Connect with us


      
ದೇಶ

ಮೋದಿ ಭದ್ರತಾ ಲೋಪ: ಮೋದಿ ಚಾಪರ್ ಎಲ್ಲಾ ಋತುಮಾನಗಳಲ್ಲೂ ಹಾರಲು ಯೋಗ್ಯ

Vanitha Jain

Published

on

ನವದೆಹಲಿ: ಜನೆವರಿ 06 (ಯು.ಎನ್.ಐ.) ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪವು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಜೆಪಿ ಎಷ್ಟೇ ಆರೋಪ ಮಾಡಿದರೂ ಪಂಜಾಬ್ ಕಾಂಗ್ರೆಸ್ ಸರ್ಕಾರ ಎಲ್ಲಾ ಆರೋಪಗಳನ್ನು ತಳ್ಳಿಹಾಕುತ್ತಲೇ ಇದೆ.

ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಚಾಪರ್ ಎಲ್ಲಾ ಋತುಮಾನಗಳಲ್ಲೂ ಹಾರಲು ಯೋಗ್ಯವಾದುದಾಗಿದೆ ಎಂದು ಹೇಳಿದ್ದಾರೆ.

ಸರ್ವಋತುಮಾನಗಳಿಗೂ ಒಗ್ಗಿಕೊಳ್ಳುವ ಹಾರುವ ಹೆಲಿಕಾಪ್ಟರ್ ಬಿಟ್ಟು ಪ್ರಧಾನಿ ಮೋದಿ ಫಿರೋಜ್‍ಪುರ ಕಾರ್ಯಕ್ರಮಕ್ಕೆ ತಲುಪಲು ರಸ್ತೆ ಮಾರ್ಗ ಅನುಸರಿಸಿದ್ದಾರೆ. ಬಳಸದಂತೆ ಅವರೇ ನಿರ್ಧರಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪಂಜಾಬ್ ಪ್ರದೇಶವು ಗುಡ್ಡಗಾಡು ಪ್ರದೇಶವೂ ಅಲ್ಲ ಎಂದು ಸಮರ್ಥನೆ ನೀಡಿದ್ದಾರೆ.

ಭದ್ರತಾ ಲೋಪ ಸಂಬಂಧ ಮೋದಿ ಅವರು ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ದಾಳಿಗಳು ಮುಂದುವರಿದಿದೆ.

Share