Connect with us


      




ಕೃಷಿ

ಕರ್ನಾಟಕದ 30 ಎಫ್‌ಒಗಳಿಗೆ 1 ಕೋಟಿ 21ಲಕ್ಷಕ್ಕೂ ಹೆಚ್ಚಿನ ಅನುದಾನ ಬಿಡುಗಡೆ

Published

on

ಬೆಂಗಳೂರು,ಜನವರಿ 1 (ಯು.ಎನ್.ಐ.) ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ 14 ಕೋಟಿ ಇಕ್ವಿಟಿ ಅನುದಾನದಲ್ಲಿ ಕರ್ನಾಟಕದ ಒಟ್ಟು 30 ಎಫ್‌ಪಿಒಗಳ 12047 ಸದಸ್ಯರಿಗೆ 1 ಕೋಟಿ 21 ಲಕ್ಷದ 42 ಸಾವಿರ ರೂಪಾಯಿ ಅನುದಾನವನ್ನು ಪ್ರಧಾನಿ ಮೋದಿ ಇಂದು ಬಿಡುಗಡೆ ಮಾಡಿದ್ದಾರೆ.
ಈ 1,21,42000 ಅನುದಾನದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಎಫ್‌ಪಿಓಗಳಿಗೆ 57 ಲಕ್ಷದ 74 ಸಾವಿರ ರೂ, ನಬಾರ್ಡ್‌ನ 11 ಎಫ್‌ಪಿಓಗಳಿಗೆ 43 ಲಕ್ಷದ 69ಸಾವಿರ ರೂ, ಎಸ್‌ಎಫ್‌ಎಸಿಯ 6 ಎಫ್‌ಪಿಓಗಳಿಗೆ 19 ಲಕ್ಷದ 19 ಸಾವಿರ ರೂ.ಅನುದಾನ ಇಕ್ವಿಟಿ ಗ್ರ್ಯಾಂಟ್ ಆಗಿದೆ.

ರೈತ ಉತ್ಪಾದಕರ ಸಂಸ್ಥೆ ಈಕ್ವಿಟಿ ಅನುದಾನ ಬಿಡುಗಡೆ ಕಾರ್ಯಕ್ರಮ ಭಾರತ ಸರ್ಕಾರದ 2020-21 ನೇ ಸಾಲಿನ ಆಯವ್ಯಯದಲ್ಲಿ Formation and Promotion of 10,000 Farmer Producer Organizations ಎಂದು ಘೋಷಿಸಲಾಗಿರುತ್ತದೆ. ರಾಜ್ಯಕ್ಕೆ ವಿವಿಧ ಅನುಷ್ಠಾನ ಸಂಸ್ಥೆಗಳಿಂದ 185 ರೈತ ಉತ್ಪಾದಕರ ಸಂಸ್ಥೆ ( ಜಲಾನಯನ ಅಭಿವೃದ್ಧಿ ಇಲಾಖೆ -100 , SFAC – 25 , NABARD – 37 ಮತ್ತು NCDC – 23 ) ಗಳನ್ನು ರಚಿಸಲು ವಿವಿಧ ಅನುಷ್ಠಾನ ಸಂಸ್ಥೆಗಳಿಗೆ ಗುರಿ ನೀಡಲಾಗಿದೆ. ಅಲ್ಲದೇ ಯೋಜನೆಯಡಿ ಇಲ್ಲಿಯವರೆಗೂ ಒಟ್ಟಾರೆ 152 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದ್ದು, ಜಲಾನಯನ ಅಭಿವೃದ್ಧಿ ಇಲಾಖೆ -99 SFAC – 21 , NABARD – 313 , NCDC – 1 ಎಫ್‌ಪಿಒ ಆಗಿವೆ.

