Connect with us


      




ಕರ್ನಾಟಕ

ಪೊಲೀಸರಿಗೆಶುಚಿ ರುಚಿ ಆಹಾರ  ವ್ಯವಸ್ಥೆ ಆಗಬೇಕು: ಗೃಹ ಸಚಿವ 

Kumara Raitha

Published

on

ಬೆಳಗಾವಿ: (ಸುವರ್ಣ ವಿಧಾನಸೌಧ)  ಡಿಸೆಂಬರ್ ೧೫ (ಯು.ಎನ್.ಐ.)  ಗೃಹ ಸಚಿವ  ಆರಗ ಜ್ಞಾನೇಂದ್ರ ಅವರು ಇಂದು ಬೆಳಗಾವಿ ನಗರದಲ್ಲಿ ಅಧಿವೇಶನ ಸಂದರ್ಭದಲ್ಲಿ ಬಂದೋಬಸ್ತ್ ಗೆ ನಿಯೋಜಿತವಾಗಿರುವ ಪೊಲೀಸ್ ಸಿಬ್ಬಂದಿಗೆ ಮಾಡಲಾಗಿರುವ ವಸತಿ ಹಾಗೂ ಇತರ ಸೌಲಭ್ಯಗಳನ್ನು  ಪರಿಶೀಲಿಸಿದರು.

ಪೊಲೀಸ್ ಸಿಬ್ಬಂದಿಗಳ ಸಲುವಾಗಿ ಮಾಡಿರುವ  ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು ಹಾಗೂ ಪಾಕಶಾಲೆ ಸಿಬ್ಬಂದಿಗಳನ್ನು ಮಾತನಾಡಿಸಿ, ಶುಚಿ ರುಚಿ ಆಹಾರ ಒದಗಿಸಬೇಕು ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಬಾರಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ, ಬಂದೋಬಸ್ತ್ ವ್ಯವಸ್ಥೆ ನೋಡಿಕೊಳ್ಳಲು ಬಂದ ಸುಮಾರು ಐದು ಸಾವಿರ ಪೊಲೀಸ್ ಸಿಬ್ಬಂದಿಗಳಿಗೆ ಒಂದೇ ಪ್ರದೇಶದಲ್ಲಿ, ಅತ್ಯಾಧುನಿಕ ವಸತಿ, ಶೌಚಾಲಯ ಹಾಗೂ ಊಟ ಉಪಚಾರ ವ್ಯವಸ್ಥೆ ಮಾಡಲಾಗಿದೆ. ಅವರುಗಳಿಗೆ ತಂಗಲು, ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ವಿಶೇಷವಾದ ಟೌನ್ ಶಿಪ್ ಅನ್ನು ಬೆಳಗಾವಿ ನಗರದ ಹೊರಭಾಗದಲ್ಲಿ ನಿರ್ಮಿಸಲಾಗಿದೆ.

Share