Connect with us


      
ದೇಶ

ಪ್ರಧಾನಿಗೆ ಯಾರ ಬಗ್ಗೆಯೂ ಕಾಳಜಿ ಇಲ್ಲ: ರಾಹುಲ್

Vanitha Jain

Published

on

ನವದೆಹಲಿ: ಮಾರ್ಚ್ 24 (ಯು.ಎನ್.ಐ.) ಕೋವಿಡ್ -19 ಸಂತ್ರಸ್ತರಿಗೆ, ಉದ್ಯಮ ಮತ್ತು ಬಡವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಅವರು ಪ್ರಶ್ನೋತ್ತರ ಶೈಲಿಯಲ್ಲಿ ಟ್ವೀಟ್ ಮಾಡಿ, ಕೋವಿಡ್ ಸಂತ್ರಸ್ತರಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದೀರಾ? ಇಲ್ಲ. ಬಡವರು ಮತ್ತು ಕಾರ್ಮಿಕರಿಗೆ ಕನಿಷ್ಠ ಆದಾಯವಿದೆಯೇ? ಇಲ್ಲ. ಸಣ್ಣ ಕೈಗಾರಿಕೆಗಳನ್ನು ಮುಳುಗದಂತೆ ಉಳಿಸಿದ್ದೀರಾ? ಇಲ್ಲ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಅವರು ಡಿಜಿಟಲ್ ಮಾಧ್ಯಮದ ಸುದ್ದಿಯ ಮುಖ್ಯಾಂಶಗಳನ್ನು ಹಂಚಿಕೊಂಡು ಅದು ಮೋದಿ ಮತ್ತು ಅವರ ಸರ್ಕಾರವನ್ನು ಹಲವಾರು ವಿಷಯಗಳನ್ನು ದಾಖಲೆಗಳಲ್ಲಿ ಇರಿಸಿದೆ ಎಂದು ಹೇಳಿದ್ದಾರೆ.

Share