ರೈತ ಉತ್ಪಾದಕರ ಸಂಸ್ಥೆಗಳಿಗೆ ಸಂಗ್ರಹಿಸಲಾದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ರೂ 15 ಲಕ್ಷಗಳ ವರೆಗೆ ಮ್ಯಾಚಿಂಗ್ ಅನುದಾನವಾಗಿ ಇಕ್ವಿಟಿ ಗ್ರ್ಯಾಂಟ್ ನೀಡಲಾಗುತ್ತಿದೆ. ಈ 15‌ ಲಕ್ಷ ಇಕ್ವಿಟಿ ಗ್ರ್ಯಾಂಟ್‌ಗಳನ್ನು ಗರಿಷ್ಠ ಮೂರು ಹಂತಗಳಲ್ಲಿ ನೀಡಲಾಗುವುದು. ಇದರಿಂದ ರೈತ ಉತ್ಪಾದಕರ ಸಂಸ್ಥೆಗಳ ಬಂಡವಾಳ ನಿಧಿ ಹೆಚ್ಚಾಗಿ ಇದು ವ್ಯವಹಾರ ಅಭಿವೃದ್ಧಿಗೆ ನೆರವಾಗುತ್ತದೆ.

ಇನ್ನು ರೈತ ಉತ್ಪಾದಕರ ಸಂಸ್ಥೆಗಳು ಪಡೆದ ಇಕ್ವಿಟಿ ಗ್ರ್ಯಾಂಟ್ ಅನುದಾನದಲ್ಲಿ ಸದಸ್ಯರುಗಳಿಂದ ಸಂಗ್ರಹಿಸಿದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ರೂ 2000ವರೆಗೆ ಸೀಮಿತಗೊಳಿಸಿ ಷೇರುಗಳನ್ನು ನೀಡಲಾಗುವುದು. ಮೊದಲ ಹಂತದಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ 30 ರೈತ ಉತ್ಪಾದಕರ ಸಂಸ್ಥೆಗಳ 12047 ಸದಸ್ಯರುಗಳಿಗೆ 1 ಕೋಟಿ 21ಲಕ್ಷದ 42 ಸಾವಿರ ರೂ.ಅನುದಾನವನ್ನು ಪ್ರಧಾನ ಮಂತ್ರಿಗಳು ಇಂದು ಬಿಡುಗಡೆ ಮಾಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

