Connect with us


      




ದೇಶ

ದೇಶದ ಜನ ನಿರುದ್ಯೋಗ ಸಮಸ್ಯೆ ಎದುರಿಸಬೇಕಾಗಿಲ್ಲ, ಆದರೆ… ಮೋದಿ ಹೇಳಿದ್ದೇನು?

Lakshmi Vijaya

Published

on

ಅಹಮದಾಬಾದ್: ಏಪ್ರಿಲ್ 16 (ಯು.ಎನ್.ಐ.) ಮುಂದಿನ 25 ವರ್ಷಗಳವರೆಗೆ ಜನರು ಸ್ಥಳೀಯ ವಸ್ತುಗಳನ್ನು ಬಳಸಿದರೆ, ದೇಶವು ನಿರುದ್ಯೋಗ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಹನುಮಾನ್ ಜಯಂತಿಯ ಸಂದರ್ಭದಲ್ಲಿ ಗುಜರಾತ್‌ನ ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ವಿಡಿಯೋ ಲಿಂಕ್ ಮೂಲಕ ಅನಾವರಣಗೊಳಿಸಿದ ನಂತರ ಪ್ರಧಾನಿ ಮೋದಿ ರಾಷ್ಟ್ರದ ಜನತೆಯನ್ನುದ್ದೇಶಿಸಿ ಮಾತನಾಡಿದರು. ವೋಕಲ್ ಫಾರ್ ಲೋಕಲ್, ಆತ್ಮನಿರ್ಭರ್ ಯೋಜನೆಗಳನ್ನು ಪ್ರಸ್ತಾಪಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ “ಭಾರತವು ಇಂದು ಸ್ತಬ್ಧವಾಗಿ ಉಳಿಯಲು ಸಾಧ್ಯವಿಲ್ಲ. ನಾವು ಎಚ್ಚರವಾಗಿರಲಿ ಅಥವಾ ನಿದ್ರಿಸುತ್ತಿರಲಿ, ನಾವು ಇರುವಲ್ಲಿಯೇ ಇರಲು ಸಾಧ್ಯವಿಲ್ಲ. ಪ್ರಸ್ತುತ ಇಡೀ ಜಗತ್ತೇ ಸ್ವಾವಲಂಬಿಯಾಗುವುದು ಹೇಗೆ ಎಂದು ಯೋಚಿಸುತ್ತಿದೆ.” ಎಂದು ಪ್ರಧಾನಿ ಮೋದಿ ಹೇಳಿದರು.

“ದೇಶದ ಸಂತರು ಜನರ ಬಳಿಗೆ ಹೋಗಿ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಪ್ರೇರೇಪಿಸುವಂತೆ ನಾನು ಅವರಲ್ಲಿ ವಿನಂತಿಸುತ್ತೇನೆ. ಸ್ಥಳೀಯ ವಸ್ತುಗಳನ್ನ ಕೊಂಡರೆ ಹೆಚ್ಚಿನ ಜನರಿಗೆ ಉದ್ಯೋಗ ಸಿಗುತ್ತದೆ ಎಂದರು.

“ನಾವು ವಿದೇಶಿ ನಿರ್ಮಿತ ವಸ್ತುಗಳನ್ನು ಇಷ್ಟಪಡಬಹುದು, ಆದರೆ ಈ ವಸ್ತುಗಳು ನಮ್ಮ ಜನರ ಕಠಿಣ ಪರಿಶ್ರಮದ ಭಾವನೆಯನ್ನು ಹೊಂದಿಲ್ಲ, ನಮ್ಮ ತಾಯಿ ಭೂಮಿಯ ಪರಿಮಳವನ್ನು ಹೊಂದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದರು. ಮುಂದಿನ 25 ವರ್ಷಗಳಲ್ಲಿ ನಾವು ಸ್ಥಳೀಯ ಉತ್ಪನ್ನಗಳನ್ನ ಬಳಸಿದರೆ ನಮ್ಮ ಜನರಿಗೆ ನಿರುದ್ಯೋಗ ಇರುವುದಿಲ್ಲ ಎಂದರು

Share