Connect with us


      
ದೇಶ

ಪ್ರಧಾನಿ ಮೋದಿ ಭದ್ರತಾ ಲೋಪ ‘ದೊಡ್ಡ ನಾಟಕ’: ನವಜೋತ್ ಸಿಂಗ್ ಸಿಧು

Vanitha Jain

Published

on

ಬರ್ನಾಲಾ: ಜನೆವರಿ 06 (ಯು.ಎನ್.ಐ) ಪಂಜಾಬಿನಲ್ಲಿ ಸಂಭವಿಸಿದ ಪ್ರಧಾನಿ ಮೋದಿ ಭದ್ರತಾ ಲೋಪ ವಿಚಾರವನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಿರಾಕರಿಸಿದ್ದು, ಇದೊಂದು ದೊಡ್ಡ ನಾಟಕ ಎಂದು ಕಿಡಿಕಾರಿದ್ದಾರೆ.

ಬರ್ನಾಲಾದ ದನಾ ಮಂಡಿಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸಿಧು, ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಮತೆ ಒತ್ತಾಯಿಸಿ ರೈತರು ಸತತ ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ದೆಹಲಿಯ ಗಡಿಯಲ್ಲಿ ಕಾಯುತ್ತಿದ್ದರು. ಆದರೆ ಅವರು ಯಾರೂ ಗಲಾಟೆ ಮಾಡಲಿಲ್ಲ ಎಂದು ಪ್ರಧಾನಿ ಮೋದಿಗೆ ನೆನಪಿಸಿದರು.

ಪ್ರಧಾನ ಮಂತ್ರಿಯವರ ಭದ್ರತಾ ಪಡೆ ಫಿರೋಜ್‍ಪುರಕ್ಕೆ ಹೋಗುವ ಮಾರ್ಗದಲ್ಲಿ ಬಟಿಂಡಾದ ಮೇಲ್ಸೇತುವೆಯೊಂದರಲ್ಲಿ 15-20 ನಿಮಿಷಗಳ ಕಾಲ ಸಿಕ್ಕಿಹಾಕಿಕೊಂಡಿತು, ಇದು ಪ್ರಮುಖ ಭದ್ರತಾ ಉಲ್ಲಂಘನೆಯಾಯಿತೇ? ಎಂದು ಪ್ರಶ್ನಿಸಿದ ಅವರು ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಭದ್ರತಾ ಲೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ, ರಸ್ತೆ ಮಾರ್ಗವಾಗಿ ಫಿರೋಜ್‍ಪುರಕ್ಕೆ ಹೋಗುತ್ತಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಪ್ರಧಾನಿ ಮೋದಿಯವರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಹೇಳಿದ್ದರು.

Share