ಕೃಷಿ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜೀಯಿಲ್ಲ

Published

on

ಬೆಂಗಳೂರು: ಜನೆವರಿ 21 (ಯು.ಎನ್.ಐ.) ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಮಾ ಪರಿಹಾರ ಕಂಪೆನಿಗಳ ವಿಷಯದಲ್ಲಾಗಲೀ ಬೇರೆ ಯಾವುದೇ ವಿಚಾರದಲ್ಲಾಗಲೀ ಯಾರಿಂದಲೂ ಯಾವುದೇ ರೀತಿಯ ರಾಜೀಯೂ ಇಲ್ಲ ಮುಲಾಜೂ ಇಲ್ಲ.ರೈತರ ಕಾಳಜಿಯೇ ಮುಖ್ಯವಾದ ಗುರಿಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ರಾಜ್ಯದ ಕೃಷಿ ಸಚಿವರು ಇಲಾಖಾಧಿಕಾರಿಗಳೊಂದಿಗೆ ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಮತ್ತಿತ್ತರ ವಿಚಾರಗಳ ಬಗ್ಗೆ ಕೇಂದ್ರ ಸಚಿವರು ಅವಲೋಕನಾ ಸಭೆ ನಡೆಸಿ,ಸರ್ಕಾರಿ ಇನ್ಸೂರೆನ್ಸ್ ಕಂಪೆನಿಗಳು ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಬೇಕೆಂಬ ನಿಟ್ಟಿನಲ್ಲಿ ಚರ್ಚಿಸಿದರು.
ಅವಲೋಕನಾ ಸಭೆಯಲ್ಲಿ ಸರ್ಕಾರಿ ವಿಮಾ ಕಂಪೆನಿಗಗಳಿಂದ ಸರಿಯಾದ ಸಮಯಕ್ಕೆ ಸರಿಯಾಗಿ ರೈತರಿಗೆ ಬೆಳೆ ವಿಮೆ ನೀಡಲು ಸಾಧ್ಯವಾಗುತ್ತದೆ ಎಂದ ಮೇಲೆ ಖಾಸಗಿ ವಿಮಾ ಕಂಪೆನಿಗಳಿಗೆ ಸರಿಯಾಗಿ ರೈತರಿಗೆ ವಿಮೆ ಪಾವತಿಸಲು ಸಾಧ್ಯವಾಗದೇ ಇರುವುದನ್ನು ಗಮನಿಸಿದ ಸಚಿವದ್ವಯರು ಸಭೆಯಲ್ಲಿ ಖಾಸಗಿ ವಿಮಾ ಕಂಪೆನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಅಂಕಿಅಂಶಗಳಿಂದ ಕಾಗದದ ಮೇಲಿನ ಅಂಕಿಸಂಖ್ಯೆಗಳಿಂದ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸರ್ಕಾರಿ ವಿಮಾ ಕಂಪೆನಿಗಳು ಸರಿಯಾಗಿ ನ್ಯಾಯ ಒದಗಿಸುತ್ತಿವೆ. ಖಾಸಗಿ ಕಂಪೆನಿಗಳು ಕೇವಲ ಅಂಕಿಸಂಖ್ಯೆಗಳನ್ನು ಮಾತ್ರ ಅಧಿಕಾರಿಗಳಿಗೆ ತೋರಿಸುತ್ತಿವೆ.ಈ ಹಿಂದೆಯೇ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಕಂಪೆನಿಗಳು ಕಚೇರಿಗಳನ್ನು ತೆರೆಯಬೇಕೆಂದು ಸೂಚಿಸಲಾಗಿತ್ತು.ಆದರೆ ಅದು ಬರೀ ಸೂಚನೆಯಾಗಿಯಷ್ಟೇ ಉಳಿದಿದ್ದು,ಕಾರ್ಯಗತವಾಗಿಲ್ಲ ಎಂಬುದನ್ನು ಸಭೆಯಲ್ಲಿ ಕಮಿಷನರ್ ಗಮನಕ್ಕೆ ತಂದ ಕೃಷಿ ಸಚಿವ ಬಿ.ಸಿ.ಪಾಟೀಲ್, ಈ ಬಗ್ಗೆ ಕೃಷಿ ಕೇಂದ್ರ ಇಲಾಖೆಯ ಪ್ರಮುಖರು ಗಮನ ಹರಿಸಿ ಹದಿನೈದು ದಿನದೊಳಗೆ ಎಲ್ಲಾ ವಿಮಾ ಕಂಪೆನಿಗಳಿಗೆ ತಾಕೀತು ಮಾಡುವಂತೆ ಹೇಳಿದರು.

ರೈತರ ಪರವಾಗಿ ಅಧಿಕಾರಿಗಳು ಇರಬೇಕು. ಜಿಲ್ಲೆಯ ಕೃಷಿ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಬೇಕು. ವಿಮಾ ಇಲಾಖೆಯಲ್ಲಿ ಬೆಳೆ ವಿಮೆಗೆ ನೋಂದಣಿಯಾಗಿರುವ ಜಿಲ್ಲಾವಾರು ಪ್ರದೇಶ, ಬೆಳೆಗಳ ಬಗ್ಗೆ ರೈತರ ಮಾಹಿತಿ ಪಡೆದು ಸಾಂಖ್ಯಿಕ ಇಲಾಖೆಯ ಅಂಕಿಅಂಶಗಳ ಜೊತೆ ಪರಿಶೀಲನೆ ಮಾಡಿ ಒಂದು ವಾರದೊಳಗೆ ವರದಿ ಮಾಹಿತಿ ನೀಡಬೇಕು ಎಂದು ಆಯುಕ್ತರಿಗೆ ಭಗವಂತ್ ಖೂಬಾ ಸೂಚಿಸಿದರು.

ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೇಂದ್ರ ಸಚಿವ ಭಗವಂತ್ ಖೂಬಾಗೆ “ಬೆಲೆ ಭದ್ರತೆ” ಬಗ್ಗೆ ಮನವಿ ಸಲ್ಲಿಸಿದರು. ಸದ್ಯ ರಾಜ್ಯದಲ್ಲಿ 6.12 ಲಕ್ಷ ಟನ್ ವಿವಿಧ ಗ್ರೇಡ್ ಗಳ ರಸಗೊಬ್ಬರ ದಾಸ್ತಾನಿದ್ದು,2022 ರ ಮುಂಗಾರಿಗೆ 26.5 ಲಕ್ಷ ಟನ್ ಬೇಡಿಕೆಯಿರುವುದಾಗಿ ಅಂದಾಜಿಸಲಾಗಿದೆ. ಅಗತ್ಯವಿರುವ ರಸಗೊಬ್ಬರದ ಸರಬರಾಜು ಹಾಗೂ 3ಲಕ್ಷ ಟನ್ ವಿವಿಧ ರಸಗೊ ಬ್ಬರಗಳನ್ನು ಕಾಪು ದಾಸ್ತಾನಾಗಿ ಶೇಕರಣೆ ಮಾಡಲು ನಿರ್ಧರಿಸಲಾಗಿರುವುದರಿಂದ ಮುಂದಿನ ದಿನಗಳಲ್ಲಿ ಆಗಬಹುದಾದ ಬೆಲೆ ಏರಿಳಿತಕ್ಕೆ ರಕ್ಷಣೆ ನೀಡಲು ಮನವಿ ಪತ್ರದಲ್ಲಿ ಹೇಳಲಾಗಿದೆ.

Continue Reading

ಕೃಷಿ

ಸೆಕೆಂಡರಿ ಅಗ್ರಿಕಲ್ಚರ್” ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದ ಸರ್ಕಾರ

Published

on

ಬೆಂಗಳೂರು: ಜನೆವರಿ 19 (ಯು.ಎನ್.ಐ.) ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೃಷಿ ಸಚಿವ ಬಿ.ಸಿ.ಪಾಟೀಲರೊಂದಿಗೆ ಸಮಿತಿಯಲ್ಲಿ ಚರ್ಚಿಸಿ ನೀಡಿದ ಭರವಸೆಯಂತೆ “ಸೆಕೆಂಡರಿ ಅಗ್ರಿಕಲ್ಚರ್ “ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದೆ.

ಕಳೆದ 2021 ಆಗಸ್ಟ್ 25 ರಂದು ಸೆಕೆಂಡರಿ ಅಗ್ರಿಕಲ್ಚರ್ ಸ್ಥಾಪಿಸುವ ನಿಟ್ಟಿನಲ್ಲಿ ಸಿಎಂ ಜೊತೆ ಕೃಷಿ ಸಚಿವ ಬಿ.ಸಿ.ಪಾಟೀಲರು ಕೇಂದ್ರದ ಆದಾಯ ದ್ವಿಗುಣೊಳಿಸುವ ಸಮಿತಿಯ ಮುಖ್ಯಸ್ಥರೊಂದಿಗೆ ಸಮಿತಿ ಸಭೆ ನಡೆಸಿದ್ದು, ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಸರ್ಕಾರ ಕೃಷಿ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ 13 ಜನರ ಸದಸ್ಯರನ್ನೊಳಗೊಂಡ ಸಮಿತಿ “ಸೆಕೆಂಡರಿ ಅಗ್ರಿಕಲ್ಚರ್ “ನಿರ್ದೇಶಾನಲಯ ಸ್ಥಾಪಿಸಿ ಆದೇಶಿಸಲಾಗಿದೆ.

ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತು ಉಪ ಉತ್ಪನ್ನಗಳನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡು ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಸೂಕ್ತ ಬ್ಯ್ರಾಂಡ್ ಮೂಲಕ ಮಾರುಕಟ್ಟೆ ಕಲ್ಪಿಸುವುದು ಸೆಕೆಂಡರಿ ಅಗ್ರಿಕಲ್ಚರ್ ನ ಮುಖ್ಯ ಧ್ಯೇಯೋದ್ದೇಶವಾಗಿದೆ.

