Connect with us


      




ದೇಶ

ಸಾರ್ವಜನಿಕ ಹಿತಾಸಕ್ತಿಗಾಗಿ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಮೋದಿ ಫೋಟೋ: ಸರ್ಕಾರ ಸ್ಪಷ್ಟನೆ

Published

on

ನವದೆಹಲಿ: ಡಿ, 27 (ಯು.ಎನ್.​ಐ) ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕೋವಿಡ್ -19 ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಮುಂಬೈ ಮೂಲದ ಕಾರ್ಯಕರ್ತ ಅನಿಲ್ ಗಲ್​​ಗಲಿ ಅವರು ಸಲ್ಲಿಸಿದ ಆರ್​ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ ಅರ್ಜಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರಿಸಿದೆ.

ತಮ್ಮ ಅರ್ಜಿಯಲ್ಲಿ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಫೋಟೋವನ್ನು ಪ್ರಕಟಿಸಲು ಕ್ಯಾಬಿನೆಟ್‌ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಅಥವಾ ಪ್ರಧಾನ ಮಂತ್ರಿ ಕಚೇರಿಯಿಂದ ನಿರ್ದೇಶನಗಳು ಬಂದಿವೆಯೇ ಎಂಬ ಬಗ್ಗೆ ಆರ್‌ಟಿಐ ಅರ್ಜಿಯಲ್ಲಿ ತಿಳಿದುಕೊಳ್ಳಲು ಗಲ್​​ಗಲಿ ಪ್ರಯತ್ನಿಸಿದರು.

ಇಂತಹ ಪ್ರಮುಖ ಸಂದೇಶಗಳನ್ನು ಸಾರ್ವಜನಿಕರನ್ನು ತಲುಪಲು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಪ್ರಕಟಿಸುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ಉತ್ತರದಲ್ಲಿ ಹೇಳಿದೆ.

ಪ್ರಮಾಣಪತ್ರವು ಡಬ್ಲೂಹೆಚ್​​ಒ ಮಾನದಂಡಗಳ ಪ್ರಕಾರವಾಗಿದೆ ಮತ್ತು ಇದು ಕೋವಿಡ್-ಸೂಕ್ತ-ನಡವಳಿಕೆಯ ಸಂದೇಶವನ್ನು ನೀಡುತ್ತದೆ ಎಂದು ಉತ್ತರದಲ್ಲಿ ಹೇಳಲಾಗಿದೆ.

ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಮಾತ್ರ ಈ ನಿರ್ಧರ ತೆಗೆದುಕೊಳ್ಳಲಾಗಿದೆ ಎಂದು ಉತ್ತರದಲ್ಲಿ ಹೇಳಲಾಗಿದೆ.

ದೇಶ

ಬಂಗಾಳ: ನೇತಾಜಿ ಜನ್ಮದಿನದಂದು ಲಾಠಿ ಚಾರ್ಜ್

Published

on

ಕೋಲ್ಕತ್ತಾ: ಜನೆವರಿ 23 (ಯು.ಎನ್.ಐ.) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ರಾಜಕೀಯ ನಿಂತಿಲ್ಲ. ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್‌ನಲ್ಲಿ ನೇತಾಜಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಟಿಎಂಸಿ-ಬಿಜೆಪಿ ಕಾರ್ಯಕರ್ತರ ಮಧ್ಯೆ ಜಟಾಪಟಿ ನಡೆದಿದೆ.

ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್‌ನಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿತು ಎಂದರೆ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ನೇತಾಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಎರಡೂ ಕಡೆಯವರು ಸೇರಿದ್ದಾಗ ವಿವಾದ ಹುಟ್ಟಿಕೊಂಡಿತು. ಅರ್ಜುನ್ ಸಿಂಗ್ ಸ್ಥಳಕ್ಕಾಗಮಿಸುತ್ತಿದ್ದಂತೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡಿತು. ಅರ್ಜುನ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಾದ ನಂತರ ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಅರ್ಜುನ್ ಸಿಂಗ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಈ ವೇಳೆ ಪೊಲೀಸರು ಕೂಡ ಸ್ಥಳದಲ್ಲಿಯೇ ಇದ್ದರು.
ಪೊಲೀಸರಿಂದ ಲಾಠಿಚಾರ್ಜ್
ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರವನ್ನೂ ನಡೆಸಬೇಕಾಯಿತು. ಅರ್ಜುನ್ ಸಿಂಗ್ ಅವರ ಕಾರನ್ನು ಕೂಡ ಧ್ವಂಸಗೊಳಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ 7 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ
ಟಿಎಂಸಿ ಜನರ ಮೇಲೆ ಹಲ್ಲೆ: ಬಿಜೆಪಿ ಸಂಸದ
“ಇಂದು ಬೆಳಗ್ಗೆ 10:30ಕ್ಕೆ ನೇತಾಜಿಯವರಿಗೆ ನಮನ ಸಲ್ಲಿಸಲು ನಮ್ಮ ಶಾಸಕ ಪವನ್ ಸಿಂಗ್ ತೆರಳಿದ್ದರು. ಟಿಎಂಸಿ ಗೂಂಡಾಗಳು ಅವರ ಮೇಲೆ ದಾಳಿ ನಡೆಸಿ, ಗುಂಡು ಹಾರಿಸಿ ಇಟ್ಟಿಗೆ ಎಸೆದಿದ್ದಾರೆ. ನಾನು ಬಂದ ಮೇಲೆ ಅವರು ನನ್ನ ಮೇಲೆಯೂ ಹಲ್ಲೆ ನಡೆಸಿದರು ಎಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಹೇಳಿದ್ದಾರೆ. . ಪೋಲೀಸರ ಮುಂದೆಯೇ ಎಲ್ಲವೂ ನಡೆಯುತ್ತಿತ್ತು…ನನ್ನ ಕಾರನ್ನು ಸಹ ಒಡೆದು ಹಾಕಲಾಯಿತು ಎಂದರು.”
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ಬಡಿದಾಟ, ಆರೋಪ-ಪ್ರತ್ಯಾರೋಪ, ಹಿಂಸಾಚಾರ ಸಾಮಾನ್ಯವಾಗಿಬಿಟ್ಟಿದೆ. ಇಂದು ಬ್ಯಾರಕ್‌ಪೋರ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದಂದು ಇದು ಮುಂದುವರಿದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

Continue Reading

ದೇಶ

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

Published

on

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು, ಭಾರತಕ್ಕೆ ಮರಳಿ ಹಸ್ತಾಂತರಿಸಲು ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿವೆ.

ಅರುಣಾಚಲ ಪ್ರದೇಶದ ಸಿಯುಂಗಾಲಾದ ಲುಂಗ್ಟಾ ಜೋರ್ ಪ್ರದೇಶದ ನಿವಾಸಿ 17 ವರ್ಷದ ಮಿರಮ್ ತರನ್ ಜನೆವರಿ 18ರಂದು ನಾಪತ್ತೆಯಾಗಿದ್ದ. ಈ ಬಗ್ಗೆ ಅರುಣಾಚಲ ಪೂರ್ವದ ಸಂಸದ ತಪಿರ್ ಗಾವೊ ಅವರು ಮೊದಲ ಬಾರಿಗೆ ಮಾಹಿತಿ ನೀಡಿದ್ದರು. ಚೀನಾ ಸೈನಿಕರು ಈ ಯುವಕನನ್ನು ಸೆರೆ ಹಿಡಿದಿದ್ದರು ಎಂದು ಗಾವೋ ಆರೋಪ ಮಾಡಿದ್ದರು. ಇದಾದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಚೀನಾದಿಂದ ಭಾರತೀಯ ಯುವಕ ಅಪಹರಣಕ್ಕೊಳಗಾಗಿರುವುದನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಅರುಣಾಚಲದಿಂದ ಯುವಕ ಕಣ್ಮರೆಯಾದ ಬಳಿಕ ಭಾರತೀಯ ಸೇನೆ ಮಿರಮ್ ಗಾಗಿ ಹುಡುಕಾಟ ಆರಂಭಿಸಿದ್ದರು. ಅಲ್ಲದೆ, ಚೀನಾ ಪಿಎಲ್ಎಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಮೊದಲಿಗೆ ಈ ಯುವಕನ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಚೀನಾ ಹೇಳಿತ್ತು. ಆದರೆ ಇಂದು ತಮ್ಮ ಪ್ರದೇಶದಲ್ಲಿ ಯುವಕನೊಬ್ಬ ಪತ್ತೆಯಾಗಿದ್ದಾನೆ ಎಂದು ಚೀನಾ ಯೋಧರು ಭಾರತೀಯ ಸೇನೆಗೆ ತಿಳಿಸಿದ್ದಾರೆ.

