Connect with us


      
ದೇಶ

ಏ.1 ರಿಂದ ದೆಹಲಿಯಲ್ಲಿ ಭೌತಿಕ ತರಗತಿಗಳು ಆರಂಭ

Vanitha Jain

Published

on

ನವದೆಹಲಿ: ಫೆಬ್ರವರಿ 25 (ಯು.ಎನ್.ಐ.) ದೆಹಲಿಯ ಶಾಲೆಗಳಲ್ಲಿ ಏಪ್ರಿಲ್ 1 ರಿಂದ ನೂರಕ್ಕೆ ನೂರರಷ್ಟು ಭೌತಿಕ ತರಗತಿಗಳು ಪುನರಾರಂಭಗೊಳ್ಳಲಿವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತಿಳಿಸಿದ್ದಾರೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.

ಫೆಬ್ರವರಿ 28 ರಿಂದ ನಗರದಲ್ಲಿ ವ್ಯಾಪಾರ ಕಾರ್ಯಾಚರಣೆಗಳ ಅವಧಿ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಘೋಷಿಸಿದ ಅವರು, ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ಹಾಕಲಾಗುವುದು ಎಂದು ಹೇಳಿದರು. ಈ ಹಿಂದೆ ೨೦೦೦ ರೂ. ದಂಡ ವಿಧಿಸಲಾಗುತ್ತಿತ್ತು. ಇದರ ಜೊತೆಗೆ ರಾತ್ರಿ ಕರ್ಫ್ಯೂ ತೆಗೆದು ಹಾಕಿದ ದೆಹಲಿ ಸರ್ಕಾರ ರೆಸ್ಟೋರೆಂಟ್ ಗಳು ಮತ್ತು ಬಾರ್‌ಗಳಿಗೆ ವಿಧಿಸಿದ್ದ 50 ಪ್ರತಿಶತ ಸಾಮರ್ಥ್ಯದ ನಿಯಮವನ್ನು ತೆಗೆದು ಹಾಕಲಾಗುವುದು ಎಂದು ಹೇಳಿದ್ದಾರೆ.

ಶಾಲೆಗಳು ಏಪ್ರಿಲ್ 1ರಿಂದ ಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ಹಾಕಲಾಗುವುದು. ಎಲ್ಲರೂ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು. ಸರ್ಕಾರವು ಕಟ್ಟುನಿಟ್ಟಾದ ನಿಗಾ ಇರಿಸುತ್ತದೆ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Share