Connect with us


      
ರಾಜಕೀಯ

ಪ್ರಧಾನಿ ಮೋದಿ ಅವರದ್ದು ‘ಕೊನೆ ಕ್ಷಣದ ನಿರ್ಧಾರ’: ಸಿಎಂ ಚನ್ನಿ ಪ್ರತಿಕ್ರಿಯೆ

Vanitha Jain

Published

on

ಚಂಡಿಗಡ: ಜನೆವರಿ 05(ಯು.ಎನ್.ಐ.) ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಹೇಳಿರುವ ಕೇಂದ್ರ ಸಚಿವಾಲಯದ ಹೇಳಿಕೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್  ಚನ್ನಿ ಪ್ರತಿಕ್ರಿಯಿಸಿದ್ದು, ಇದನ್ನು ನಿರಾಕರಿಸಿದ್ದಾರೆ.

ಪಂಜಾಬಿನಲ್ಲಿ ರಸ್ತೆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವೇಳೆ ಪಂಜಾಬಿನ ಫ್ಮೈ ಓವರ್‍ನಲ್ಲಿ ಸಿಲುಕಿ ಫಿರೋಜ್‍ಪುರ ರ್ಯಾಲಿಗೆ ಹೋಗುವುದು ರದ್ದಾಯಿತು. ಇದಕ್ಕೆ ಕೇಂದ್ರ ಸಚಿವಾಲಯ ಇದು ದೊಡ್ಡ ಲೋಪ ಎಂದು ಹೇಳಿ ಕಾರಣವನ್ನು ನೀಡುವಂತೆ ಕೇಳಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಚರಣ್ ಜಿತ್ ಸಿಂಗ್ ಚನ್ನಿ, ಬಟಿಂಡಾದಿಂದ ಫಿರೋಜ್‍ಪುರಕ್ಕೆ ರಸ್ತೆ ಮೂಲಕ ಪ್ರಯಾಣಿಸುವ ನಿರ್ಧಾರ ಪ್ರಧಾನಿಯವರ ಕೊನೆಯ ಕ್ಷಣದ ನಿರ್ಧಾರ ಎಂದು ಅವರು ಹೇಳಿದರು.

“ಆರಂಭದಲ್ಲಿ ಪ್ರಧಾನಿ ಮೋದಿ ವಿಮಾನದಲ್ಲಿ ಪ್ರಯಾಣಿಸಬೇಕಾಗಿತ್ತು, ಆದರೆ ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಾಗಿದೆ. ರಾಜಕೀಯ ಕಾರಣಗಳಿಗಾಗಿ ಬಿಜೆಪಿ ಪಂಜಾಬ್ ಸರ್ಕಾರವನ್ನು ದೂಷಿಸುತ್ತಿದೆ ಎಂದು ಚನ್ನಿ ಆರೋಪಿಸಿದ್ದಾರೆ.

ಪಂಜಾಬಿನಲ್ಲಿ ನಡೆದ ಈ ಘಟನೆಯಿಂದ ಮುಖ್ಯಮಂತ್ರಿ ಚನ್ನಿ ಬಿಜೆಪಿ ಮುಖಂಡರ ಕೆಮಗಣ್ಣಿಗೆ ಗುರಿಯಾಗಿದ್ದು, ಬಿಎಜಪಿ ಮುಖಂಡರು ಅವರನ್ನು ದೂಷಿಸಲು ಪ್ರಾರಂಭಿಸಿದ್ದಾರೆ.

Share