Published
2 weeks agoon
ಹೊಸದಿಲ್ಲಿ: ಜೂನ್ 23 (ಯು.ಎನ್.ಐ.) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹೊಸ ಕ್ಯಾಂಪಸ್, ‘ವಾಣಿಜ್ಯ ಭವನ’ ಮತ್ತು NIRYAT (ನಿರ್ಯಾತ್) ಪೋರ್ಟಲ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕೂಡ ಉಪಸ್ಥಿತರಿದ್ದರು.
ಈ ವೇಳೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, “ಈ ಎರಡೂ ಯೋಜನೆಗಳ ಗುರಿ ಸರ್ಕಾರಿ ಕೆಲಸಗಳನ್ನು ತ್ವರಿತಗೊಳಿಸುವುದಾಗಿದೆ. ಸರ್ಕಾರದ ಯೋಜನೆಗಳು ವರ್ಷಗಟ್ಟಲೆ ವಿಳಂಬವಾಗಬಾರದು, ನಿಗದಿತ ಸಮಯಕ್ಕೆ ಪೂರ್ಣಗೊಳ್ಳಬೇಕು. ಸರ್ಕಾರದ ಯೋಜನೆಗಳು ಗುರಿ ತಲುಪಿದಾಗ ಮಾತ್ರ ದೇಶದ ತೆರಿಗೆದಾರರಿಗೆ ಗೌರವ ನೀಡಿದಂತೆ ಎಂದು ಹೇಳಿದರು. ಈಗ ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ರೂಪದಲ್ಲಿ ಆಧುನಿಕ ವೇದಿಕೆಯನ್ನು ನಾವು ಹೊಂದಿದ್ದೇವೆ ಎಂದು ಪ್ರಧಾನಿಗಳು ಇದೇ ವೇಳೆ ತಿಳಿಸಿದರು.
ವಾಣಿಜ್ಯ ಭವನವು ಈ ಅವಧಿಯಲ್ಲಿ ವಾಣಿಜ್ಯ ಕ್ಷೇತ್ರದಲ್ಲಿನ ನಮ್ಮ ಸಾಧನೆಗಳ ಸಂಕೇತವಾಗಿದೆ. ನನಗೆ ನೆನಪಿದೆ, ಅಡಿಪಾಯ ಹಾಕುವ ಸಮಯದಲ್ಲಿ, ಇನ್ನೋವೇಷನ್ ಹಾಗೂ ಜಾಗತಿಕ ಇನ್ನೋವೇಷನ್ ಸೂಚ್ಯಂಕದ ಸುಧಾರಣೆಯ ಅಗತ್ಯವನ್ನು ನಾನು ಒತ್ತಿಹೇಳಿದ್ದೆ. ಇಂದು ನಾವು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 46ನೇ ಸ್ಥಾನದಲ್ಲಿದ್ದು, ನಿರಂತರವಾಗಿ ಸುಧಾರಿಸುತ್ತಿದ್ದೇವೆ. ಇವೆರಡೂ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದ ನಮ್ಮ ಆಡಳಿತದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತಿವೆ. ಈ ಕಟ್ಟಡ ಉದ್ಘಾಟನೆ ವೇಳೆಗೆ ಅಂದರೆ ಸುಮಾರು 32 ಸಾವಿರಕ್ಕೂ ಹೆಚ್ಚು ಅನಾವಶ್ಯಕ ಅವ್ಯವಹಾರಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದರು.
ವಿಶ್ವ ಎದುರಿಸುತ್ತಿರುವ ಸವಾಲುಗಳ ನಡುವೆಯೂ 400 ಬಿಲಿಯನ್ ಡಾಲರ್ ಅಂದರೆ 30 ಲಕ್ಷ ಕೋಟಿ ರೂಪಾಯಿಗಳ ಸರಕು ರಫ್ತು ಮೈಲಿಗಲ್ಲನ್ನು ದಾಟಬೇಕು ಎಂದು ಕಳೆದ ವರ್ಷ ದೇಶ ನಿರ್ಧರಿಸಿತ್ತು. ಇದನ್ನೂ ದಾಟಿ 418 ಶತಕೋಟಿ ಡಾಲರ್ ಅಂದರೆ 31 ಲಕ್ಷ ಕೋಟಿ ರೂಪಾಯಿ ರಫ್ತು ಮಾಡಿ ಹೊಸ ದಾಖಲೆ ಮಾಡಿದ್ದೇವೆ ಎಂದು ಪ್ರಧಾನಿ ತಿಳಿಸಿದರು.
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ಬಂಧನ; ಜರ್ಮನಿ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಕೇಂದ್ರ
ಚೀನಾದ ಕಂಪನಿಗಳು ಭಾರತದ ಕಾನೂನು ಪಾಲಿಸಬೇಕು: ವಿದೇಶಾಂಗ ಸಚಿವಾಲಯ
ಶೀಘ್ರದಲ್ಲೇ ವಾಣಿಜ್ಯ ಹಾರಾಟ ನಡೆಸಲಿದೆ ‘ಆಕಾಶ ಏರ್’
ಫೋನ್ ಹಿಂತಿರುಗಿಸಲು ನಿರಾಕರಿಸಿದ್ದಕ್ಕೆ ಸ್ನೇಹಿತನ ಕೊಂದ ಪಾಪಿ
ಹಿಂದೂ ವ್ಯಕ್ತಿಯ ಅಂತಿಮ ವಿಧಿವಿಧಾನ ನೆರವೇರಿಸಿದ ಮುಸ್ಲಿಂ ಕುಟುಂಬ
ವಿವಾಹ ಜೀವನಕ್ಕೆ ಕಾಲಿರಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್