Connect with us


      
ದೇಶ

ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟನೆಗೆ ಕ್ಷಣಗಣನೆ…

Vidyashree S

Published

on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಕ್ಷೇತ್ರವಾದ ವಾರಾಣಸಿಯಲ್ಲಿ ಬಹುನಿರೀಕ್ಷಿತ ಕಾಶಿ ವಿಶ್ವನಾಥ ಕಾರಿಡಾರ್‌ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಐತಿಹಾಸಿಕ ಕಾಶಿ ವಿಶ್ವನಾಥ ದೇಗುಲ ಮತ್ತು ಪ್ರಮುಖ ದಶಾಶ್ವಮೇದ ಘಾಟ್‌ ಬಳಿ ₹339 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಅವರು ಮಧ್ಯಾಹ್ನ 1 ಗಂಟೆಗೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಯೋಜನೆಯ ಮೊದಲ ಹಂತದಲ್ಲಿ ಇಪ್ಪತ್ಮೂರು ಕಟ್ಟಡ ಉದ್ಘಾಟನೆಯಾಗಲಿದೆ.

ಪ್ರಧಾನಿ ಮೋದಿ ಅವರು ಮೊದಲು ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕಾಂತ್‌ ಮಿಶ್ರಾ ಅವರ ನೆರವಿನೊಂದಿಗೆ ಅವರು ಗರ್ಭಗುಡಿಯ ಒಳಗೆ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಈ ದೇಗುಲ 1780ರಲ್ಲಿ ಮಹಾರಾಣಿ ಅಹಿಲ್ಯಾಬಾಯಿ ಹೋಳ್ಕರ್‌ ಅವಧಿಯಲ್ಲಿ ಪುನರ್‌ನಿರ್ಮಾಣಗೊಂಡಿತ್ತು. ಕಾಶಿ ವಿಶ್ವನಾಥ ದೇಗುಲ ಟ್ರಸ್ಟ್‌ನ ವೆಬ್‌ಸೈಟ್‌ ಪ್ರಕಾರ, ಈ ಧಾರ್ಮಿಕ ತಾಣವನ್ನು  “ಚಿನ್ನದ ದೇವಸ್ಥಾನ” ಎಂದೂ ಹೇಳಲಾಗಿದೆ.

ವಾರಾಣಸಿಯ ಪ್ರತಿ ಮೂಲೆ ಮೂಲೆಯಲ್ಲಿ ಬೆಳಕಿನ ರಂಗು ಕಂಗೊಳಿಸಲಾಗಿದೆ. ಸಾಧು- ಸಂತರು, ಗಣ್ಯರು ಸೇರಿದಂತೆ ಸಾವಿರಾರು ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು,ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು. ದೇವಾಲಯದ ಸುತ್ತ ಕ್ಯಾಮೆರಾ, ಸ್ಯಾಟ್‌ಲೈನ್‌ ಅಪ್‌ಲಿಂಕ್‌ ವ್ಯಾನ್‌, ಜಿಮ್ಮಿ ಜಿಮ್ಸ್‌, ರೇಡಿಯೊ ಫ್ರಿಕ್ವೆನ್ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

Share