ಅಸ್ಸಾಂನ ತೇಜ್‌ಪುರದಲ್ಲಿ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ, ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿರುವ ಯುವಕ ಪತ್ತೆಯಾಗಿದ್ದಾನೆ ಎಂದು ಚೀನಿ ಸೇನೆ ಮಾಹಿತಿ ನೀಡಿದೆ ಎಂದು ತಿಳಿಸಿದ್ದಾರೆ. ಈ ಯುವಕರನ್ನು ಭಾರತಕ್ಕೆ ಹಸ್ತಾಂತರಿಸಲು ಚೀನಾ ಸೇನೆಯೊಂದಿಗೆ ಸೂಕ್ತ ಕ್ರಮ ಅನುಸರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Continue Reading

ದೇಶ

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

Published

on

By

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ ಜಯಂತಿಯನ್ನು ಆಚರಿಸಲಾಗುತ್ತಿದೆ.
ಸ್ವಾತಂತ್ರ್ಯ ಸೇನಾನಿ ಗೆ ಗೌರವ ಸಲ್ಲಿಸುವ ಉದ್ದೇಶದಿಂದ ದೆಹಲಿಯ ಇಂಡಿಯಾ ಗೇಟ್ ಬಳಿ ಇಂದು ಸಂಜೆ ೬ ಗಂಟೆಗೆ ಸುಭಾಷ್ ಚಂದ್ರ ಬೋಸ್ ಅವರ ಹಾಲೋಗ್ರಾಂ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.
ಈ ಜಾಗದಲ್ಲಿ ನೇತಾಜಿಯವರ ೨೮ ಅಡಿ ಎತ್ತರ ಮತ್ತು ೬ ಅಡಿ ಅಗಲದ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಪ್ರತಿಮೆ ಸ್ಥಾಪನೆಯಾಗುವವರೆಗೆ ಹಾಲೋಗ್ರಾಂ ಪ್ರತಿಮೆ ಇಲ್ಲಿ ನೇತಾಜಿಯವರ ಸಾಧನೆಯನ್ನು ಬಿಂಬಿಸಲಿದೆ.ರೆ.
ಇದೇ ವೇಳೆ ೨೦೧೯, ೨೦೨೦ ಮತ್ತು ೨೦೨೧ನೇ ಸಾಲಿನ ಸುಭಾಷ್ ಚಂದ್ರ ಬೋಸ್ ಆಪ್ದಾ ಪ್ರಬಂಧನ್ ಪುರಸ್ಕಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಪ್ರದಾನ ಮಾಡಲಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಹೋರಾಟಗಾರರಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಆಜಾದ್ ಹಿಂದ್ ಫೌಜ್ ಸೇನೆಯನ್ನು ಮತ್ತೆ ಬಲಗೊಳಿಸುವ ಮೂಲಕ ದೇಶದ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು.
**
ಸುಭಾಷ ಚಂದ್ರ ಬೋಸ್ ಜನ್ಮಜಯಂತಿಯಂದು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
ಟ್ವೀಟ್ ಮೂಲಕ ನೇತಾಜಿಯವರಿಗೆ ಗೌರವ ಸಲ್ಲಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ ನೇ ಜನ್ಮದಿನದಂದು ದೇಶವು ಕೃತಜ್ಞತೆಯಿಂದ ಗೌರವ ಸಲ್ಲಿಸುತ್ತದೆ. ಆಜಾದ್ ಹಿಂದ್- ಮುಕ್ತ ಭಾರತದ ಕಲ್ಪನೆಯ ಬದ್ಧತೆ ಪೂರೈಸಲು ತೆಗೆದುಕೊಂಡ ಧೈರ್ಯದ ಹೆಜ್ಜೆಗಳು ಅವರನ್ನು ರಾಷ್ಟ್ರೀಯ ಐಕಾನ್ ಆಗಿ ರೂಪಿಸಿತು. ಅವರ ಆದರ್ಶ, ತ್ಯಾಗ ಪ್ರತಿಯೊಬ್ಬ ಭಾರತೀಯರಿಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತವೆ ಎಂದಿದ್ದಾರೆ.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಮಹಾನ್ ರಾಷ್ಟ್ರೀಯವಾದಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ದೂರದೃಷ್ಟಿಯ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ನೇತಾಜಿಯವರ ಅದಮ್ಯ ಧೈರ್ಯ ಮತ್ತು ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆಯನ್ನು ಗೌರವಿಸಲು ನಾವು ಈ ದಿನವನ್ನು ಪರಾಕ್ರಮ್ ದಿವಸ್ ಎಂದು ಸ್ಮರಿಸಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯಂದು ಅವರಿಗೆ ನಮನಗಳು. ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುತ್ತಾನೆ ಎಂದು ಹೇಳಿದ್ದಾರೆ.