ಏನಿದು ಸೆಕೆಂಡರಿ ಅಗ್ರಿಕಲ್ಚರ್..?
ಗ್ರಾಮೀಣ ಮಟ್ಟದಲ್ಲಿ ಗುಡಿ ಕೈಗಾರಿಕೆ ಎಂದು ಪರಿಗಣಿಸಬಹುದಾದ ಚಟುವಟಿಕೆಯು ಸ್ಥಳೀಯ ಮತ್ತು ಸುತ್ತಮುತ್ತಲಿನ ರೈತರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುವ ಪ್ರಮಾಣದಲ್ಲಿ ಇರುವುದು ಸೆಕೆಂಡರಿ ಕೃಷಿಯಾಗಿದ್ದಯಮ ಸ್ಥಳೀಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಾಗುವ ಮೂಲ ಹಾಗೂ ಕಚ್ಚಾ ವಸ್ತುಗಳ್ನು ಮಾನವ ಶಕ್ತಿ ಕೌಶಲ್ಯಗಳನ್ನು ಮೂಲವಾಗಿ ಸದಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳನ್ನು “ಸೆಕೆಂಡರಿ ಕೃಷಿ”ಯಡಿ ಪರಿಗಣಿಸಬಹುದಾಗಿದೆ. ಸ್ಥಳೀಯವಾಗಿ ಉತ್ಪಾದಿಸಲಾದ ಕಚ್ಚಾ ವಸ್ತುವು ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಸಂಸ್ಕರಣೆಗೆ ಒಳಗಾಗಿದ್ದರೆ ಮತ್ತು ಅಂತಹ ಕಚ್ಚಾವಸ್ತುಗಳಿಂದ ಮೌಲ್ಯವರ್ಧಿತಗೊಳಿಸಿವ ಪ್ರಾಥಮಿಕ ಉತ್ಪಾದನೆಯನ್ನು ಉದ್ಯಮಕ್ಕೆ ಸರಬರಾಜು ಮಾಡಿದರೆ ಅದನ್ನು ಸೆಕೆಂಡರಿ ಕೃಷಿಗೆ ಪರಿಗಣಿಸಬಹುದಾಗಿದೆ.

ಜೇನುಸಾಕಾಣೆ,ಜೈವಿಕ ಗೊಬ್ಬರ ಘಟಕಗಳು, ಸಾವಯವ ಬಣ್ಣ ಅಥವಾ ಡೈ ತಯಾರಿಕೆ, ಅಣಬೆ, ರೇಷ್ಮೆ ಹುಳು ಸಾಕಣೆ, ನರ್ಸರಿ ಇತ್ಯಾದಿಗಳಂತಹ ಸಣ್ಣ ಪ್ರಮಾಣದ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿದೆ. ಸ್ಥಳೀಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಾಗುವ ಮೂಲ/ಕಚ್ಛಾ ವಸ್ತುಗಳನ್ನು ಮಾನವ ಶಕ್ತಿ,ಕೌಶಲ್ಯಗಳನ್ನು ಮೂಲವಾಗಿ ಸದುಪಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿವೆ.
ರೇಸ್ ಕುದುರೆಗಳ ಸಾಕಣೆ,ವನ್ಯಜೀವಿ ಮೀಸಲು ಪ್ರದೇಶಗಳ ಅಭಿವೃದ್ಧಿ, ದೊಡ್ಡ ಔಷಧೀಯ ಮತ್ತು ಕೃಷಿ ರಾಸಾಯನಿಕ ಉದ್ಯಮಗಳು, ದೊಡ್ಡ ಕೃಷಿ ಕೈಗಾರಿಕೆಗಳನ್ನು ಸೆಕಂಡಿ ಅಗ್ರಿಕಲ್ಚರ್ ಎಂದು ಪರಿಗಣಿಸಲಾಗದು.

ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ತ್ಪನ್ನ ಮತ್ತು ಉಪಉತ್ಪನ್ನಗಳ ಕಚ್ಚಾ ವಸ್ತುವಾಗಿ ಬಳಸಿಕೊಂಡು ಉತ್ಪಾದಕ ಚಟುವಟಿಕೆ ಮಾಡುವುದು. ಸ್ಥಳೀಯವಾಗಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಕೆಗಾಗೊ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯಮ ಚಟುವಟಿಕೆ ಮಾಡುವುದು.ಎಂ.ಎಸ್.ಎಂ.ಈ.ಡಿ ಕಾಯಿದೆ 2006 ಅಡಿಯಲ್ಲಿ ವರ್ಗೀಕರಿಸಲಾದ ಸಣ್ಣ ಅಥವಾ ಮಧ್ಯಮ ಉದ್ಯಮಗಳನ್ನು ಅಭಿವೃದ್ಧಿಪಡಿಸುವುದು.

ಸಾವಯವ ಗೊಬ್ಬರ ತಯಾರಿಕೆ, ತೋಟಗಾರಿಕೆ ಹೂವು ಅರಣ್ಯ ಕೃಷಿ ಬೆಳೆಗಳ ನರ್ಸರಿ, ಜೈವಿಕ ಕೀಟನಾಶಕಗಳ ತಯಾರಿಕೆ, ನೀರು ಮತ್ತು ಮಣ್ಣು ಪರೀಕ್ಷೆ, ಪಶು ಆಹಾರ ಮೇವು ಉತ್ಪಾದನೆ ಇತ್ಯಾದಿಗಳ ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ ಮಾಡುವುದು. ಕಟಾವು ಆದ ನಂತರ ಹೂವು,ಹಣ್ಣು ಸಾಂಬಾರು ಪದಾರ್ಥಗಳ ಇತ್ಯಾದಿಗಳನ್ನು ಪೂರ್ವಸಿದ್ಧತೆಗೊಳಿಸಿ ಮಾರುಕಟ್ಟೆಗೆ ತಲುಪಿಸುವುದು. ಅತಿಸಣ್ಣ, ಸಣ್ಣ ಉದ್ದಿಮೆಗಳಾದ ಉಪ್ಪಿನಕಾಯಿ, ಜಾಮ್ ತಯಾರಿಕೆ ಅರಿಶಿನ ಪುಡಿ, ಶುಂಠಿಬೆಳ್ಳುಳ್ಳಿ ಪೇಸ್ಟ್ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು, ಅಗ್ರಿ ಟೂರಿನಂ, ಆಯುಷ್ ಮೆಡಿಸಿನ್ಸ್, ನೇಯ್ಗೆ ಉತ್ಪನ್ನಗಳು, ಸುಗಂಧ ದ್ರವ್ಯ,ಡೈಗಳನ್ನು ಇತ್ಯಾದಿ ಮೌಲ್ಯ ವರ್ದನೆ ಕೇಂದ್ರಿತ ಚಟುವಟಿಕೆಗಳನ್ನು ಮಾಡುವುದು.

ಸೆಕೆಂಡರಿ ಅಗ್ರಿಕಲ್ಚರ್ ಅಡಿ ಜೇನು ಸಾಕಾಣೆ, ಬೇವಿನ ಉತ್ಪನ್ನಗಳು, ಕಾರ್ನ್ ಪೌಡರ್  ತಯಾರಿಕೆ, ಹೈಡ್ರೋಪೋನಿಕ್ಸ್, ಕೈತೋಟ, ಅಡಿಕೆ ಹಾಳೆ ಉತ್ಪನ್ನಗಳು, ಅಲೊವೆರಾ ಉತ್ಪನ್ನಗಳು, ಬಿದಿರು ಉತ್ಪನ್ನಗಳು, ಅಂಟು ಉತ್ಪಾದನೆ,ರೇಷ್ಮೆ ಉತ್ಪನ್ನಗಳು, ಕುರಿಮರಿ ಹೊಸ ತಳಿ ಸಾಕಣೆ,ಹೋರಿ ಸಾಕಣೆ, ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು. ಹತ್ತಿ ಬೆಳೆ ಉಳಿಕೆಯ ಉತ್ಪನ್ನಗಳು,ಹತ್ತಿ ಭತ್ತದ ಉಳಿಕೆಯಿಂದ ಪೈಬರ್ ಬೋರ್ಡ್ ಯಾರಿಸುವುದು, ಕತ್ತಾಳೆ ಬಾಳೆ ನಾರಿನ ತ್ಪನ್ನಗಳು, ಅಡಿಕೆ ಹಾಳೆ ಉತ್ಪನ್ನಗಳು, ಬಯೋಗ್ಯಾಸ್ ಉತ್ಪಾದನೆ, ಯೂರಿಯಾ ಲೇಪಿಸಿಸಿ ಮೇವಿನ ಬ್ಲಾಕ್ ಗಳ ತಯಾರಿಕೆ, ಕಬ್ಬು ಸೋಗೆಯಿಂದ ತ್ಪ್ನಗಳ ತಯಾರಿಕೆ ಸೇರಿದಂತೆ ಮುಂತಾದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನಾ ತ್ಯಾಜ್ಯಗಳನ್ನು ಮರುಬಳಸಬಹುದಾಗಿದೆ.

