Connect with us


      




ಅಪರಾಧ

ಉದ್ಯಮಿ ಅಪಹರಣ ಪ್ರಕರಣ ; ಪೊಲೀಸ್ ಇನ್ಸ್‌ಪೆಕ್ಟರ್ ಬಂಧನ !

Kumara Raitha

Published

on

ಚೆನ್ನೈ: ಎರಡು ವರ್ಷಗಳ ಹಿಂದೆ ಉದ್ಯಮಿಯೊಬ್ಬರನ್ನು ಅಪಹರಿಸಿ ಅಕ್ರಮವಾಗಿ ಬಂಧಿಸಿ ಅವರ ಆಸ್ತಿಗಳನ್ನು ಸುಲಿಗೆ ಮಾಡಲು ಇತರ ಇಬ್ಬರಿಗೆ ಸಹಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಸರವಣನ್ ಅವರನ್ನು‌ ತಮಿಳುನಾಡು ಸಿಬಿ-ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿ-ಸಿಐಡಿ  ತಂಡದವರು ಎಂಟು ತಿಂಗಳ ಹಿಂದೆ  ತನಿಖೆಯನ್ನು ಪ್ರಾರಂಭಿಸಿದ್ದರು. ಈಗಾಗಲೇ  ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಜನರನ್ನು ಬಂಧಿಸಲಾಗಿದೆ.
ಶ್ರೀಕಂದನ್ ಅಲಿಯಾಸ್ ಕೋಡಂಬಾಕ್ಕಂ ಶ್ರೀ, ವೆಂಕಟ ಶಿವನಾಗಕುಮಾರ್, ಧನಪಾಲ್, ಸೌಕತ್ ಅಲಿ, ನಂದಕುಮಾರ್ ಮತ್ತು ಸರವಣಕುಮಾರ್  ಬಂಧಿತ ಆರೋಪಿಗಳು.

ಇನ್ಸ್ ಪೆಕ್ಟರ್ ಸರವಣನ್ ಅವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಂಧಿತ ಏಳು ಮಂದಿಯಲ್ಲಿ ಕನಿಷ್ಠ 3 ಆರೋಪಿಗಳು ಸಹಾಯಕ ಪೊಲೀಸ್ ಕಮಿಷನರ್ ಆಗಿರುವ ಶಿವಕುಮಾರ್ ಅವರಿಗೆ ಆಶ್ರಯ ಮತ್ತು ಸಹಾಯ ಮಾಡಿದ ಆರೋಪವನ್ನು ಹೊಂದಿದ್ದರು, ಅವರು ಇನ್ನೂ ಪತ್ತೆಯಾಗಿಲ್ಲ.

ಉದ್ಯಮಿ ರಾಜೇಶ್ ನೀಡಿದ ದೂರಿನ ಮೇರೆಗೆ ವೆಂಕಟಶಿವ ಜ್ಞಾನಕುಮಾರ್, ತರುಣ್ ಕೃಷ್ಣಪ್ರಸಾದ್, ಶ್ರೀನಿವಾಸರಾವ್, ಶ್ರೀ ಕಾಂಡನ್  ಕೋಡಂಬಾಕ್ಕಂ ಶ್ರೀ ಸೇರಿದಂತೆ ಶಿವಕುಮಾರ್, ಸರವಣನ್, ಪೊಲೀಸ್ ಇನ್ಸ್‌ಪೆಕ್ಟರ್ ಪಾಂಡ್ಯರಾಜನ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಜೋಸೆಫ್. ಗಿರಿ, ಜಯಕುಮಾರ್ ಇವರುಗಳು ನಗರದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ಉದ್ಯಮಿಯನ್ನು ಅಕ್ರಮವಾಗಿ ಬಂಧಿಸಿ ಬೆದರಿಸಿ ಆಸ್ತಿಗಳನ್ನು ಸುಲಿಗೆ ಮಾಡಿದ್ದರು. ತನ್ನ ಆಸ್ತಿಯನ್ನು ಆಂಧ್ರಪ್ರದೇಶದ ಶ್ರೀನಿವಾಸ ರಾವ್ ಮತ್ತು ತರುಣ್ ಕೃಷ್ಣಪ್ರಸಾದ್ ಅವರಿಗೆ ನೋಂದಣಿ ಮಾಡುವಂತೆ ಒತ್ತಾಯಿಸಿದ್ದರು ಎಂದು ಅರೋಪಿಸಲಾಗಿದೆ.

Share