುಮಾರು 112 ಡಾಲರ್‌ಗೆ ತಲುಪಿದೆ. ಪ್ರಮುಖ ನಗರಗಳಲ್ಲಿ ಎಷ್ಟೆಷ್ಟು ಹೆಚ್ಚಳವಾಗಿದೆ ಅನ್ನೋದನ್ನ ನೋಡೋದಾದ್ರೆ….

ನಗರ                        ಡೀಸೆಲ್              ಪೆಟ್ರೋಲ್
ದೆಹಲಿ                        88.27                97.01
ಮುಂಬೈ                    95.85                 111.67
ಕೋಲ್ಕತ್ತಾ                 91.42                 106.34
ಚೆನ್ನೈ                        92.95                 102.91
(ಪೆಟ್ರೋಲ್-ಡೀಸೆಲ್ ಬೆಲೆ ಲೀಟರ್‌ಗೆ ರೂಪಾಯಿಗಳಲ್ಲಿದೆ.)

Share