Continue Reading

ಕೃಷಿ

ಅಂತಾರಾಷ್ಟ್ರೀಯ ವೆಚ್ಚದ ಹೆಚ್ಚಳ; ಪೋಟ್ಯಾಷ್ ರಸಗೊಬ್ಬರದಲ್ಲಿ ಕೊಂಚ ಏರಿಕೆ

Published

on

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಪೋಟ್ಯಾಷ್ ರಸಗೊಬ್ಬರ ಬೆಲೆ ಏರಿಕೆಯಾಗಿದೆ‌

ಬೆಂಗಳೂರು: ಜನೆವರಿ 10 (ಯು.ಎನ್.ಐ.) ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾವಸ್ತುಗಳ‌‌ ಬೆಲೆ ಏರಿಕೆಯಿಂದಾಗಿ ಬಂದರಿನಲ್ಲಿ ರಸಗೊಬ್ಬರ ನಿರ್ವಹಣಾ ವೆಚ್ಚ ಹೆಚ್ಚಾದ ಕಾರಣ ಪೋಟ್ಯಾಷ್ ರಸಗೊಬ್ಬರಗಳ ಬೆಲೆ ಕೊಂಚ ಏರಿಕೆಯಾಗಿದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ಎಮ್.ಒ.ಪಿ ರಸಗೊಬ್ಬರದ ಪರಿಷ್ಕೃತ ಗರಿಷ್ಕೃ ಮಾರಾಟ ಬೆಲೆ ಪ್ರತಿ ಚೀಲಕ್ಕೆ ರೂ . 1700 ದೇಶದಲ್ಲಿ ಶೇಕಡ 100 ರಷ್ಟು ಎಮ್.ಒ.ಪಿ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತಿದ್ದು ರಸಗೊಬ್ಬರದ ಗರಿಷ್ಠ ಮಾರಾಟ ದರವನ್ನು ಸರಬರಾಜು ಸಂಸ್ಥೆಗಳಿಂದಲೇ ನಿಗಧಿ ಪಡಿಸಲಾಗುತ್ತದೆ . ಕಳೆದ ನಾಲ್ಕು ತಿಂಗಳುಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದಂತೆ ಎಮ್.ಒ.ಪಿ ರಸಗೊಬ್ಬರದ ಬೆಲೆಯು ಸಹ ಏರಿಕೆಯಾಗಿರುತ್ತದೆ.ಇದರಿಂದ ಎಮ್.ಒ.ಪಿ ರಸಗೊಬ್ಬರದ ಸರಬರಾಜಿನಲ್ಲಿ ವ್ಯತ್ಯಯವಾಗಿರುತ್ತದೆ .

