Connect with us


      
ಸಿನೆಮಾ

ಶ್ವಾನವೇ ನನ್ನ ಹೃದಯದ ತುಣುಕು ಎಂದ ಕೃತಿ ಕರಬಂಧ !

Kumara Raitha

Published

on

ಬೆಂಗಳೂರು: ಮೇ ೧೧ ( ಯು.ಎನ್.‌ಐ.)  ಭಾರತೀಯ ಚಿತ್ರರಂಗದ ಖ್ಯಾತ ತಾರೆ ಕೃತಿ ಕರಬಂಧ ಅವರಿಗೆ ಪ್ರಾಣಿಗಳನ್ನು ಸಾಕುವುದೆಂದರೆ ಅಪಾರ ಇಷ್ಟದ ಕೆಲಸ. ಅದರಲ್ಲೂ ಬಾಲ್ಯದಿಂದಲೂ ಶ್ವಾನಗಳ ಸಾಕಣೆ ಅವರಿಗೆ ಖುಷಿಯ  ವಿಷಯ.

ಸಾವಿರಾರು ವರ್ಷಗಳಿಂದಲೂ ಮನುಷ್ಯರಿಗೆ ಅತ್ಯಂತ ನಂಬಿಕಸ್ಥ, ಆತ್ಮೀಯ ಪ್ರಾಣಿಗಳೆಂದರೆ ಕುದುರೆ, ಶ್ವಾನ. ಆಧುನಿಕ ಕಾಲಘಟ್ಟದಲ್ಲಿ ಎಲ್ಲರೂ ಕುದುರೆಗಳನ್ನು ಸಾಕಲಾಗುವುದಿಲ್ಲ. ಆದರೆ ಆರ್ಥಿಕವಾಗಿ ಅನುಕೂಲ ಇದ್ದವರು ಮತ್ತು ಇಲ್ಲದವರು ಶ್ವಾನಗಳನ್ನಂತೂ ಸಾಕುತ್ತಾರೆ.

ಶ್ವಾನಗಳ ಸಾಕಣೆ, ಬಿಡುವಿನ ವೇಳೆ ಅವುಗಳ ಮೈದಡವುದು, ಆಟವಾಡುವುದು ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಸಹಾಯಕ ಎಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ. ಶ್ವಾನಗಳ ನಿಸ್ವಾರ್ಥ ಪ್ರೀತಿಯಂತೂ ಅಮೂಲ್ಯ. ಸಾಕಿದವರಿಗೆ ಅವುಗಳು ತೋರಿಸುವ ವಿಶ್ವಾಸ ಅಪಾರ.

ನಟಿ ಕೃತಿ ಕರಬಂಧ ಅವರು ಶೂಟಿಂಗ್‌ ಇಲ್ಲದ ಸಮಯದಲ್ಲಿ ಬಿಡುವು ದೊರೆತಾಗಲೆಲ್ಲ  ನೆಚ್ಚಿನ ಶ್ವಾನಗಳೊಂದಿಗೆ ಆಟವಾಡುತ್ತಾರೆ. ಅವುಗಳ ಪಾಲನೆಗೆ ಗಮನ ನೀಡುತ್ತಾರೆ.  ಆಗಾಗ ಶ್ವಾನಗಳೊಂದಿಗೆ ಆಟವಾಡುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ.

ಇಂದು ಅವರು ಬಹು ಮುದ್ದಾದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ Piece of my heart! ♥️ (ನನ್ನ ಹೃದಯದ ತುಣುಕು! ♥️) ಎಂದು ಟ್ವೀಟ್‌ ಮಾಡಿದ್ದಾರೆ. ಇದು ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

&nb

sp;

Share