Published
6 months agoon
By
UNI Kannadaನವದೆಹಲಿ, ಜ 2(ಯುಎನ್ ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಮೀರತ್ ನಲ್ಲಿ ಅಪರಾಹ್ನ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಮೀರತ್ ಜಿಲ್ಲೆಯ ಸಲಾವಾ ಮತ್ತು ಕೈಲಿ ಗ್ರಾಮಗಳ ಸಮೀಪದಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗುವುದು ಎಂದು ಪಿಎಂ ಓ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕ್ರೀಡಾ ಸಂಸ್ಕೃತಿ ಪ್ರೋತ್ಸಾಹಿಸುವುದು, ದೇಶದ ಎಲ್ಲಾ ಪ್ರದೇಶಗಳಲ್ಲಿ ಕ್ರೀಡಾ ಮೂಲಸೌಕರ್ಯ ಸ್ಥಾಪಿಸುವುದು ಪ್ರಧಾನಿಮಂತ್ರಿಗಳ ಆದ್ಯತೆಯಾಗಿದೆ. ಮೀರತ್ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ ಇದೇ ಉದ್ದೇಶ ಹೊಂದಿದೆ ಎಂದು ಪಿಎಂಓ ಹೇಳಿದೆ.
ಈ ಕ್ರೀಡಾ ವಿಶ್ವವಿದ್ಯಾನಿಲಯ ಸಿಂಥೆಟಿಕ್ ಹಾಕಿ ಮೈದಾನ, ಫುಟ್ಬಾಲ್ ಮೈದಾನ, ಬಾಸ್ಕೆಟ್ಬಾಲ್, ವಾಲಿಬಾಲ್, ಹ್ಯಾಂಡ್ಬಾಲ್, ಕಬಡ್ಡಿ ಮೈದಾನ, ಲಾನ್ ಟೆನ್ನಿಸ್ ಕೋರ್ಟ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜುಕೊಳ ಸೇರಿದಂತೆ ಅನೇಕ ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಹೊಂದಲಿದೆ.
ಇಷ್ಟೇ ಅಲ್ಲದೇ, ಶೂಟಿಂಗ್, ಜಿಮ್ನಾಸ್ಟಿಕ್ಸ್, ವೇಟ್ಲಿಫ್ಟಿಂಗ್, ಆರ್ಚರಿ, ಕಯಾಕಿಂಗ್ಗೆ ಸೌಲಭ್ಯಗಳನ್ನೂ ಹೊಂದಿದ್ದು, 1080 ಕ್ರೀಡಾಪಟುಗಳಿಗೆ ತರಬೇತಿ ನೀಡುವ ಸಾಮರ್ಥ್ಯ ವಿಶ್ವವಿದ್ಯಾಲಯಕ್ಕಿದೆ.
ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡೇಟು; ಸಿಸಿಕ್ಯಾಮೆರಾದಲ್ಲಿ ಕೃತ್ಯ ಸೆರೆ
ಸಿಧು ಮೂಸೆವಾಲಾರ ಕೊನೆಯ ಹಾಡನ್ನ ಯೂಟ್ಯೂಬ್ ನಿಂದ ತೆಗೆದುಹಾಕಿರೋದೇಕೆ?
ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ; ತೀಸ್ತಾ ಸೆತಲ್ವಾಡ್ ಪರ ವಿಶ್ವಸಂಸ್ಥೆ ಅಧಿಕಾರಿ ದನಿ
“ರಾಷ್ಟ್ರೀಯ ಭದ್ರತೆಗೆ ಡ್ರಗ್ಸ್ ದೊಡ್ಡ ಸವಾಲು” : ಷಾ
ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