ಆದಾಗ್ಯೂ ಇಂಡಿಯನ್ ಪೊಟ್ಯಾಷ್ ಲಿಮಿಟೆಡ್ ಸಂಸ್ಥೆಯು ಅಂತಾರಾಷ್ಟ್ರೀಯ ಸರಬರಾಜುದಾರರೊಂದಿಗೆ ಎಮ್.ಒ.ಪಿ ರಸಗೊಬ್ಬರ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿರುತ್ತದೆ . ಪ್ರಸ್ತುತವಿರುವ ರಸಗೊಬ್ಬರದ ವಿನಿಮಯ ದರ , ಹೊಸ ಆಮದು ಬೆಲೆ , ಕಸ್ಟಮ್ಸ್ ಸುಂಕ ಹಾಗೂ ಜಿ.ಎಸ್.ಟಿ , ಬಂದರಿನಲ್ಲಿ ರಸಗೊಬ್ಬರದ ನಿರ್ವಹಣೆಯ ಇತರ ವೆಚ್ಚಗಳು ಸೇರಿ ಒಟ್ಟು ದರವು ಪ್ರತಿ ಟನ್ ಗೆ ರೂ . 40,147 ಎಂದು ನಿಗಧಿಪಡಿಸಲಾಗಿದೆ . ಇದರಲ್ಲಿ ಕೇಂದ್ರ ಸರ್ಕಾರವು ಪುತಿ ಟನ್ ಎಂ.ಒ.ಪಿ ಗೆ ನೀಡುವ ರಿಯಾಯಿತಿ ದರ ರೂ . 6,070 ಹೊರತು ಪಡಿಸಿದಲ್ಲಿ ಪ್ರತಿ ಟನ್ನಿನ ಮಾರಾಟ ದರವು ರೂ . 34,000 ಆಗುತ್ತದೆ . ಹಾಗಾಗಿ ಪ್ರತಿ ಚೀಲದ ದರವು ರೂ . 1700 ಆಗಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ.

Continue Reading
Advertisement
ಅಂಕಣ7 mins ago

ದಟ್ಟ ಕಾಡಿನಲ್ಲಿ ʻಸಪ್ನೋಂ ಕೀ ರಾಣೀʼ

ಅಂಕಣ: ಒಂದೂರಲ್ಲಿ ಒಂದಿನ- 3 ಈ ಒಂದೂರು ಅನ್ನುವ ಮಾಯೆ ಇದೆಯಲ್ಲ, ಅದು ವಿಚಿತ್ರವಾದದ್ದು. ಅಪ್ಪ ಕಥೆ ಹೇಳುವಾಗ ಪ್ರತಿ ಸಲವೂ ಆ ಕಥೆ ಒಂದೂರಿನಲ್ಲಿ ಅಂತಲೇ...

ಕ್ರೀಡೆ27 mins ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ1 hour ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ1 hour ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು2 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ2 hours ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಕರ್ನಾಟಕ3 hours ago

ಇಡೀ ವರ್ಷ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಗೆ ತೀರ್ಮಾನ: ಸಿಎಂ

ಬೆಂಗಳೂರು : ಜನೆವರಿ 23 (ಯು.ಎನ್.ಐ.) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ...

ಅಂಕಣ3 hours ago

ಸ್ವಾತಂತ್ರ್ಯಕ್ಕಿಂತ ದೊಡ್ಡದು ಇನ್ಯಾವುದಿದೆ ?

‌ಅಂಕಣ: ದಿಟನುಡಿ -೩ ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು...

ದೇಶ3 hours ago

ಪಂಜಾಬ್ ಚುನಾವಣೆ: ಕೆಂಪು ಕೋಟೆ ಹಿಂಸಾಚಾರದ ಆರೋಪಿಗೆ ರೈತ ಸಂಘಟನೆಯಿಂದ ಟಿಕೆಟ್!

ಚಂಡೀಗಢ: ಜನೆವರಿ 23 (ಯು.ಎನ್.ಐ.) ರೈತರ ಸಂಘಟನೆ ಯುನೈಟೆಡ್ ಸಮಾಜ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಗೆ 35 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ...

ಕರ್ನಾಟಕ4 hours ago

ನ್ಯಾಯಮೂರ್ತಿ ಕೆ ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು: ಜನವರಿ 23 (ಯು.ಎನ್.ಐ.)  ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ನ್ಯಾಯಮೂರ್ತಿ ಮಂಜುನಾಥ್ ಅವರು...

ಟ್ರೆಂಡಿಂಗ್

Share