Published
5 months agoon
ಸ್ವಿಟ್ಜರ್ಲೆಂಡ್, ಡಿಸೆಂಬರ್ 11 (ಯು.ಎನ್.ಐ) ಸ್ವಿಟ್ಜರ್ಲೆಂಡ್ನ 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್ ಲಸಿಕೆ ದೊರೆಯಲಿದೆ. ಈ ಕುರಿತು ಸ್ವಿಟ್ಜರ್ಲೆಂಡ್ನ ಸ್ವಿಸ್ ಏಜೆನ್ಸಿ ಫಾರ್ ಥೆರಪ್ಯೂಟಿಕ್ ಪ್ರಾಡಕ್ಟ್ಸ್ (SwissMedic) ಫೈಜರ್ ಲಸಿಕೆಯನ್ನು ಬಳಸಲು ಅನುಮೋದನೆ ನೀಡಿದೆ. ಫೈಜರ್ ಬಯೋಂಟೆಕ್ (Pfizer-BioNtech) ಅಪ್ಲಿಕೇಷನ್ ನಲ್ಲಿ ನೀಡಲಾಗಿರುವ ಮಾಹಿತಿಯನ್ನು ಎಚ್ಚರಿಕೆ ಅಧ್ಯಯನ ಮಾಡಿದ್ದೇವೆ. ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು ಲಸಿಕೆ ಸುರಕ್ಷಿತವಾಗಿದೆ. ಮಕ್ಕಳ ಮೇಲೆ ಉತ್ತಮ ಪರಿಣಾಮ ತೋರಿದೆ ಅನ್ನೋದು ಸ್ವಿಸ್ ಮೆಡಿಕ್ ನ ವಿಶ್ವಾಸ.
ಅಲ್ಲದೆ, ಈ ಅಧ್ಯಯನವು 1500 ಕ್ಕೂ ಹೆಚ್ಚು ಮಕ್ಕಳ ಮೇಲೆ ನಡೆಸಲಾಯಿತು. ಮತ್ತು ಇದು 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಅನ್ನೋದು ಗೊತ್ತಾಗಿದೆ. ಆದರೆ, ಚುಚ್ಚುಮದ್ದಿನ ಸ್ಥಳದಲ್ಲಿ ನೋವಿನ ಜೊತೆಗೆ ಆಯಾಸ, ತಲೆನೋವು, ಜ್ವರ ಮತ್ತು ಕೈ ಕಾಲುಗಳಲ್ಲಿ ನೋವು ಮುಂತಾದ ಅಡ್ಡ ಪರಿಣಾಮಗಳನ್ನು ಗಮನಿಸಲಾಗಿದೆ ಎಂದು ಸಂಸ್ಥೆ ವರದಿ ಮಾಡಿದೆ.
ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡ ಹಿರಿಮೆ ಸಾರಿದ ಸಂಸದ
ಶ್ರೀಲಂಕ ಆರ್ಥಿಕ ಬಿಕ್ಕಟ್ಟು: ಅಧ್ಯಕ್ಷ ರಾಜಪಕ್ಸೆ ವಿರುದ್ಧ ತೀವ್ರಗೊಂಡ ಹೋರಾಟ
ಮೆಕ್ಸಿಕೋದಲ್ಲಿ ಗೋಡೆಗೆ ಡಿಕ್ಕಿ ಹೊಡೆದ ಬಸ್: 14 ಮಂದಿ ಸಾವು
ಪ್ರಪಂಚದಲ್ಲಿ ಎದುರಾಗಿದೆ ಮಂಕಿಪಾಕ್ಸ್ ಭೀತಿ; ಏನಿದು ಮಂಕಿಪಾಕ್ಸ್? ಲಕ್ಷಣಗಳೇನು?
ಭಾರತದಲ್ಲಿ ಯುವತಿಯನ್ನು ವೇಶ್ಯಾಗೃಹಕ್ಕೆ ಮಾರಾಟಮಾಡಿದ ಬಾಂಗ್ಲಾ ದಂಪತಿಗೆ ಮರಣದಂಡನೆ
ಕಾನ್ ಚಲನಚಿತ್ರೋತ್ಸವ; ರೆಡ್ ಕಾರ್ಪೆಟ್ ಮೇಲೆ ಸಚಿವ ಅನುರಾಗ್ ಠಾಕೂರ್ ಜೊತೆ ಸಿನಿ ಸ್ಟಾರ್ಸ್