Connect with us


      
ದೇಶ

108 ಅಡಿ ಎತ್ತರದ ಹನುಮಂತನ ಮೂರ್ತಿ ಉದ್ಘಾಟಿಸಲಿರುವ ಮೋದಿ

Lakshmi Vijaya

Published

on

ಗಾಂಧಿನಗರ: ಏಪ್ರಿಲ್ 15 (ಯು.ಎನ್.ಐ.) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 16 ರ ಶನಿವಾರದಂದು ಗುಜರಾತ್ನ ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಂತನ ವಿಗ್ರಹವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಹನುಮಾನ್ ಜಯಂತಿ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಮೂರ್ತಿ ಅನಾವರಣಗೊಳಿಸಲಿದ್ದಾರೆ ಎಂದು ಪಿಎಂ ಕಚೇರಿ ತಿಳಿಸಿದೆ.

ಹನುಮಂತನಿಗೆ ಸಂಬಂಧಿಸಿದ ನಾಲ್ಕು ಧಾಮ ಯೋಜನೆಯ ಭಾಗವಾಗಿ ದೇಶಾದ್ಯಂತ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾದ ನಾಲ್ಕು ಪ್ರತಿಮೆಗಳಲ್ಲಿ ಈ ಪ್ರತಿಮೆಯು ಎರಡನೆಯದು. ಪಶ್ಚಿಮ ಭಾಗದಲ್ಲಿನ ಈ ಪ್ರತಿಮೆಯನ್ನು ಮೊರ್ಬಿಯಲ್ಲಿರುವ ಬಾಪು ಕೇಶವಾನಂದರ ಆಶ್ರಮದಲ್ಲಿ ಸ್ಥಾಪಿಸಲಾಗಿದೆ.

ನಾಲ್ಕು ಧಾಮ ಯೋಜನೆಯ ಸರಣಿಯ ಮೊದಲ ಪ್ರತಿಮೆಯನ್ನು 2010 ರಲ್ಲಿ ಉತ್ತರದಲ್ಲಿ ಶಿಮ್ಲಾದಲ್ಲಿ ಸ್ಥಾಪಿಸಲಾಯಿತು. ದಕ್ಷಿಣದ ರಾಮೇಶ್ವರಂನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮೂರ್ತಿಯ ಕೆಲಸವನ್ನು ಪ್ರಾರಂಭಿಸಲಾಗಿದೆ ಎಂದು PMO ತಿಳಿಸಿದೆ.

Share