Connect with us


      




ದೇಶ

ಕೇದಾರನಾಥ ದೇಗುಲದಲ್ಲಿ ಪ್ರಧಾನಿ ಮೋದಿ ಪೂಜೆ

pratham

Published

on

ನವದೆಹಲಿ, ಅ 29(ಯುಎನ್‌ ಐ)   ಪ್ರಧಾನಿ ನರೇಂದ್ರ ಮೋದಿ ಅವರು  ನವೆಂಬರ್ 5 ರಂದು   ಉತ್ತರಾಖಂಡದ ಸುಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ  ತೆರಳಿ  ಪೂಜೆ ಸಲ್ಲಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಗುರುವಾರ ತಿಳಿಸಿದೆ.

ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ     ಪುನರ್ ನಿರ್ಮಾಣಗೊಂಡ   ಶ್ರೀ ಆದಿ ಶಂಕರಾಚಾರ್ಯರ   ಸಮಾಧಿ,   ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಬಳಿಕ 130 ಕೋಟಿ ವೆಚ್ಚದಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಲಿದ್ದು, 180 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  2013ರ ಪ್ರವಾಹದಲ್ಲಿ ಆದಿ ಶಂಕರಾಚಾರ್ಯರ ಸಮಾಧಿ ನಾಶವಾಗಿತ್ತು ಎಂದು ಪಿಎಂಓ ಹೇಳಿದೆ.

Share