Continue Reading
Advertisement
ದೇಶ4 mins ago

ಬಂಗಾಳ: ನೇತಾಜಿ ಜನ್ಮದಿನದಂದು ಲಾಠಿ ಚಾರ್ಜ್

ಕೋಲ್ಕತ್ತಾ: ಜನೆವರಿ 23 (ಯು.ಎನ್.ಐ.) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ರಾಜಕೀಯ ನಿಂತಿಲ್ಲ. ಪಶ್ಚಿಮ ಬಂಗಾಳದ...

ಅಂಕಣ54 mins ago

ದಟ್ಟ ಕಾಡಿನಲ್ಲಿ ʻಸಪ್ನೋಂ ಕೀ ರಾಣೀʼ

ಅಂಕಣ: ಒಂದೂರಲ್ಲಿ ಒಂದಿನ- 3 ಈ ಒಂದೂರು ಅನ್ನುವ ಮಾಯೆ ಇದೆಯಲ್ಲ, ಅದು ವಿಚಿತ್ರವಾದದ್ದು. ಅಪ್ಪ ಕಥೆ ಹೇಳುವಾಗ ಪ್ರತಿ ಸಲವೂ ಆ ಕಥೆ ಒಂದೂರಿನಲ್ಲಿ ಅಂತಲೇ...

ಕ್ರೀಡೆ1 hour ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ2 hours ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ2 hours ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು3 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ3 hours ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಕರ್ನಾಟಕ4 hours ago

ಇಡೀ ವರ್ಷ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಗೆ ತೀರ್ಮಾನ: ಸಿಎಂ

ಬೆಂಗಳೂರು : ಜನೆವರಿ 23 (ಯು.ಎನ್.ಐ.) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ...

ಅಂಕಣ4 hours ago

ಸ್ವಾತಂತ್ರ್ಯಕ್ಕಿಂತ ದೊಡ್ಡದು ಇನ್ಯಾವುದಿದೆ ?

‌ಅಂಕಣ: ದಿಟನುಡಿ -೩ ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು...

ದೇಶ4 hours ago

ಪಂಜಾಬ್ ಚುನಾವಣೆ: ಕೆಂಪು ಕೋಟೆ ಹಿಂಸಾಚಾರದ ಆರೋಪಿಗೆ ರೈತ ಸಂಘಟನೆಯಿಂದ ಟಿಕೆಟ್!

ಚಂಡೀಗಢ: ಜನೆವರಿ 23 (ಯು.ಎನ್.ಐ.) ರೈತರ ಸಂಘಟನೆ ಯುನೈಟೆಡ್ ಸಮಾಜ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಗೆ 35 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ...

ಟ್ರೆಂಡಿಂಗ್

Share